ಹೆಂಡತಿ ಬೇರೋಬ್ಬನ ಜೊತೆ ಒಂದು ರಾತ್ರಿ ಕಳೆಯಲೇಬೇಕು! ಇಲ್ಲಿ ಜೀವಂತವಿದೆ ಈ ವಿಚಿತ್ರ ಪದ್ಧತಿ!
Namibia tribal community: ಈ ಸಮುದಾಯದಲ್ಲಿ ಮಹಿಳೆಯರು ಬೇರೊಬ್ಬನ ಜೊತೆ ಒಂದು ರಾತ್ರಿ ಕಳೆಯಲೇಬೇಕು. ಗಂಡನ ಒತ್ತಾಯದಿಂದ ಬರುವ ಅತಿಥಿಗಳ ಜೊತೆಗೆ ಲೈಂಗಿಕ ಸಂಭೋಗ ನಡೆಸಬೇಕು. ಇದು ಅಸೂಯೆಯನ್ನು ತೊಡೆದುಹಾಕುವ ಗುರಿಯನ್ನು ಹೊಂದಿರುವ ಪದ್ಧತಿಯಂತೆ.
Namibia tribal community tradition: ಪ್ರಪಂಚ ಎಷ್ಟೇ ತಾಂತ್ರಿಕವಾಗಿ ಮುಂದುವರಿದರೂ ಜನರು ಇಂದಿಗೂ ಕೆಲವು ಚಿತ್ರ-ವಿಚಿತ್ರ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಭಾರತವೂ ವಿಶ್ವದ ನಾನಾ ಭಾಗಗಳಲ್ಲಿ ಅನೇಕ ಸಂಪ್ರದಾಯ ಮತ್ತು ಪದ್ಧತಿಗಳು ಇಂದಿಗೂ ಚಾಲ್ತಿಯಲ್ಲಿವೆ. ಕೆಲವು ಪದ್ಧತಿ ಮತ್ತು ಸಂಪ್ರದಾಯಗಳನ್ನು ನೀವು ನಂಬುವುದು ಸಹ ಕಷ್ಟ. ಅಷ್ಟು ಚಿತ್ರ-ವಿಚಿತ್ರ ಸಂಪ್ರದಾಯಗಳು ದೇಶ-ಪ್ರಪಂಚದಲ್ಲಿ ಚಾಲ್ತಿಯಲ್ಲಿವೆ.
ನಮೀಬಿಯಾದ ಬುಡಕಟ್ಟು ಸಮುದಾಯವೊಂದು ಬಹಳ ಹಿಂದಿನಿಂದಲೂ ಒಂದು ಕೆಟ್ಟ ಪದ್ಧತಿಯನ್ನು ಆಚರಿಸಿಕೊಂಡು ಬರುತ್ತಿದೆ. ಆ ಬುಡಕಟ್ಟು ಸಮುದಾಯದ ಹೆಸರು ಹಿಂಬಾ. ಕೇವಲ 50 ಸಾವಿರ ಜನಸಂಖ್ಯೆ ಹೊಂದಿರುವ ಈ ಸಮುದಾಯವು, ನಮೀಬಿಯಾದ ಉತ್ತರ ಪ್ರದೇಶಲ್ಲಿ ನೆಲೆಸಿದೆ. ಈ ಬುಡಕಟ್ಟು ಜನಾಂಗವನ್ನು ಒಮುಹಿಂಬಾ ಅಥವಾ ಓವಹಿಂಬಾ ಅಂತಲೂ ಕರೆಯಲಾಗುತ್ತದೆ.
ಇದನ್ನೂ ಓದಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಿಜೆಪಿಗೆ ಭಾರಿ ಮುಖ ಭಂಗ..!
ಅಂದಹಾಗೆ ಈ ಸಮುದಾಯದವರು ತುಂಬಾ ಸ್ವಾವಲಂಬಿಗಳು. ಹೆಚ್ಚಿನ ಜನರು ಜಾನುವಾರನ್ನು ಸಾಕಿಕೊಂಡಿದ್ದು, ರೈತರಾಗಿ ಜೀವನ ನಡೆಸುತ್ತಿದ್ದಾರೆ. ತಮ್ಮದೇಯಾದ ಆಹಾರ ಮತ್ತು ಸಂಪನ್ಮೂಲ ಸಂಗ್ರಹಿಸುವ ಈ ಜನರು ತಮಗೆ ಬೇಕಾದ ಹಾಗೆ ಮನೆಯನ್ನೂ ನಿರ್ಮಾಣ ಮಾಡಿಕೊಳ್ಳುತ್ತಾರೆ. ʼಮುಕುರುʼ ಎಂದು ಕರೆಯಲ್ಪಡುವ ನಮೀಬಿಯಾದ ದೇವರನ್ನು ಇವರು ನಂಬುತ್ತಾರೆ. ತಮ್ಮ ನಂಬಿಕೆಗಳ ಪ್ರಕಾರ ಅವರ ಸಮುದಾಯದಲ್ಲಿ ಸಾವಿನ ನಂತರ ಸತ್ತ ವ್ಯಕ್ತಿಗಳು ದೇವಧೂತರಾಗುತ್ತಾರಂತೆ. ಹೀಗಾಗಿ ಅವರು ಪ್ರತಿಯೊಬ್ಬರನ್ನು ಪರಸ್ಪರ ಗೌರವಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾರೆ.
ಈ ಸಮುದಾಯದಲ್ಲಿ ಮಹಿಳೆಯರು ಬೇರೊಬ್ಬನ ಜೊತೆ ಒಂದು ರಾತ್ರಿ ಕಳೆಯಲೇಬೇಕು. ಗಂಡನ ಒತ್ತಾಯದಿಂದ ಬರುವ ಅತಿಥಿಗಳ ಜೊತೆಗೆ ಲೈಂಗಿಕ ಸಂಭೋಗ ನಡೆಸಬೇಕು. ಇದು ಅಸೂಯೆಯನ್ನು ತೊಡೆದುಹಾಕುವ ಗುರಿಯನ್ನು ಹೊಂದಿರುವ ಪದ್ಧತಿಯಂತೆ. ಒಬ್ಬ ಹಿಂಬಾ ಪುರುಷನು ತನ್ನ ಮನೆಗೆ ಹೀಗೆ ಬರುವ ಅತಿಥಿಗೆ ಈ ರೀತಿಯ ವಿಶೇಷ ಆತಿಥ್ಯ ನೀಡುವ ಮೂಲಕ ಕೃತಜ್ಞತೆ ತೋರಿಸುತ್ತಾನಂತೆ.
ಇದನ್ನೂ ಓದಿ: ನೋಟಾಗೆ ಬಿಟ್ಟು ಒಂದು ಲಕ್ಷಕ್ಕೂ ಅಧಿಕ ಮತ : ಯಾರ ಮೇಲೆ ಮತದಾರರ ಸಿಟ್ಟು ?
ಈ ಪದ್ಧತಿಯ ಪ್ರಕಾರ, ಹೆಂಡತಿಯ ಜೊತೆ ವಿಶೇಷ ಅತಿಥಿಗೆ ಒಂದು ರಾತ್ರಿ ಕಳೆಯಲು ಅವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಪತಿ ಮತ್ತೊಂದು ಕೋಣೆಯಲ್ಲಿ ಮಲಗುತ್ತಾನೆ. ಒಂದು ವೇಳೆ ಕೋಣೆ ಇಲ್ಲದಿದ್ರೆ ಪತಿ ಮನೆಯ ಹೊರಗಡೆ ಮಲಗುತ್ತಾನಂತೆ.
ಈ ಸಮುದಾಯದ ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ಮಾತನಾಡುವುದಿಲ್ಲ. ಸಾಮಾನ್ಯವಾಗಿ ಒಬ್ಬ ಪುರುಷನನ್ನು ಮದುವೆಯಾಗುತ್ತಾರೆ. ಈ ಸಮುದಾಯದ ಜನರು ಹೊಗೆ ಸ್ನಾನ ಮಾಡುತ್ತಾರಂತೆ. ಅಂದರೆ ಸುಗಂಧ ದ್ರವ್ಯ ಹಾಕಿರುವ ಬಿಸಿನೀರಿನ ಸ್ನಾನ ಮಾಡುತ್ತಾರಂತೆ. ಈ ಸಮುದಾಯದಲ್ಲಿ ಇನ್ನೂ ಅನೇಕ ಪದ್ಧತಿಗಳು ಇಂದಿಗೂ ಚಾಲ್ತಿಯಲ್ಲಿವೆಯಂತೆ. ನಿಮಗೆ ಆಶ್ಚರ್ಯವಾದರೂ ಇದು ನಿಜವಾಗಿಯೂ ಇಂದಿಗೂ ಚಾಲ್ತಿಯಲ್ಲಿರುವ ಸಂಪ್ರದಾಯವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.