ಇದು ಬರೀ ಮಳೆಯಲ್ಲ, ಮತ್ಸ್ಯ ಮಳೆ !ಮಳೆಯೊಂದಿಗೆ ಆಕಾಶದಿಂದ ಬಿತ್ತು ಸಾವಿರ ಸಾವಿರ ಮೀನು! ಮೀನ ಮಳೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆ
Fish Rain Video :ಮಳೆ ಅಂದರೆ ನೀರು.ಆದರೆ ನೀರಲ್ಲ ಮೀನು ಎಂದರೆ ಆಶ್ಚರ್ಯವಾಗಬಹುದು.ಆದರೆ ಈ ವಿಡಿಯೋ ನೋಡಿದರೆ ನೀವು ಕೂಡಾ ಹೇಳುತ್ತೀರಿ ಮಳೆ ಅಂದರೆ ನೀರಲ್ಲ ಮೀನು.
Fish Rain Video : ಅತಿಯಾದ ಬೇಸಿಗೆಯಿಂದ ನೀರಿನ ಹಾಹಾಕಾರ ಎದ್ದು ಮಳೆಗಾಗಿ ಪ್ರಾರ್ಥಿಸುತ್ತಿದ್ದ ನಡುವೆ,ರಾಜ್ಯದಲ್ಲಿ ಈ ಬಾರಿ ವರುಣ ಜೋರಾಗಿ ಅಬ್ಬರಿಸಿದ್ದಾನೆ. ಇನ್ನೂ ಮಳೆ ವಿಶ್ರಾಂತಿ ಕೊಡುವ ಹಾಗೆ ಕಾಣುತ್ತಿಲ್ಲ.ಇದೀಗ ಕಳೆದ ಎರಡು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮತ್ತೆ ಮಳೆ ಸುರಿಯುತ್ತಿದೆ.ಇನ್ನು ಸಾಮಾನ್ಯವಾಗಿ ಮಳೆ ಅನ್ನುವಾಗ ಕಣ್ಣ ಮುಂದೆ ಬರುವುದು ಧಾರಾಕಾರವಾಗಿ ಸುರಿಯುವ ನೀರು. ಹಾಗಾಗಿಯೇ ನೀರಿನ ಸಮಸ್ಯೆ ಆದಾಗಲೆಲ್ಲಾ ಮಳೆಗಾಗಿ ಪ್ರಾರ್ಥಿಸುತ್ತೇವೆ.
ಆದರೆ ಇಲ್ಲೊಂದು ಕಡೆ ನೀರಿನ ಮಳೆ ಅಲ್ಲ, ಮೀನಿನ ಮಳೆಯಾಗಿದೆ. ಹೌದು, ಮಳೆ ಬೀಳುತ್ತಿದ್ದ ಹಾಗೆ ಆಗಸದಿಂದ ರಾಶಿ ರಾಶಿ ಮೀನುಗಳು ನೆಲಕ್ಕೆ ಬಿದ್ದಿವೆ.ಇದನ್ನು ಮಳೆ ಅನ್ನುವುದಕ್ಕಿಂತ ಮತ್ಸ್ಯ ಮಳೆ ಅಂದರೆ ತಪ್ಪಲ್ಲ.ಈ ರೀತಿ ಮಳೆಯೊಂದಿಗೆ ಮೀನು ಬೀಳುತ್ತಿರುವುದನ್ನು ಕಂಡು ಜನರು ಕೂಡಾ ದಂಗಾಗಿದ್ದಾರೆ.
ಇದನ್ನೂ ಓದಿ : ಶೂಟಿಂಗ್ ವೇಳೆ ನನಗೂ ʼಆʼ ಅನುಭವ ಆಗಿದೆ: ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ ವೈರಲ್!
ಈ ಮತ್ಸ್ಯ ಮಳೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.ಮಳೆ ಬೀಳುವಾಗ ಜೊತೆಯಲ್ಲಿ ಮೀನುಗಳು ಕೂಡಾ ಮೇಲಿನಿಂದ ಬೀಳುವುದು ಸ್ಪಷ್ಟವಾಗಿ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗೆ ಮಳೆಯೊಂದಿಗೆ ಬೀಳುತ್ತಿರುವ ಮೀನು ಜೀವಂತವಾಗಿರುವ ಮೀನುಗಳೇ ಎನ್ನುವುದು ಇನ್ನೂ ವಿಶೇಷ. ಈ ರೀತಿ ಮೀನಿನ ಮಳೆಯಾಗುತ್ತಿರುವ ವೇಳೆ ಅಲ್ಲೇ ಇದ್ದ ವ್ಯಕ್ತಿ ವಿಡಿಯೋ ಮಾಡಿ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದಾರೆ.
nstablog9ja ಹೆಸರಿನ X ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : ಭೂಮಿ ಉಸಿರಾಡುವ ಅದ್ಭುತ ಕ್ಷಣ ಸೆರೆ.. ಮಿಸ್ ಮಾಡದೆ ಒಮ್ಮೆ ವಿಡಿಯೋ ನೋಡಿ
ಈ ವಿಡಿಯೋ ನೋಡಿದ ಮೇಲೆ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಮೀನಿನ ಮಳೆ ಹೇಗೆ ಸಾಧ್ಯ? ಎನ್ನುವುದು. ಮೀನಿನ ಮಳೆಯ ಹಿಂದೆಯೂ ಕಾರಣವಿದೆ.ಜೋರಾಗಿ ಬೀಸುವ ಸುಂಟರ ಗಾಳಿ ಸಮುದ್ರ, ನದಿ ಅಥವಾ ಯಾವುದೇ ರೀತಿಯ ಜಲಮೂಲಗಳನ್ನು ದಾಟಿ ಹೋಗುವಾಗ ನೀರಿನಲ್ಲಿದ್ದ ಮೀನು,ಕಪ್ಪೆಗಳು, ಆಮೆಗಳು ಮತ್ತು ಏಡಿಗಳನ್ನು ತನ್ನೊಂದಿಗೆ ಹೊತ್ತು ಸಾಗುತ್ತದೆ. ಸುಂಟರಗಾಳಿ ಬೀಸುವಾಗ ತನ್ನೆದುರಿಗೆ ಬರುವ ಎಲ್ಲಾ ವಸ್ತುಗಳನ್ನು ಹೊತ್ತು ಸಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಆಗಿದ್ದು ಕೂಡಾ ಇದೇ. ಸಮುದ್ರದಲ್ಲಿ ಎದ್ದ ಸುಂಟರಗಾಳಿ ತನ್ನೊಂದಿಗೆ ಜಲಚರಗಳನ್ನು ಹೊತ್ತೊಯ್ದಿದೆ. ಗಾಳಿಯ ತೀವ್ರತೆ ಕಡಿಮೆಯಾದಾಗ ಈ ಮೀನುಗಳು ಆಗಸದಿಂದ ಕೆಳಗೆ ಉದುರಿವೆ. ಇದು ನಮಗೆ ಮೀನಿನ ಮಳೆಯಂತೆ ಕಾಣುತ್ತದೆ.
ಈ ರೀತಿ ಮೀನಿನ ಮಳೆಯಾಗುತ್ತಿರುವುದು ಇದೇ ಮೊದಲಲ್ಲ.ಇಂಥಹ ಘಟನೆ ಹಿಂದೆಯೂ ಕೂಡಾ ಬಹಳ ಸಲ ಆಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಇರಾನಿನಲ್ಲಿ.ಇಲ್ಲಿ ಹಂಚಿಕೊಳ್ಳಲಾದ ವಿಡಿಯೋ ಇರಾನಿನ ಮತ್ಸ್ಯ ಮಳೆಯದ್ದು. ಇದು ಕೆಲವು ತಿಂಗಳುಗಳ ಹಿಂದಿನ ವಿಡಿಯೋ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.