snake rain video: ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಬಂಧವು ತುಂಬಾ ಹಳೆಯದು. ಆದರೆ ಕೆಲವು ಪ್ರಾಣಿಗಳಿವೆ ಅವುಗಳನ್ನು ಕಂಡರೆ ಸಾಕು ಜನರು ಹೆದರುತ್ತಾರೆ. ಅದರಲ್ಲೀ ವಿಷಕಾರಿ ಜೀವಿಗಳು ಅತ್ಯಂತ ಅಪಾಯಕಾರಿ. ಹಾವುಗಳನ್ನು ನೋಡಿದ ತಕ್ಷಣ ಕೆಲವರು ಕಿರುಚುತ್ತಾ ಓಡುತ್ತಾರೆ. ಮನುಷ್ಯ ಹಾವುಗಳಿಂದ ದೂರವಿರಲು ಪ್ರಯತ್ನಿಸುತ್ತಾನೆ. ಆದರೆ ಹಾವಿನ ಮಳೆ ಆಕಾಶದಿಂದ ಬೀಳಲು ಪ್ರಾರಂಭಿಸಿದರೆ ಹೇಗಿರಬೇಡ ಹೇಳಿ? ಅದೂ ಜನನಿಬಿಡ ಪ್ರದೇಶದಲ್ಲಿ ಹಾವಿನ ಮಳೆ ಆಗಲು ಶುರುವಾದರೆ? ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಶೇರ್ ಆಗುತ್ತಿದೆ. ಇದರಲ್ಲಿ ಜನನಿಬಿಡ ರಸ್ತೆಯ ಮೇಲೆ ಹಾದು ಹೋಗುವ ತಂತಿಗೆ ಹಾವು ನೇತಾಡುತ್ತಿರುವುದನ್ನು ಕಾಣಬಹುದು. ಹಾವು ತಂತಿಗೆ ನೇತಾಡುತ್ತಾ ಚಲಿಸುತ್ತಿತ್ತು. ತಂತಿಯ ಮೇಲೆ ಹಾವು ನೇತಾಡುತ್ತಿರುವುದನ್ನು ಕಂಡ ಜನರು ಅಲ್ಲಿಂದ ದೂರ ಓಡಲು ಆರಂಭಿಸಿದರು. 


ಇದನ್ನೂ ಓದಿ: ಭೂಮಿ ಉಸಿರಾಡುವ ಅದ್ಭುತ ಕ್ಷಣ ಸೆರೆ.. ಮಿಸ್‌ ಮಾಡದೆ ಒಮ್ಮೆ ವಿಡಿಯೋ ನೋಡಿ


ತಂತಿಯ ಮೇಲೆ ಹಾವು ಚಲಿಸುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಇದ್ದಕ್ಕಿದ್ದಂತೆ ಈ ಹಾವು ರಸ್ತೆ ಮೇಲೆ ಬಿದ್ದಿತು. ಹಾವು ಬಿದ್ದ ತಕ್ಷಣ ಕಿರುಚಾಟ ಕೇಳಿಸಿತು. ಆಕಾಶದಿಂದ ಹಾವು ಬಿದ್ದಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಶೇರ್ ಮಾಡಲಾಗಿದೆ. ಆದರೆ ವಾಸ್ತವವಾಗಿ ಈ ಹಾವು ತಂತಿಯ ಮೇಲೆ ನೇತಾಡುತ್ತಿತ್ತು. ಹಾವು ಕಂಡ ತಕ್ಷಣ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಯಿತು. ತಂಡ ಬಂದು ಹಾವನ್ನು ಹಿಡಿದಿದೆ.


 


Viral video: ಆಕಾಶದಲ್ಲಿ ಗೋಚರವಾಯ್ತು ಅನ್ಯ ಗ್ರಹ! ಅದ್ಬುತ ಕ್ಷಣಕ್ಕೆ ಸಾಕ್ಷಿಯಾದ ನೆಟ್ಟಿಗರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.