ನವದೆಹಲಿ: ವಾಹನಗಳ ವೇಗವನ್ನು ತಡೆಯಲು ಸ್ಪೀಡ್ ಬ್ರೇಕರ್‌ಗಳನ್ನು ನಿರ್ಮಿಸಲಾಗುತ್ತದೆ. ಆದರೆ ಕೆಲವು ಸ್ಪೀಡ್ ಬ್ರೇಕರ್ ಗಳು ತುಂಬಾ ಅಪಾಯಕಾರಿಯಾಗಿದ್ದು, ಚಾಲಕರು ಅವುಗಳನ್ನು ದಾಟುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸ್ಪೀಡ್ ಬ್ರೇಕರ್ ದಾಟುವಾಗ ಇ-ರಿಕ್ಷಾ ಹೇಗೆ ಪಲ್ಟಿಯಾಗಿದೆ ಎಂಬುದನ್ನು ಇದರಲ್ಲಿ ನೀವು ನೋಡಬಹುದು. ಹೌದು, ಈ ವಿಡಿಯೋದಲ್ಲಿ ಇದ್ದಕ್ಕಿದ್ದಂತೆ ಚಾಲಕನ ಭಾಗ ಮೇಲಕ್ಕೆ ಏಳುತ್ತದೆ ಮತ್ತು ಪ್ರಯಾಣಿಕರು ಕುಳಿತ ರಿಕ್ಷಾ ಹಿಂಭಾಗ ಕೆಳಗಿಳಿಯುತ್ತದೆ. ಅಂದರೆ, ಇ-ರಿಕ್ಷಾ ಸಂಪೂರ್ಣವಾಗಿ ನೇರವಾಗಿ ನಿಲ್ಲುವುದನ್ನು ನೀವು ಗಮನಿಸಬಹುದು. ಈ ಕ್ಲಿಪ್ ಅನ್ನು ರಸ್ತೆ ಮೂಲಕ ಹಾದುಹೋಗುವ ಬೈಕ್ ಸವಾರರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅವರು ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದಾಗ, ಅದು ವೈರಲ್ ಆಗಿದೆ. ಈ ಕ್ಲಿಪ್ ನೋಡಿದ ನಂತರ, ಅನೇಕ ಜನರು ಇಂತಹ ಸ್ಪೀಡ್ ಬ್ರೇಕರ್‌ಗಳನ್ನು ತೆಗೆದುಹಾಕುವ ಕುರಿತು ಮಾತನಾಡಿದ್ದಾರೆ, ಆದರೆ ಅನೇಕರಿಗೆ ನಗು ತಡೆಯಲು ಸಾಧ್ಯವಾಗುತ್ತಿಲ್ಲ. (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-ವಿಡಿಯೋ ನೋಡಿ...! ಬಾಯ್ ಫ್ರೆಂಡ್ ಜೊತೆಗೆ ಹಟಕ್ಕೆ ಬಿದ್ದು ಪಂಜಾಗಿಳಿದ ಪೋರಿ, ನಂತರ ನಡೆದಿದ್ದು ಮಾತ್ರ ಶಾಕಿಂಗ್ ಆಗಿದೆ!


ಒಂದಲ್ಲ ಹಲವಾರು ಬಾರಿ ಜನರು ವಿಡಿಯೋವನ್ನು ವೀಕ್ಷಿಸುತ್ತಿದ್ದಾರೆ
ಈ ವೀಡಿಯೊವನ್ನು Instagram ಬಳಕೆದಾರರ @hussain.therider ಅವರು ಅಕ್ಟೋಬರ್ 29 ರಂದು ಪೋಸ್ಟ್ ಮಾಡಿದ್ದಾರೆ. ವಿಡಿಯೋಗೆ- ಹೆವಿ ಡ್ರೈವರ್.... ಎಂಬ ಶೀರ್ಷಿಕೆ ನೀಡಿದ್ದಾರೆ. ಇದುವರೆಗೆ ಈ ವೈರಲ್ ಇನ್‌ಸ್ಟಾಗ್ರಾಮ್ ರೀಲ್  8 ಲಕ್ಷ 53 ಸಾವಿರ ಲೈಕ್ಸ್ ಮತ್ತು 19.1 ಮಿಲಿಯನ್ (1 ಕೋಟಿ 91 ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹೆಚ್ಚಿನ ಸಂಖ್ಯೆಯ ಬಳಕೆದಾರರು ವಿಡಿಯೋ ಮೇಲೆ ಕಾಮೆಂಟ್ ಮಾಡಿದ್ದಾರೆ. 


ಇದನ್ನೂ ಓದಿ-Viral Video: ಯಾವುದೇ ಸುರಕ್ಷತೆ ಇಲ್ಲದೆ ಟ್ರಾನ್ಸ್ಫಾರ್ಮರ್ ಗೆ ತಂತಿ ಜೋಡಿಸಿದ ಹುಡುಗ, ನೋಡಿ ದಂಗಾದ ನೆಟ್ಟಿಗರು!


ಈ ಕುರಿತು ಬರೆದುಕೊಂಡ ಒಬ್ಬ ಬಳಕೆದಾರೆ- ಬಾಯ್ ಪುಕ್ಸಟ್ಟೆ ಕಂಟೆಂಟ್ ಸಿಕ್ತು ಎಂದಿದ್ದರೆ, ಅದರ ಶೀರ್ಷಿಕೆ ಹೆವಿ ಡ್ರೈವರ್ ಅಲ್ಲ , ಹೆವಿ ಸವಾರಿ ಆಗಿರಬೇಕಿತ್ತು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ನಾನು ವೀಡಿಯೊವನ್ನು ಐದು ಬಾರಿ ನೋಡಿದ್ದೇನೆ ಎಂದು ಇತರರು ಬರೆದಿದ್ದಾರೆ. ಈ ವೀಡಿಯೋ ನೋಡಿ ಜನ ನಗುತ್ತಿದ್ದರೂ ವಿಷಯ ಗಂಭೀರವಾಗಿದೆ. ವಿಡಿಯೋ ಕುರಿತು ಒಟ್ಟಾರೆಯಾಗಿ ನಿಮ್ಮ ಅನಿಸಿಕೆ ಎಂದು ಎಂಬುದನ್ನು ನೀವೂ ಕೂಡ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹೇಳಿ. 


ವಿಡಿಯೋ ನೋಡಿ..



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.