ನವದೆಹಲಿ: ಮನುಷ್ಯನ ಜೀವನವು ತುಂಬಾ ಅನಿರೀಕ್ಷಿತವಾಗಿದೆ. ನಿಮ್ಮ ದಶಕಗಳ ಹಳೆಯ ಮನೆಯ ಪ್ರದೆಶದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಅಮೂಲ್ಯ ಆಭರಣಗಳ ಖಜಾನೆ ಸಿಕ್ಕರೆ ಏನ್ತಾಡ್ತೀರಿ..? ಆದರೆ ಇಂಗ್ಲೆಂಡಿನಲ್ಲಿ ಇದು ನಿಜವಾಗಿದೆ. ತಮ್ಮ ಹಳೆಯ ಮನೆ ನವೀಕರಿಸಲು ನಿರ್ಧರಿಸಿದ ದಂಪತಿಗೆ ಅದೃಷ್ಟ ಲಕ್ಷ್ಮಿ ಸಿಕ್ಕಿದ್ದಾಳೆ. ಪರಿಣಾಮ ಒಂದೇ ರಾತ್ರಿಯಲ್ಲಿಯೇ ಅವರ ಜೀವನವೇ ಬದಲಾಗಿಹೋಗಿದೆ.


COMMERCIAL BREAK
SCROLL TO CONTINUE READING

ಚಿನ್ನದ ನಿಧಿ ಸಿಕ್ಕಿದೆ


ಬ್ರಿಟಿಷ್ ದಂಪತಿ ತಮ್ಮ ಮನೆಯ ಅಡುಗೆ ಮನೆಯನ್ನು ನವೀಕರಿಸಲು ನಿರ್ಧರಿಸಿದ್ದರು. ಅದರಂತೆ ಅಡುಗೆ ಮನೆಯಲ್ಲಿ ಅಗೆಯುವಾಗ ಅವರಿಗೆ ಮಣ್ಣಿನ ಪಾತ್ರೆ ದೊರೆತಿದೆ. ಇದರಲ್ಲಿ 400 ವರ್ಷಗಳಷ್ಟು ಹಿಂದಿನ ಬರೋಬ್ಬರಿ 264 ಚಿನ್ನದ ನಾಣ್ಯಗಳು ಸಿಕ್ಕಿವೆ. ಇವುಗಳ ಬೆಲೆ 2.3 ಕೋಟಿ(£2,50,000) ರೂ. ಎಂದು ಅಂದಾಜಿಸಲಾಗಿದೆ. ಈ ಯುಕೆ ಮೂಲದ ದಂಪತಿ ಕಳೆದ 10 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರಂತೆ. 


ಇದನ್ನೂ ಓದಿ: Viral News: ಈ ದೇಶದಲ್ಲಿ ಹಣ ಕೊಟ್ಟು ಹಸುವನ್ನು ತಬ್ಬಿಕೊಳ್ಳುತ್ತಿದ್ದಾರೆ ಜನ, ಕಾರಣ ತುಂಬಾ ರೋಚಕವಾಗಿದೆ


18ನೇ ಶತಮಾನದ ಚಿನ್ನದ ನಾಣ್ಯಗಳು


ಉತ್ತರ ಯಾರ್ಕ್‌ಷೈರ್‌ನಲ್ಲಿರುವ ತಮ್ಮ ಹಳೆಯ ಮನೆ ನವೀಕರಿಸಲು ನಿರ್ಧರಿಸಿದ್ದ ದಂಪತಿ ಅಡುಗೆ ಮನೆಯ ಪ್ರದೇಶದಲ್ಲಿ ಅಗೆಯುವಾಗ ಮಣ್ಣಿನ ಪಾತ್ರೆ ಸಿಕ್ಕಿದೆ. ಅದನ್ನು ತೆರೆದು ನೋಡಿದಾಗ ಅವರಿಗೆ ಹಳೆಯ ಕಾಲಕ್ಕೆ ಸೇರಿದ ಚಿನ್ನದ ನಾಣ್ಯಗಳು ಸಿಕ್ಕಿವೆ. ಈ ನಾಣ್ಯಗಳು 18ನೇ ಶತಮಾನಕ್ಕೂ ಹಿಂದಿನವು ಎಂದು ತಿಳಿದುಬಂದಿದೆ. ಈ ದಂಪತಿ ಎಲ್ಲಾ ಚಿನ್ನದ ನಾಣ್ಯಗಳನ್ನು ಹರಾಜಿನಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ.


ಈ ಎಲ್ಲಾ ನಾಣ್ಯಗಳು 1610 ರಿಂದ 1727ರ ಕಾಲಕ್ಕೆ ಸೇರಿದವು ಎಂದು  ತಿಳಿದುಬಂದಿದೆ. ಜೇಮ್ಸ್-1 ಮತ್ತು ಚಾರ್ಲ್ಸ್-1 ಆಳ್ವಿಕೆಯ ಕಾಲದ ಬ್ರಿಟನ್ ಆಡಳಿತದಲ್ಲಿ ಚಲಾವಣೆಯಿದ್ದ ನಾಣ್ಯಗಳಿರಬಹುದು ಎಂದು ಸಂಶೋಧಕರು ನಂಬಿದ್ದಾರೆ. ಸದ್ಯ ದಂಪತಿ ಈ ಚಿನ್ನದ ನಾಣ್ಯಗಳನ್ನು 2.5 ಲಕ್ಷ ಪೌಂಡ್‍ಗೆ (ಸುಮಾರು 2.3ಕೋಟಿ ರೂ.) ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಹರಾಜುಗಾರ ಗ್ರೆಗೊರಿ ಎಡ್ಮಂಡ್ ‘ಇವು ಅದ್ಭುತ ಮತ್ತು ಅನಿರೀಕ್ಷಿತ ಆವಿಷ್ಕಾರ’ವೆಂದು ತಿಳಿಸಿದ್ದಾರೆ. 


ಇದನ್ನೂ ಓದಿ: Snake video : ಕಾಲನ್ನು ಬಿಗಿಯಾಗಿ ಸುತ್ತಿಕೊಂಡಿದ್ದರೂ ಅಪಾಯಕಾರಿ ಹೆಬ್ಬಾವು ಮಾಸಲಿಲ್ಲ ಯುವತಿಯ ಮುಗುಳ್ನಗೆ ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.