ನೀರಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಿ, ಚಿತ್ರಹಿಂಸೆ ನೀಡಿ ಕತ್ತು ಹಿಸುಕಿ ಕೊಂದ ಗ್ರಾಮಸ್ಥರು..! ವಿಡಿಯೋ ವೈರಲ್
Leopard killed : ಕಾಡು ಪ್ರಾಣಿಗಳು ದಾರಿ ತಪ್ಪಿ ಇಲ್ಲವೇ ಆಹಾರವನ್ನು ಅರಸಿ ನಾಡಿಗೆ ಬರುವುದು ಸಾಮಾನ್ಯ. ಮಾನವರಾದ ನಾವು ಕಾಡುಗಳನ್ನು ಅತಿಕ್ರಮಣ ಮಾಡುತ್ತಿದ್ದರೆ ಪಾಪ ಅವುಗಳಾದರೂ ಎಲ್ಲಿ ಹೋಗುತ್ತವೆ ಅಲ್ಲವೆ.. ಹೀಗೆ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಕ್ರೂರಿ ಜನರು ಕತ್ತು ಹಿಸುಕಿ ಕೊಂದಿದ್ದಾರೆ..
Leopard viral video : ಹಲವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಚಿರತೆಯನ್ನು ಸ್ಥಳೀಯರು ಹಿಡಿದು ಚಿತ್ರಹಿಂಸೆ ನೀಡಿ ಕತ್ತು ಹಿಸುಕಿ ಸಾಯಿಸಿದ್ದಾರೆ. ಘಟನೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಹೌದು.. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನೌತನ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಚಕ್ಡಾ ತೋಲಾ ಲಾಲ್‌ಪುರ ಗ್ರಾಮದ ಬಳಿ ಡಿ.3ರಂದು ಚಿರತೆಯೊಂದು ಕಾಣಿಸಿಕೊಂಡಿತ್ತು, ಕೆಲ ಯುವಕರು ಅದನ್ನು ಬೆನ್ನಟ್ಟಿದ್ದರು, ಭಯದಕಲ್ಲಿ ಓಡಿದ ಚಿರತೆ ರೋಹಿನ್ ನದಿಗೆ ಹಾರಿತ್ತು.
ಇದನ್ನೂ ಓದಿ:ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!
ಅಷ್ಟರಲ್ಲಿ ಕೆಲವು ಯುವಕರು ನದಿಗೆ ಹಾರಿ, ವೃದ್ಧಾಪ್ಯದಿಂದ ಅಸ್ವಸ್ಥಗೊಂಡಿದ್ದ ಚಿರತೆಯನ್ನು ಹಿಡಿದಿದ್ದಾರೆ. ಅದನ್ನು ಹೊರತಂದು, ಬಳಿಕ ಕೆಲ ಯುವಕರು ಚಿರತೆಯ ಕತ್ತು ಹಿಸುಕಿ ಕೊಂದಿದ್ದಾರೆ.. ಅಲ್ಲಿದ್ದ ಕೆಲವರು ಇದನ್ನೆಲ್ಲ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಇನ್ನು ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆಯನ್ನು ಸಾಹಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.