ನವದೆಹಲಿ: ಉತ್ತರ ಪ್ರದೇಶದಲ್ಲಿ ಪ್ರತಿದಿನ ಚಿತ್ರ-ವಿಚಿತ್ರ ಸುದ್ದಿಗಳು ವರದಿಯಾಗುತ್ತವೆ. ಆದರೆ ಈ ವಿಶೇಷ ಸುದ್ದಿಯ ಬಗ್ಗೆ ತಿಳಿದರೆ ನೀವು ಸಹ ಶಾಕ್ ಆಗಬಹುದು. ಉತ್ತರ ಪ್ರದೇಶದ ಮೀರತ್‌ನಲ್ಲಿ 3 ದಿನಗಳ ಅಖಿಲ ಭಾರತ ಕಿಸಾನ್ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಜಾತ್ರೆಯ ಮೊದಲ ದಿನವೇ ಕೋಣವೊಂದು ಜನರ ಗಮನ ಸೆಳೆದಿದೆ. ಅದು ಹೇಗೆ ಗೊತ್ತಾ..?


COMMERCIAL BREAK
SCROLL TO CONTINUE READING

10 ಕೋಟಿ ರೂ. ಮೌಲ್ಯದ ಕೋಣ!


ಪದ್ಮಶ್ರೀ ಪುರಸ್ಕೃತ ಹರ್ಯಾಣದ ರೈತ ನರೇಂದ್ರ ಸಿಂಗ್ ಅವರು ತಮ್ಮ ಕೋಣದ ಜೊತೆ ಈ ಜಾತ್ರೆಗೆ ಆಗಮಿಸಿದ್ದರು. ಇವರ ಕೋಣ ಗೋಲು ಬರೋಬ್ಬರಿ 10 ಕೋಟಿ ರೂ. ಮೌಲ್ಯ ಹೊಂದಿದೆ. ಮುರ್ರಾ ಜಾತಿಗೆ ಸೇರಿದ ಈ ಕೋಣ ದಿನಕ್ಕೆ 26 ಲೀಟರ್ ಹಾಲು ಸೇವಿಸುತ್ತದೆಯಂತೆ. ಈ ಕೋಣದ ತೂಕ ಬರೋಬ್ಬರಿ 15 ಕ್ವಿಂಟಾಲ್ ಇದೆಯಂತೆ.


ಇದನ್ನೂ ಓದಿ: Viral News: ಭಾರತದ ಈ ಗ್ರಾಮದಲ್ಲಿ 32 ಎಕರೆ ಜಮೀನಿಗೆ ಮಂಗಗಳೇ ಒಡೆಯ! ಇದರ ಹಿಂದಿನ ಕಾರಣವೇನು?


ದುಬಾರಿ ಕೋಣಕ್ಕೆ ದುಬಾರಿ ಆಹಾರ


4 ವರ್ಷ 6 ತಿಂಗಳ ಈ ಕೋಣದ ಬೆಲೆ ಕೋಟ್ಯಂತರ ರೂ ಇದೆ. ಇಷ್ಟು ದುಬಾರಿ ಬೆಲೆಯ ಕೋಣದ ಬಗ್ಗೆ ಜನರು ಯೋಚಿಸಲೂ ಸಹ ಸಾಧ್ಯವಿಲ್ಲ. ಇದೇ ವೇಳೆ ಈ ಕೋಣದ ನಿರ್ವಹಣೆ ವೆಚ್ಚವೂ ಸಾಕಷ್ಟು ದುಬಾರಿಯಂತೆ. ಸ್ವತಃ ಈ ಕೋಣ ಸಾಕುವ ರೈತರು ಹೇಳುವಂತೆ ನಿತ್ಯ 1000 ರೂ. ಖರ್ಚಾಗುತ್ತದಂತೆ. ಈ ಕೋಣಕ್ಕೆ ಆಹಾರವಾಗಿ 30 ಕೆಜಿ ಒಣ ಹಸಿರು ಮೇವು, 7 ಕೆಜಿ ಗೋಧಿ ಮತ್ತು 50 ಗ್ರಾಂ ಖನಿಜ ಮಿಶ್ರಣದ ಆಹಾರ ನೀಡಲಾಗುತ್ತದೆ. ಈ ಕೋಣದ ವೀರ್ಯವು ಉತ್ತಮ ಪ್ರಮಾಣದ ಆದಾಯ ಗಳಿಸುತ್ತದಂತೆ. ಗೋಲು ಕೋಣದ ತಂದೆಯನ್ನು ಹರಿಯಾಣ ಸರ್ಕಾರಕ್ಕೆ ಉಡುಗೊರೆಯಾಗಿ ನೀಡಲಾಗಿದೆ. ಮುರ್ರಾ ಎಮ್ಮೆಯ ತಳಿಯನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ.


ಇತ್ತೀಚೆಗಷ್ಟೇ ಗೋಲುವಿನ ಅಜ್ಜ ಸಾವನ್ನಪ್ಪಿತ್ತು


ಖರೀದಿದಾರರು ಈ ಕೋಣದ ಬೆಲೆಯನ್ನು 10 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಆದರೆ ಇದನ್ನು ಮಾರಾಟ ಮಾಡಲು ರೈತ ನರೇಂದ್ರ ಸಿಂಗ್ ಒಪ್ಪಲಿಲ್ಲ. ಈ ಕೋಣದ ಆಳೆತ್ತರವನ್ನು ಕಂಡು ಜಾತ್ರೆಯಲ್ಲಿ ಸಾಕಷ್ಟು ಮಂದಿ ನೆರೆದಿದ್ದರು. ನರೇಂದ್ರ ಸಿಂಗ್ ಪ್ರಕಾರ ಈ ಎಮ್ಮೆಯ ಅಜ್ಜ ಇತ್ತೀಚೆಗಷ್ಟೇ ಸಾವನ್ನಪ್ಪಿತ್ತಂತೆ. ಹೀಗಾಗಿ ಅದರ ನೆನಪಿಗಾಗಿ ಈ ಗೋಲು ಕೋಣವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ರೈತ ನಿರ್ಧರಿಸಿದ್ದಾರಂತೆ.


ಇದನ್ನೂ ಓದಿ: WATCH : ಹನುಮಾನ್ ಚಾಲೀಸಾ ಪಠಿಸುವ ರಷ್ಯನ್ ಬಾಲಕಿ, ವಿಡಿಯೋ ವೈರಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ