Social Media Viral Video: ಅನೇಕ ಬಾರಿ ನಾವು ನೋಡುವ ಕೆಲ ಸಂಗತಿಗಳ ಮೇಲೆ ನಮಗೆ ನಮ್ಬಿಕೆಯಾಗುವುದಿಲ್ಲ. ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹವು ಮಹಿಳೆಯೋರ್ವಳ ಮುಂದೆ ಸಂಪೂರ್ಣವಾಗಿ ನಿಸ್ಸಹಾಯಕನಾಗಿರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಹೌದು, ಅಂತಹ ಒಂದು ಅಪಾಯಕಾರಿ ಪ್ರಾಣಿಯೊಂದಿಗೆ ಈ ಮಹಿಳೆ ವರ್ತಿಸುತ್ತಿರುವ ರೀತಿ ತುಂಬಾ ಆಶ್ಚರ್ಯ ಹುಟ್ಟಿಸುವಂತಿದೆ, ಇನೂಂದೆಡೆ ಸಿಂಹ ಕಿರುಚಾಡುತ್ತಾ ಎಲ್ಲವನ್ನೂ ಎದುರಿಸುತ್ತಿದೆ. ಸಾಮಾಜಿಕ ಮಾಧ್ಯಮ ತಾಣ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಇಂತಹ ವಿಡಿಯೋ ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ
ವಿಡಿಯೋದಲ್ಲಿ ಮಹಿಳೆಯೊಬ್ಬರು ಕಾಡು ಪ್ರಾನಿಯೊಂದನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದಾರೆ. ಆ ಕಾಡು ಪ್ರಾಣಿ ಅಪಾಯಕಾರಿ ಸಿಂಹವಾಗಿದೆ ಎಂಬುದು ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಹಿಳೆ ಸಿಂಹವನ್ನು ತನ್ನ ತೋಳುಗಳಲ್ಲಿ ಗಟ್ಟಿಯಾಗಿ ಹಿಡಿದಿದ್ದಾಳೆ. ಮುಂದೆ ಏನಾಯ್ತು ತಿಲಿಯುವುದಕ್ಕು ಮುನ್ನ ನೀವು ಈ ವಿಡಿಯೋವನ್ನು ಒಮ್ಮೆ ನೋಡಿ,


Mann Ki Baat: ಕರ್ನಾಟಕದ ಜೇನುಕೃಷಿ ಮತ್ತು ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ


ಸಿಂಹ ಬಾಲ ಮುದುಡಿಕೊಂಡ ನಾಯಿಯಂತಾಗಿದೆ
ಈ ವಿಡಿಯೋದಲ್ಲಿ ಬಡಪಾಯಿ ಸಿಂಹವು ನನ್ನನ್ನು ಬಿಟ್ಟುಬಿಡಿ ಎಂದು ಮಹಿಳೆಯನ್ನು ಬೇಡಿಕೊಳ್ಳುವಂತೆ ಕಿರುಚಾಡುತ್ತಿದೆ. ಆದರೆ, ಮಹಿಳೆ ಮಾತ್ರ ವೇಗವಾಗಿ ಕಾರಿನ ಬಳಿಗೆ ಬಂದು ಸಿಂಹವನ್ನು ನೆಲದ ಮೇಲೆ ಬಿಡುತ್ತಾಳೆ. ಈ ವೀಡಿಯೋ ನೋಡಿದ ಜನರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೇವಲ 16 ಸೆಕೆಂಡ್ ಗಳ ಈ ಟ್ರೆಂಡಿಂಗ್ ವಿಡಿಯೋ ಎಲ್ಲರೂ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.


ಇದನ್ನೂ ಓದಿ-ಎನ್‌ಆರ್‌ಐ ಸೊಸೈಟಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌: ಹೊತ್ತಿ ಉರಿದ ಲಕ್ಷಾಂತರ ಮೌಲ್ಯದ ವಸ್ತು


ಭಾರಿ ವೈರಲ್ ಆಗುತ್ತಿರುವ ವಿಡಿಯೋ
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊವನ್ನು 3 ಮಿಲಿಯನ್‌ಗಿಂತಲೂ ಹೆಚ್ಚು ಜನರು (ಸಾಮಾಜಿಕ ಮಾಧ್ಯಮ ಬಳಕೆದಾರರು) ವೀಕ್ಷಿಸಿದ್ದಾರೆ. ಕೆಲವರು ಈ ವಿಡಿಯೋ ಬಗ್ಗೆ ತಮಾಷೆ ಮಾಡುತ್ತಿದ್ದಾರೆ, ಇನ್ನು ಕೆಲವರು ಪ್ರಾಣಿ ಹಿಂಸೆಯ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಪ್ರತಿಯೊಬ್ಬ ಭಾರತೀಯ ಪೋಷಕರು ತಮ್ಮ ಮಕ್ಕಳನ್ನು ಈ ರೀತಿ ಶಾಲೆಗೆ ಎಳೆದುಕೊಂಡು ಹೋಗುತ್ತಾರೆ ಎಂದು ಬಳಕೆದರರೊಬ್ಬರು ತನ್ನ ಪ್ರತಿಕ್ರಿಯೆ ನೀಡಿದ್ದಾರೆ. ಸಿಂಹ ತುಂಬಾ ನೋವನ್ನು ಅನುಭವಿಸುತ್ತಿದೆ ಎಂದು ಮತ್ತೋರ್ವ ಬಳಕೆದಾರ ಪ್ರತಿಕ್ರಿಯೆ ನೀಡಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.