ಸ್ವೀಡನ್: ಪ್ರಸ್ತುತ ವಿಶ್ವಾದ್ಯಂತ ಚಳಿಗಾಲದ ಋತು ನಡೆಯುತ್ತಿದ್ದು, ಈ ಸಮಯದಲ್ಲಿ ಅತಿ ಹೆಚ್ಚು ಚಳಿ ಇರುವ ಅನೇಕ ದೇಶಗಳು ಇವೆ. ಸ್ವೀಡಿಷ್ ಸಾಮಾಜಿಕ ಮಾಧ್ಯಮ ಇಂಫ್ಲೂಯೇನ್ಸರ್ ಎಲ್ವಿರಾ ಲುಂಡ್‌ಗ್ರೆನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು  ಹಂಚಿಕೊಂಡಿದ್ದಾಳೆ. ಆಕೆ ಹಂಚಿಕೊಂಡ ವಿಡಿಯೋ ನೋಡಿ ನೀವು ಕೂಡ ಚಳಿಯಿಂದ ಗಡಗಡ ನಡುಗುವಿರಿ. ಎಲ್ವಿರಾ ಅವರ ಈ ವೀಡಿಯೊ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಸಂಚಲನ ಮೂಡಿಸಿದೆ ಎಂದರೂ ತಪ್ಪಾಗಲಾರದು!


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ, ಎಲ್ವಿರಾ ಸುತ್ತಲೂ ಹಿಮವಿದೆ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಎಲ್ವಿರಾ ಯಾವುದೇ ಟೋಪಿ ಧರಿಸಿಲ್ಲ ಮತ್ತು ಆಕೆ ತನ್ನ ಒದ್ದೆ ಕೂದಲನ್ನು ಹಿಂದಕ್ಕೆ ತಳ್ಳಲು ಯತ್ನಿಸುತ್ತಿದ್ದಾಳೆ, ಆಕೆಯ  ಕೂದಲು ಹೆಪ್ಪುಗಟ್ಟಿವೆ. ಅವಳು ಅದನ್ನು ಸರಿಪಡಿಸಲು ಮತ್ತೆ ಮತ್ತೆ ಯತ್ನಿಸುತ್ತಿದ್ದಾಳೆ. ಆದರೆ ಕೂದಲು ಎಷ್ಟೊಂದು ಹೆಪ್ಪುಗಟ್ಟಿವೆ ಎಂದರೆ ಅವು ಆಕೆಯ ತಲೆಯ ಮೇಲೆ ಎದ್ದುನಿಲ್ಲುತ್ತಿವೆ ಎಂಬಂತೆ ತೋರುತ್ತಿದೆ. ಎಲ್ವಿರಾ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.


ಮೈನಸ್ 30 ಡಿಗ್ರಿ ತಾಪಮಾನದಲ್ಲಿ ಈ ಸ್ಥಿತಿ ಸಂಭವಿಸಿದೆ
ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ @exploring.human ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ಈ ಕುರಿತು ಶೀರ್ಷಿಕೆ ಬರೆದುಕೊಂಡ ಎಲ್ವಿರಾ, 'ತಾಪಮಾನವು -30 ° C ತಲುಪಿದೆ ಮತ್ತು ನಾನು ಒಂದು ಸಣ್ಣ ಪ್ರಯೋಗವನ್ನು ಮಾಡಬೇಕಾಗಿತ್ತು' ಎಂದಿದ್ದಾಳೆ. ಈ ವೀಡಿಯೊ ಉತ್ತರ ಸ್ವೀಡನ್‌ನಿಂದ ಬಂದಿದೆ. ಇದಕ್ಕೂ ಮುಂಚೆಯೇ, ನೀವು ಕಾರಿನ ಗೇಟ್‌ನಿಂದ ಹೆಪ್ಪುಗಟ್ಟಿದ ಸರೋವರದವರೆಗೆ ನೋಡಿರುವ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.


ಇದನ್ನೂ ಓದಿ-Viral Video: ರೈಲಿನಲ್ಲಿ ಚಹಾ ತಯಾರಿಸುವ ವಿಧಾನ ನೋಡಿದ್ರೆ ನೀವು ನಿಮ್ಮ ಲೈಫಲ್ಲೆ ರೈಲಿನಲ್ಲಿ 'ಚಾಯ್' ಕುಡಿಯಲ್ಲ!


ಪೋಸ್ಟ್ ವೈರಲ್ ಆಗುತ್ತಿದೆ
ಬುಧವಾರ ಸ್ವೀಡನ್‌ನಲ್ಲಿ ತಾಪಮಾನವು -43 ಡಿಗ್ರಿಗಳಷ್ಟು ದಾಖಲಾಗಿದೆ. 1999 ರಿಂದ ಮೊದಲ ಬಾರಿಗೆ ಸ್ವೀಡನ್‌ನಲ್ಲಿ ಜನವರಿಯಲ್ಲಿ ಇಂತಹ ತಾಪಮಾನ ದಾಖಲಾಗಿದೆ. ಎಲ್ವಿರಾ ಅವರ ಈ ಪೋಸ್ಟ್ ಅನ್ನು ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಜನರು ಕೂಡ ಈ ಬಗ್ಗೆ ಭಾರೀ ಕಾಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ-Viral Video: ಹಾಡುಹಗಲೇ ಸ್ಟೇಟ್ ಬ್ಯಾಂಕ್ ಪ್ರವೇಶಿಸಿದ ಗೂಳಿ... ಮುಂದೆನಾಯ್ತು ತಿಳಿಯಲು ಈ ವಿಡಿಯೋ ನೋಡಿ!


ಸಾಕಷ್ಟು ಕಾಮೆಂಟ್ ಬರುತ್ತಿವೆ
ಎಲ್ವಿರಾ ಹಂಚಿಕೊಂಡ ವಿಡಿಯೋಗೇ ಪ್ರತಿಕ್ರಿಯಿಸಿದ ಓರ್ವ ಬಳಕೆದಾರ - ನೀವು ಒದ್ದೆಯಾದ ಕೂದಲಿನೊಂದಿಗೆ ಇಂತಹ ಚಳಿಯಲ್ಲಿ ಹೊರಹೋದರೆ, ಚಳಿಯಿಂದ ನಿಮ್ಮ ಪ್ರಾಣ ಹೋಗಬಹುದು ಎಂದು ನಿಮ್ಮ ತಾಯಿ ನಿಮಗೆ ಹೇಳಲಿಲ್ಲವೇ?' ಎಂದು ಪ್ರಶ್ನಿಸಿದ್ದಾನೆ. ಇನ್ನೊಬ್ಬ ಬಳಕೆದಾರರು - 'ಮರುದಿನ ನೀವು  ಅನಾರೋಗ್ಯಕ್ಕೆ ಒಳಗಾಗಲಿಲ್ಲವೇ? ಮೈನಸ್ 30 ಡಿಗ್ರಿಯಲ್ಲಿ ತುಂಬಾ ಹೊತ್ತು ನೀವು ಕ್ಯಾಪ್ ಅಥವಾ ಗ್ಲೌಸ್ ಧರಿಸಿಲ್ಲ' ಎಂದಿದ್ದಾರೆ.  ಮೂರನೇ ಬಳಕೆದಾರರು - ಅಂತಹ ತಾಪಮಾನದಲ್ಲಿ ಹೊರಗೆ ನಿಲ್ಲುವುದು ಹೇಗೆ ಎಂದು ನಾನು ಯಾವಾಗಲೂ ಯೋಚಿಸುತ್ತೇನೆ. ಅಷ್ಟಕ್ಕೂ ಈ ವೀಡಿಯೊದಲ್ಲಿ ನೀವು ಏನು ಹೇಳಲು ಬಯಸುತ್ತೀರುವಿರಿ?. ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ. ಎಂದಿದ್ದಾನೆ. 


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ