Niharika Konidela In Thailand Forest: ಟಾಲಿವುಡ್ ನಟಿ, ನಾಗಬಾಬು ಪುತ್ರಿ, ಮೆಗಾ ಮನೆಮಗಳು ನಿಹಾರಿಕಾ ಕೊನಿಡೇಲಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ಯಾವಾಗಲೂ ಯಾವುದಾದರೊಂದು ಪ್ರವಾಸಕ್ಕೆ ಹೋಗುತ್ತಾರೆ. ಮೋಜು-ಮಸ್ತಿ ಮಾಡುತ್ತಾ, ಆ ಫೋಟೋಗಳನ್ನು ತನ್ನ ಫ್ಯಾನ್ಸ್‌ ಜೊತಗೆ ಶೇರ್ ಮಾಡುತ್ತಾರೆ. ಅಷ್ಟೇ ಅಲ್ಲದೆ ನಿಹಾರಿಕಾ ನಿಯಮಿತವಾಗಿ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದು, ಆದರೆ ಇತ್ತೀಚೆಗೆ ಈ ಮೆಗಾ ಮಗಳು ಥಾಯ್ಲೆಂಡ್‌ಗೆ ಹೋಗಿದ್ದರು.


COMMERCIAL BREAK
SCROLL TO CONTINUE READING

ನಟಿ ನಿಹಾರಿಕಾ ಚಾಯ್‌ನಲ್ಲಿರುವ ಆರ್ಕಿಡ್‌ ರೆಸಾರ್ಟ್‌ನಲ್ಲಿ ಸ್ಟೇ ಆದ ಬಳಿಕ ಜಂಗಲ್‌ ಟ್ರಿಪ್‌ಗೆ ತೆರಳಿದ್ದು, ಅಲ್ಲಿಂದ ಆನೆಗಳ ಜೊತೆ ಸಮಯ ಕಳೆದರು. ಈಕೆ ಸಂಪೂರ್ಣ ಪ್ರವಾಸದ ಎರಡು ವೀಡಿಯೊಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದನ್ನೂ ನೋಡುತ್ತಿರುವ ನೆಟಿಜನ್‌ಗಳು ಮೆಗಾ ಮಗಳು ಯಾಕೆ ಬದಲಾಗಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದಾರೆ. ನಿಹಾರಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಾಲಿಡೇ ಡೇ ಆಫ್ ಡ್ರೀಮ್ಸ್ ಶೀರ್ಷಿಕೆಯ ವೀಡಿಯೊವನ್ನು ಹಂಚಿಕೊಂಡಿದ್ದು, ಅದು ಸದ್ಯ ವೈರಲ್ ಆಗಿದೆ.



ಇದನ್ನೂ ಓದಿ: Shraddha Das: ಖ್ಯಾತ ಉದ್ಯಮಿಯೊಂದಿಗೆ ಡೇಟಿಂಗ್..‌ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ʼಕೋಟಿಗೊಬ್ಬ 3ʼ ನಟಿ!


ನಿಹಾರಿಕಾ ಕೊನಿಡೇಲಾ ವಿಡಿಯೋಗಳಲ್ಲಿ ಥೈಲ್ಯಾಂಡ್‌ನ ಅರಣ್ಯ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದು, ಕಾಡಿನಲ್ಲಿ ಅಲೆದಾಡುತ್ತಾ ಮೀನು ಹಿಡಿಯುತ್ತಿದ್ದರು. ಕಾಡಿನಲ್ಲಿ ಕಟ್ಟಿಗೆಯಲ್ಲಿ ಆಹಾರ ತಯಾರಿಸಿ ಕಾಡುಪ್ರಾಣಿಗಳ ಜೊತೆ ಸಮಯ ಕಳೆದರು. ಅಲ್ಲಿನ ಆನೆಗಳಿಗೆ ಆಹಾರ ನೀಡಿ ಜಲಪಾತಗಳಲ್ಲಿ ಸ್ನಾನ ಮಾಡಿದ ಸುಂದರ ನೆನಪುಗಳನ್ನು ಹಂಚಿಕೊಂಡರು. ಆದರೆ ಈ ವಿಡಿಯೋಗಳಲ್ಲಿ ನಿಹಾರಿಕಾ ಸಿಂಗಲ್ ಆಗಿರುವುದನ್ನು ನೋಡಿ ಎಲ್ಲವೂ ಬದಲಾಗಿದೆಯೇ ಎಂಬ ಅನುಮಾನ ನೆಟ್ಟಿಗರನ್ನು ಕಾಡುತ್ತಿದೆ.



ಟಾಲಿವುಡ್‌ ಬೆಡಗಿ ನಿಹಾರಿಕಾ ವೈಲ್ಡ್ ಲೈಫ್ ನೆನಪುಗಳ ವಿಡಿಯೋ ನೋಡಿದ ನೆಟ್ಟಿಗರು ನಟಿಗೆ ಪ್ರಕೃತಿ ಇಷ್ಟವಾಗಿದೆ ಎಂದು ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ನೀವು ಶ್ರೀಮಂತರಾಗಿರುವುದರಿಂದಲೇ ಇಷ್ಟೊಂದು ಜಾಲಿ ಜೀವನ ನಡೆಸುತ್ತಿದ್ದೀರಿ ಎಂದು ಇನ್ನು ಕೆಲವರು ಹೇಳಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಥೈಲ್ಯಾಂಡ್‌ಗೆ ಹೋದಾಗ, ಅಲ್ಲಿ ಬೀಚ್‌ಗಳು ಮತ್ತು ಥಾಯ್ ಮಸಾಜ್‌ ಮಾಡಿ ಚಿಲ್ ಮಾಡುತ್ತಾರೆ. ಆದರೆ ನಿಹಾರಿಕಾ ಈ ರೀತಿ ವನ್ಯಜೀವಿ ಸ್ಥಳಕ್ಕೆ ಭೇಟಿ ಕೊಟ್ಟು ಸಾಮಾನ್ಯ ಜೀವನ ನಡೆಸುತ್ತಿರುವುದನ್ನು ನೋಡಿದರೆ ಈ ನಟಿ ಸಿಂಗಲ್ ಆಗಿ ಉಳಿಯಲು ನಿರ್ಧಾರ ಮಾಡಿದ್ದಾರಾಂತ  ನೆಟ್ಟಿಗರು ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.