Viral News in World: 23ರ ಹರೆಯದ ಯುವತಿಯೊಬ್ಬಳು 80 ವರ್ಷದ ವೃದ್ಧನನ್ನು ಮದುವೆಯಾಗಿರುವ ಘಟನೆ ನಡೆದಿದೆ. ಚೀನಾದ ಹೆಬೈ ಪ್ರಾಂತ್ಯದಲ್ಲಿಯೇ ಈ ವಿಚಿತ್ರ ನಡೆದಿದ್ದು, ಈ ಲವ್‌ ಸ್ಟೋರಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಅಂದಹಾಗೆ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದ ಚೀನಾದ 80 ವರ್ಷ ವ್ಯಕ್ತಿ ಶ್ರೀಲಿ ಹಾಗೂ ಅದೇ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬ ಯುವತಿಯ ನಡುವೆ ಪರಿಚಯವಾಗಿದೆ. ನಂತರ ಅದು ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಆಕೆಯ ಮನೆಯವರಿಗೆ ಈ ಮದುವೆ ಇಷ್ಟವಿಲ್ಲದ ಕಾರಣ ತನ್ನ ಹೆತ್ತವರ ಸಂಬಂಧ ಮುರಿದುಕೊಂಡು ಆಕೆ ಶ್ರೀಲಿಯನ್ನು ಮದುವೆಯಾಗಿದ್ದಾಳೆ. 


ಇದನ್ನೂ ಓದಿ: Kuwait : ಕುವೈತ್‌ನಲ್ಲಿ ಕಾರ್ಮಿಕರ ವಸತಿ ಕಟ್ಟಡದಕ್ಕೆ ಬೆಂಕಿ ತಗುಲಿ 41 ಮಂದಿ ಸಾವು


ಕ್ಸಿಯಾನ್ ಫಾಂಗ್ ಮತ್ತು ಲೀ ತಮ್ಮ ಜೀವನ ನಡೆಸಲು ಲೀಯ ಪಿಂಚಣಿ ಹಣವನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆಂದು ಹೇಳಲಾಗಿದೆ. ವೃದ್ಧ ಶ್ರೀಲಿಯವರ ಪ್ರಬುದ್ಧತೆ, ಸ್ಥಿರತೆ ಮತ್ತು ಬುದ್ಧಿವಂತಿಕೆ ಕಂಡು ಮೆಚ್ಚಿದ ಯುವತಿ ಅವರನ್ನು ಮದುವೆಯಾಗಲು ನಿರ್ಧರಿಸಿದಳಂತೆ.


ಇತ್ತೀಚೆಗಷ್ಟೇ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆದರೆ ಈ ಮದುವೆಗೆ ಆಕೆಯ ಮನೆಯವರು ಹಾಗೂ ಕುಟುಂಬಸ್ಥರು ಯಾರೂ ಬಂದಿರಲಿಲ್ಲವಂತೆ. ಈ ದಂಪತಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್‌ ಸೌಂಡ್‌ ಮಾಡುತ್ತಿದೆ.  


ಇದನ್ನೂ ಓದಿಪ್ರಧಾನಿ ಮೋದಿ ಇಟಲಿ ಭೇಟಿಗೂ ಮುನ್ನ ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ


ದಂಪತಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದನ್ನು ಕಂಡು ನೆಟಿಜನ್ಸ್‌ ಹೌಹಾರಿಹೋಗಿದ್ದಾರೆ. ಈ ಸುದ್ದಿ ಓದಿದರೆ ಹದಿಹರೆಯದ ಯುವಕರ ಹೃದಯ ಒಡೆದುಹೋಗುತ್ತದೆ ಅಂತಾ ತಮಾಷೆ ಮಾಡಿದ್ದಾರೆ. ಕೆಲವು ಬಳಕೆದಾರರು ವೃದ್ಧನ ಹಣಕ್ಕಾಗಿ ಯುವತಿ ಆತನನ್ನು ಮದುವೆಯಾಗಿದ್ದಾಳೆ ಅಂತಾ ಕಾಮೆಂಟ್ ಮಾಡಿದ್ದರೆ, ಕೆಲವರು ಆಕೆಯ ಧೈರ್ಯ ಮತ್ತು ಆತನ ಮೇಲಿನ ಪ್ರೀತಿಯನ್ನು ಹೊಗಳಿ ಕಾಮೆಂಟ್‌ ಮಾಡಿದ್ದಾರೆ. ಅದೇ ರೀತಿ ಅನೇಕರು 80 ವೃದ್ಧನನ್ನು ಮದುವೆಯಾದ 23ರ ಯುವತಿಯನ್ನು ಕಂಡು ಮರುಕ ವ್ಯಕ್ತಪಡಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.