ಲಖನೌ: ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಕೊಲ್ಹುಯಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಮದುವೆಯಾಗಿ ಒಂದೂವರೆ ತಿಂಗಳು ಕಳೆಯುವುದರೊಳಗೆ ಯುವತಿ 4 ತಿಂಗಳ ಗರ್ಭಿಣಿಯಾಗಿದ್ದಾಳೆ. ಪತ್ನಿಯ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದರಿಂದ ಚಿಕಿತ್ಸೆಗಾಗಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.


COMMERCIAL BREAK
SCROLL TO CONTINUE READING

ಅಲ್ಟ್ರಾಸೌಂಡ್ ಮಾಡಿಸಿದಾಗ ವರದಿಯಲ್ಲಿ ಯುವತಿ ಗರ್ಭಿಣಿಯಾಗಿರುವ ವಿಷಯ ತಿಳಿದುಬಂದಿದೆ. ಈ ವಿಷಯ ತಿಳಿದು ಪತಿ ಹೌಹಾರಿ ಹೋಗಿದ್ದಾನೆ. ಯುವತಿ ಹಾಗೂ ಆಕೆಯ ಪೋಷಕರು ನನಗೆ ವಂಚಿಸಿ ವಿವಾಹ ಮಾಡಿಸಿದ್ದಾರೆಂದು ನೊಂದ ಯುವಕ(ಪತಿ) ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.  


ಇದನ್ನೂ ಓದಿ: Viral Video: ಬಾಡಿಗೆ ಕಾರು ಪಡೆದು ಗೋವಾ ಬೀಚ್‌ನಲ್ಲಿ ಮುಳುಗಿಸಿದ ಭೂಪ..!


ಗ್ರಾಮದ ಸಂಬಂಧಿಯೊಬ್ಬರ ಮೂಲಕ ಪಕ್ಕದ ಜಿಲ್ಲೆಯ ಯುವತಿಯನ್ನು  ಒಂದೂವರೆ ತಿಂಗಳ ಹಿಂದೆ  ಯುವಕ ಮದುವೆಯಾಗಿದ್ದ. ಸಂಸಾರದೊಂದಿಗೆ ನೆಲೆ ಕಂಡುಕೊಳ್ಳುವ ಮುನ್ನವೇ ಯುವಕ ವಂಚನೆಗೆ ಬಲಿಯಾಗಿದ್ದಾನೆ. ತನ್ನ ಮದುವೆ ಆಗಿಯೇ ಕೇವಲ ಒಂದೂವರೆ ತಿಂಗಳು ಕಳೆದಿದೆ. ಇಂತಹುದರಲ್ಲಿ ಪತ್ನಿ 4 ತಿಂಗಳ ಗರ್ಭಿಣಿ ಆಗುವುದಾದರೂ ಹೇಗೆಂದು ಯುವಕ ಪ್ರಶ್ನಿಸಿದ್ದಾನೆ. ಪೊಲೀಸರ ಮುಂದೆ ಅಳಲು ತೋಡಿಕೊಂಡಿರುವ ಯುವಕ ತನೆಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾನೆ.


ಅಲ್ಟ್ರಾಸೌಂಡ್ ಬಳಿಕ ತಿಳಿದ ವಿಷಯ!


ಮದುವೆಯಾದ ಕೆಲವೇ ದಿನಗಳಲ್ಲಿ ಯುವತಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಸೊಸೆಗೆ ಅತ್ತೆ ಎಷ್ಟೇ ಔಷಧಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಅತ್ತೆ ಯುವತಿಯನ್ನು ಕೊಲ್ಹುವಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆರೋಗ್ಯ ಪರಿಶೀಲಿಸಿದ ವೈದ್ಯರು ಯುವತಿ ಗರ್ಭಿಣಿಯಾಗಿದ್ದಾಳೆಂದು ತಿಳಿಸಿದ್ದಾರೆ. ಅಲ್ಟ್ರಾಸೌಂಡ್ ವರದಿ ಬಂದ ಮೇಲೆ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಇದಾದ ಬಳಿಕ 4 ತಿಂಗಳ ಗರ್ಭಿಣಿಯಾಗಿರುವ ವಿಷಯವನ್ನು ಯುವತಿಯ ಮನೆಯವರಿಗೆ ತಿಳಿಸಿದ ಯುವಕನ ಪೋಷಕರು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಮತ್ತೊಮ್ಮೆ ಅಲ್ಟ್ರಾಸೌಂಡ್ ಮಾಡಿದ ನಂತರವೂ ಪಾಸಿಟಿವ್ ವರದಿ ಬಂದಿತ್ತು.


ಇದನ್ನೂ ಓದಿ: VK Singh : 'ಹಿಂಸಾಚಾರದ ಹಿಂದೆ ಪ್ರತಿಪಕ್ಷಗಳ ಕೈವಾಡ, ರಾಹುಲ್ ಉಳಿಸುವ ಪ್ರಯತ್ನ'


ವಂಚಿಸಿದ ಅಪರಾಧಕ್ಕಾಗಿ ಮೂವರ ವಿರುದ್ಧ ಗಂಭೀರ ಕ್ರಮ ಕೈಗೊಂಡು ಯುವತಿಯನ್ನು ಆಕೆಯ ಪೋಷಕರಿಗೆ ಒಪ್ಪಿಸುವಂತೆ ಯುವಕ ಕೊಲ್ಹುಯಿ ಪೊಲೀಸರಿಗೆ ಮನವಿ ಮಾಡಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಕೊಲ್ಹುಯಿ ಎಸ್‌ಎಚ್‌ಒ ಅಭಿಷೇಕ್ ಸಿಂಗ್ ಹೇಳಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.