`ಈಗ್ ಗೊತ್ತಾಯ್ತು ಅಪ್ಪ ಸರ್ಕಾರಿ ಸ್ಕೂಲಲ್ಲಿ ಯಾಕೆ ಓದಿಸಿದ್ರು ಅಂತಾ...`, ವೈರಲ್ ಆಗುತ್ತಿರುವ` ನರ್ಸರಿ-ಕೆಜಿ ಶುಲ್ಕ ವಿವರ ನೀವೂ ನೋಡಿ!
Viral Fees Structure For Nursery: ಖಾಸಗಿ ಶಾಲೆಗಳಲ್ಲಿ ಶುಲ್ಕ ಗಗನಕ್ಕೇರುತ್ತಿದೆ. ಬೋಧನಾ ಶುಲ್ಕದ ಪೈಕಿ, ಪೋಷಕರ ಓರಿಯಂಟೇಶನ್ ಶುಲ್ಕದ ಹೆಸರಿನಲ್ಲಿ ಶಾಲೆಯೊಂದು 8,400 ರೂ. ಫೀಜ್ ಸ್ಟ್ರಕ್ಚರ್ ಗೆ ಸೇರಿಸಿದೆ. ಬನ್ನಿ ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ, (Viral News In Kannada)
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಒಳ್ಳೆಯ ಶಾಲೆಗೆ ಕಳುಹಿಸುವುದು ಒಂದು ಸಾಮಾನ್ಯ ಸಂಗತಿಯಾಗಿ ಉಳಿದಿಲ್ಲ. ಮೊದಮೊದಲು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಶ್ರಮಿಸಬೇಕು.ನಂತರ ಪ್ರವೇಶ ಪಡೆದಾಗ ಮಕ್ಕಳ ಮೇಲಷ್ಟೇ ಅಲ್ಲ ಪೋಷಕರ ಮೇಲೂ ಜವಾಬ್ದಾರಿ ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ತರಗತಿಗಳಿಗೂ ಕೂಡ ಫೀಜ್ ವಿಪರೀತ ಹೆಚ್ಚಾಗಿದ್ದು, ಅದನ್ನು ನೋಡಿದ ಪಾಲಕರ ಬೆವರೆ ಇಳಿಯುತ್ತದೆ. 2024-25ನೇ ಶೈಕ್ಷಣಿಕ ವರ್ಷದ ಜೂನಿಯರ್ ಕೆಜಿ ಬ್ಯಾಚ್‌ನ ಫೀಜ್ ಸ್ಟ್ರಕ್ಚರ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದನ್ನು ನೋಡಿ ನೀವೂ ಶಾಕ್ ಆಗುವಿರಿ. ಶಾಲೆಗಳು ಪೋಷಕರಿಂದ ದೊಡ್ಡ ಮೊತ್ತವನ್ನು ವಸೂಲಿ ಮಾಡುತ್ತಿರುವುದು ಈ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.(Viral News In Kannada)
ಪೋಷಕರ ಓರಿಯಂಟೇಶನ್ ಶುಲ್ಕ
ಚಿತ್ರದಲ್ಲಿ ತೋರಿಸಿರುವ ವಿವರಗಳ ಪ್ರಕಾರ ಪ್ರವೇಶ ಶುಲ್ಕ 55,638 ರೂ., ಕಾಶನ್ ಡೆಪಾಸಿಟ್ 30,19 ರೂ., ವಾರ್ಷಿಕ ಶುಲ್ಕ 28,314 ರೂ., ಅಭಿವೃದ್ಧಿ ಶುಲ್ಕ 13,948 ರೂ., ಬೋಧನಾ ಶುಲ್ಕ 23,737 ರೂ. ಮತ್ತು ಪೋಷಕರ ಓರಿಯಂಟೇಶನ್ ಶುಲ್ಕ 8400 ರೂ. ಎಂದು ಬರೆಯಲಾಗಿದೆ
ಇದನ್ನೂ ಓದಿ-ಪ್ರೀತಿಗಾಗಿ ಲಿಂಗ ಬದಲಾಯಿಸಿದ ಹುಡುಗಿ, ಗೆಳತಿಯನ್ನೇ ಮದುವೆಯಾದ್ಲು!
ಜನರ ಭಾರಿ ಪ್ರತಿಕ್ರಿಯೆ
ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜನರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರೆ, "ಇದು ನರ್ಸರಿ ಅಥವಾ ಬಿ.ಟೆಕ್ ಫೀಜ್ ಸ್ಟ್ರಕ್ಚರ್?" ಎಂದು ಪ್ರಶ್ನಿಸಿದ್ದರೆ, ಇನ್ನೊಬ್ಬರು "ಕಂತುಗಳಲ್ಲಿ ಪಾವತಿಸಲು ಸಾಧ್ಯವಿಲ್ಲವೇ?" ಎಂದು ಪ್ರತಿಕ್ರಿಯಿಸಿದ್ದಾರೆ. ಮೂರನೇ ಬಳಕೆದಾರರು, "ನನ್ನ 10 ನೇ ತರಗತಿಯ ಶುಲ್ಕವು ತಿಂಗಳಿಗೆ 500 ರೂ, ನಾನು ದುಬಾರಿ ಶಾಲೆಯಲ್ಲಿ ಓದುತ್ತಿದ್ದೇನೆ ಎಂದು ನಾನು ಭಾವಿಸಿದ್ದೆ" ಎಂದಿದ್ದಾರೆ. "ನರ್ಸರಿ ಪ್ರವೇಶಕ್ಕಾಗಿ ನಾನು ಸಾರಿಗೆ, ಆಹಾರ ಮತ್ತು ದೇಣಿಗೆ ಸೇರಿದಂತೆ ಒಟ್ಟು 1,95,000 ರೂ. ಪಾವತಿಸಿದ್ದೇನೆ" ಎಂದಿದ್ದಾರೆ. ಮತ್ತೊಬ್ಬರು 'ಈ ಶುಲ್ಕ ಪಾವತಿಸಲು ನಮಗೆ ಲೋನ್ ತೆಗೆದುಕೊಳ್ಳಬೇಕಾಗುತ್ತದೆ" ಎಂದಿದ್ದಾರೆ
ಪೆರೆಂಟ್ಸ್ ಒರಿಯಂಟೇಶನ್ ಎಂದರೇನು?
ಪೋಷಕರ ಓರಿಯಂಟೇಶನ್ ಕಾರ್ಯಕ್ರಮವನ್ನು ಸಾಮಾನ್ಯವಾಗಿ ಪ್ರತಿ ತಿಂಗಳಿಗೊಮ್ಮೆ ಆಯೋಜಿಸಲಾಗುತ್ತದೆ ಇದರಿಂದ ಪೋಷಕರು ತಮ್ಮ ಮಗುವಿನ ಪ್ರಗತಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಮತ್ತು ಶಾಲೆಯಲ್ಲಿ ಅನುಸರಿಸುವ ವಿವಿಧ ಬೋಧನಾ ಯೋಜನೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುತ್ತದೆ.
ಇಲ್ಲಿದೆ ವೈರಲ್ ಎಕ್ಸ್ ಪೋಸ್ಟ್...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ