ರೈಲು ಚಲಿಸುವಾಗಲೇ ಹಳಿ ದಾಟಿದ ಪುಟ್ಟ ಬಾಲಕರು: ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
ಕೆನಡಾದ ಸಾರಿಗೆ ಕಂಪನಿ ಮೆಟ್ರೋಲಿಂಕ್ಸ್‌ನ ರೈಲು ಹಳಿಯಲ್ಲಿ ಚಲಿಸುತ್ತಿದ್ದಾಗ ಇಬ್ಬರು ಅಪರಿಚಿತ ಮಕ್ಕಳು ಅದೇ ಟ್ರ್ಯಾಕ್‌ನಲ್ಲಿ ಸಾಗುತ್ತಿರುತ್ತಾರೆ. ಒಬ್ಬ ಬಾಲಕ ರೈಲಿನ ಪಕ್ಕದಲ್ಲಿಯೇ ಓಡುತ್ತಿದ್ದು, ಇನ್ನೊಬ್ಬ ರೈಲಿನಿಂದ ಸ್ವಲ್ಪ ದೂರದಲ್ಲಿ ಓಡುತ್ತಿರುವುದು ಕಂಡುಬರುತ್ತದೆ. ವೀಡಿಯೋದಲ್ಲಿ ನಾವು ನೋಡಬಹುದಾದ ಮಕ್ಕಳ ಪೈಕಿ ಒಬ್ಬ ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದಾನೆ. ಇನ್ನು ಈ ಘಟನೆಯ ವಿಡಿಯೋವನ್ನು ರೈಲಿನ ಒಳಗಿನಿಂದ ಚಿತ್ರೀಕರಿಸಲಾಗಿದೆ.
Shocking Video: ಸಾಮಾಜಿಕ ಜಾಲತಾಣಗಳಲ್ಲಿ ಅಪಾಯಕಾರಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇಬ್ಬರು ಮಕ್ಕಳು ರೈಲು ಹಳಿಗಳ ಮೇಲೆ ಓಡುತ್ತಿರುವ ದೃಶ್ಯ ಕಂಡು ಬಂದಿದೆ. ಅಷ್ಟೇ ಅಲ್ಲ ಮಕ್ಕಳು ಓಡುತ್ತಿರುವ ಟ್ರ್ಯಾಕ್‌ನಲ್ಲಿಯೇ ರೈಲು ಚಲಿಸುತ್ತಿರುವ ದೃಶ್ಯ ಎಂಥವರನ್ನೂ ಶಾಕ್ ಆಗುವಂತೆ ಮಾಡುತ್ತದೆ. ಅನೇಕ ಇಂಟರ್ನೆಟ್ ಬಳಕೆದಾರರು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್‌ನಲ್ಲಿರುವ ಮೆಟ್ರೋಲಿನಕ್ಸ್ ಹೆಸರಿನ ಖಾತೆಯಲ್ಲಿ ಈ ವಿಡಿಯೊವನ್ನು ನೋಡಬಹುದು. ಕೆನಡಾದ ಟೊರೊಂಟೊದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ಕೊರೊನಾ 4ನೇ ಅಲೆ ಭೀತಿ: ದೇಶದಲ್ಲಿ ಒಂದೇ ದಿನ 3,712 ಹೊಸ ಪ್ರಕರಣ ದಾಖಲು
ಕೆನಡಾದ ಸಾರಿಗೆ ಕಂಪನಿ ಮೆಟ್ರೋಲಿಂಕ್ಸ್‌ನ ರೈಲು ಹಳಿಯಲ್ಲಿ ಚಲಿಸುತ್ತಿದ್ದಾಗ ಇಬ್ಬರು ಅಪರಿಚಿತ ಮಕ್ಕಳು ಅದೇ ಟ್ರ್ಯಾಕ್‌ನಲ್ಲಿ ಸಾಗುತ್ತಿರುತ್ತಾರೆ. ಒಬ್ಬ ಬಾಲಕ ರೈಲಿನ ಪಕ್ಕದಲ್ಲಿಯೇ ಓಡುತ್ತಿದ್ದು, ಇನ್ನೊಬ್ಬ ರೈಲಿನಿಂದ ಸ್ವಲ್ಪ ದೂರದಲ್ಲಿ ಓಡುತ್ತಿರುವುದು ಕಂಡುಬರುತ್ತದೆ. ವೀಡಿಯೋದಲ್ಲಿ ನಾವು ನೋಡಬಹುದಾದ ಮಕ್ಕಳ ಪೈಕಿ ಒಬ್ಬ ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದಾನೆ. ಇನ್ನು ಈ ಘಟನೆಯ ವಿಡಿಯೋವನ್ನು ರೈಲಿನ ಒಳಗಿನಿಂದ ಚಿತ್ರೀಕರಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸರಿಯಾದ ಸಮಯಕ್ಕೆ ಹಳಿಯಿಂದ ಬಾಲಕ ಓಡಿದ್ದ ಕಾರಣ ಆತನ ಪ್ರಾಣ ಉಳಿದಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ: ನನಗಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯನಿಗೂ RSS ಕಂಡರೆ ಭಯವಿದೆ: ಸಿದ್ದರಾಮಯ್ಯ
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಆದ ಬಳಿಕ 20,000ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಇಂತಹ ಸಾಹಸಗಳನ್ನು ಮಾಡುವ ಮಕ್ಕಳಲ್ಲಿ ಅರಿವಿನ ಕೊರತೆಯಿರುತ್ತದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಇನ್ನೂ ಕೆಲವರು ಇಂತಹ ಘಟನೆಗಳ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ