ನವದೆಹಲಿ: ಹುಟ್ಟುಹಬ್ಬಕ್ಕೆ ಬೆಲೆಬಾಳುವ ಗಿಫ್ಟ್ ಕೊಡುವುದರ ಬಗ್ಗೆ ಕೇಳಿದ್ದೀರಿ. ಆದರೆ ವ್ಯಕ್ತಿಯೊಬ್ಬ ತನ್ನ ಗಳೆತಿಯ ಹುಟ್ಟುಹಬ್ಬಕ್ಕೆ ಕೊಟ್ಟ ಉಡುಗೊರೆ ಬಗ್ಗೆ ಕೇಳಿದರೆ ನಿಮ್ಮ ಹೊಟ್ಟೆ ಹುಣ್ಣಾಗುವುದು ಗ್ಯಾರಂಟಿ. ಅರೇ, ಅದ್ಯಾವ ಗಿಫ್ಟ್ ಅಂತಿರಾ..? ಒಂಟೆ… ಹೌದು, ತನ್ನ ಪ್ರೇಯಸಿಯ ಹುಟ್ಟುಹಬ್ಬಕ್ಕೆ ವ್ಯಕ್ತಿಯೊಬ್ಬ ಒಂಟೆ ಗಿಫ್ಟ್ ಆಗಿ ನೀಡಿದ್ದಾನೆ. ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ದುಬೈ.


COMMERCIAL BREAK
SCROLL TO CONTINUE READING

ತನ್ನ ಹುಟ್ಟುಹಬ್ಬಕ್ಕೆ ಗೆಳತಿ ಒಂಟೆಯನ್ನೇ ಉಡುಗೊರೆಯಾಗಿ ನೀಡಬೇಕೆಂದು ಹಠಹಿಡಿದ್ದಳಂತೆ. ಇದರಿಂದ ದಿಕ್ಕುತೋಚದಂತಾದ ಪ್ರೇಮಿ ಏನು ಮಾಡಬೇಕೆಂದು ಕೈಕೈ ಹಿಚುಕಿಕೊಂಡಿದ್ದಾನೆ. ಒಂಟೆ ಖರೀದಿಸಲು ಆತನ ಬಳಿ ಹಣ ಇರಲಿಲ್ಲ. ಹೇಗಾದರೂ ಮಾಡಿ ಗಿಫ್ಟ್ ಕೊಡಲೇಬೇಕೆಂದು ನಿರ್ಧರಿಸಿದ ಆತ ಕೊನೆಗೆ ಒಂಟೆ ಕದ್ದು ಆಕೆಗೆ ನೀಡಿದ್ದಾನೆ. ತಾನು ಮಾಡಿದ ತಪ್ಪಿಗೆ ಇದೀಗ ಜೈಲುಪಾಲಾಗಿದ್ದಾನೆ.


ಇದನ್ನೂ ಓದಿ: ಜನರ ಪ್ರಾಣಕ್ಕೆ ಅಪಾಯ ತರಲಿದೆ ದೆಹಲಿಯ ಪ್ರಗತಿ ಮೈದಾನದ ಸುರಂಗ ಮಾರ್ಗ! L&T ಗೆ PWD ಸೂಚನೆ


ತನ್ನ ಮನೆ ಬಳಿಯ ಜಮೀನಿನಲ್ಲಿ ಒಂಟೆಗಳು ಇರುವುದನ್ನು ಗಮನಿಸಿದ್ದ ಆತ ಹೇಗಾದರೂ ಮಾಡಿ ಕದಿಯಬೇಕೆಂದು ನಿರ್ಧರಿಸಿದ್ದ. ಒಂದು ನವಜಾತ ಒಂಟೆ ಮರಿಯನ್ನು ಕದ್ದು ಎಸ್ಕೇಪ್ ಆಗಿದ್ದ ಆತ ತನ್ನ ಪ್ರೇಯಸಿಗೆ ನೀಡಿದ್ದ. ಒಂಟೆ ಕಣ್ಮರೆಯಾದ ಬಗ್ಗೆ ಜಮೀನಿನ ಮಾಲೀಕರು ದುಬೈ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಹುಡುಕಾಟ ನಡೆಸಿದರೂ ಒಂಟೆಯ ಯಾವುದೇ ಕುರುಹು ಸಿಕ್ಕಿರಲಿಲ್ಲ. ಒಂಟೆಯನ್ನು ಯಾರೋ ಕದ್ದರಿಬೇಕೆಂದು ಶಂಕಿಸಿದ ಅವರು ಈ ಬಗ್ಗೆ ತನಿಖೆ ಕೈಗೊಂಡಿದ್ದರು.  


ಒಂದು ದಿನ ತಮ್ಮ ಕೃಷಿಭೂಮಿಯ ಬಳಿ ನವಜಾತ ಒಂಟೆ ಇರುವ ಬಗ್ಗೆ ವ್ಯಕ್ತಿಯೊಬ್ಬರು ದುಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಒಂಟೆ ಇರುವುದನ್ನು ಖಚಿತಪಡಿಸಿಕೊಂಡರು. ಆದರೆ ಒಂಟೆ ಕದ್ದವನ ಕಥೆ ಕೇಳಿ ಅದನ್ನು ಮರಳಿ ತೆಗೆದುಕೊಂಡು ಹೋಗಲು ನಿರಾಕರಿಸಿದರು. ಒಂಟೆ ಕಳ್ಳತನವಾದ ಪ್ರದೇಶದಿಂದ ಸುಮಾರು 3 ಕಿಮೀ ದೂರ ಇದ್ದಿದ್ದರಿಂದ ಅದನ್ನು ತೆಗೆದುಕೊಂಡು ಹೋಗುದುವು ಅಸಾಧ್ಯವೆಂದು ಪೊಲೀಸರು ಹೇಳಿದರು.


ಇದನ್ನೂ ಓದಿ: Viral News: ಕೋರ್ಟ್ ವಿಚಾರಣೆ ವೇಳೆಯೇ ನ್ಯಾಯಾಧೀಶೆಗೆ ಪ್ರೇಮ ನಿವೇದನೆ ಮಾಡಿದ ಕಳ್ಳ..!


ಹುಟ್ಟುಹಬ್ಬದಂದು ತನ್ನ ಗೆಳತಿಯನ್ನು ಸಂತೋಷಪಡಿಸಲು ಒಂಟೆ ಕದ್ದಿರುವುದಾಗಿ ಪೊಲೀಸರ ಬಳಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ರಾತ್ರಿ ವೇಳೆ ಜಮೀನಿಗೆ ನುಗ್ಗಿ ಒಂಟೆ ಮರಿಯನ್ನು ಕದ್ದಿರುವುದಾಗಿ ತಿಳಿಸಿದ್ದಾನೆ. ನಿಜವನ್ನು ಹೇಳಿದರೆ ಅಪರಾಧದಿಂದ ಪಾರಾಗಬಹುದೆಂದು ಯೋಚಿಸಿದ ಪೊಲೀಸರ ಬಳಿ ನಡೆದ ಸಂಗತಿಯನ್ನೆಲ್ಲಾ ವಿವರಿಸಿದ್ದಾನೆ. ಆದರೆ ಮಾಡಿದ ಅಪರಾಧಕ್ಕೆ ದುಬೈ ಪೊಲೀಸರು ಒಂಟೆ ಕದ್ದ ಆರೋಪಿ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ. ಬಳಿಕ ಒಂಟೆಯನ್ನು ಅದರ ಮಾಲೀಕರಿಗೆ ನೀಡಲಾಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.