ನವದೆಹಲಿ: ಮದುವೆ ಹೆಸರಲ್ಲಿ ಅನೇಕ ಪುರುಷರಿಗೆ ಮೊಸ ಮಾಡಿದ್ದ ಮಹಿಳೆಯನ್ನು ಒಡಿಶಾದ ಕಲಹಂಡಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಅವಿವಾಹಿತರನ್ನೇ ಮುಖ್ಯ ಟಾರ್ಗೆಟ್ ಮಾಡುತ್ತಿದ್ದ ಈ ಮಹಿಳೆ ಮದುವೆಯಾಗುವುದಾಗಿ ನಂಬಿಸಿ ಹಣ ಸುಲಿಗೆ ಮಾಡಿ ಎಸ್ಕೇಪ್ ಆಗುತ್ತಿದ್ದಳು. ವಂಚಕಿಯ ವಿರುದ್ಧ 3ನೇ ಪತಿ ಸಲ್ಲಿಸಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ. ಸುಲಿಗೆ ಮಾಡಲು ಈಕೆ ಮೋಸದಿಂದ ಮದುವೆಯಾಗಿ ಅನೇಕ ವ್ಯಕ್ತಿಗಳಿಗೆ ವಂಚಿಸಿರುವುದು ಬಹಿರಂಗವಾಗಿದೆ. 


COMMERCIAL BREAK
SCROLL TO CONTINUE READING

ಬಂಧಿತ ವಂಚಕಿಯನ್ನು ಎಲೀ ಮಹಂತಾ(32) ಎಂದು ಗುರುತಿಸಲಾಗಿದೆ. ಹಣಕ್ಕಾಗಿ ಮಾತ್ರವಲ್ಲದೇ ಈಕೆ ತನ್ನನ್ನು ಮದುವೆಯಾಗಬೇಕೆಂದು ಕೂಡ ಹಲವರಲ್ಲಿ ಬೇಡಿಕೆ ಇಟ್ಟಿದ್ದಳೆಂದು ತಿಳಿದುಬಂದಿದೆ. ಈಗಾಗಲೇ 2 ಮದುವೆಯಾಗಿ ಇಬ್ಬರಿಗೆ ವಂಚಿಸಿದ್ದ ಎಲೀ ಮಹಂತಾ 3ನೇ ಮದುವೆಯಾಗಲು ಹೋಗಿ ಖಾಕಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ. ಈಕೆ ಸಿಂಧುಮತಿ ಮುಂಡಾ, ಮಮತಾ ಜೈನ್ ಮತ್ತು ಮಮತಾ ಅಗರ್ವಾಲ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Bhopal Tourism: ಭೋಪಾಲ್‌ನಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು!


ಸುಂದರ್‌ಗಢ ಜಿಲ್ಲೆಯ ರಘುನಾಥಪಾಲಿಯಲ್ಲಿರುವ ಜಲ್ಡಾ ನಿವಾಸಿಯಾಗಿರುವ ಎಲೀ ಮಹಂತಾ, ಮೊದಲು ಕುಮುದಾಬಂಧು ಪಟೇಲ್ ಅವರನ್ನು ವಿವಾಹವಾಗಿದ್ದಳು. ಆದರೆ ದುರದೃಷ್ಟವಶಾತ್ ಪಟೇಲ್ ಸಾವನ್ನಪ್ಪಿದ್ದರು. ಅವರ ನಿಧನದ ಬಳಿಕ ಆಕೆ ಮತ್ತೆ ಮರುಮದುವೆಯಾದಳು. 2013ರಲ್ಲಿ ಆಕೆ ರಾಜೇಂದ್ರ ದಾಸ್ ಅವರೊಂದಿಗೆ ಸಪ್ತಪದಿ ತುಳಿದಿದ್ದಳು. ಆದರೆ ಕೆಲವೇ ದಿನಗಳಲ್ಲಿ ಆತನಿಂದ ಎಲೀ ಪ್ರತ್ಯೇಕವಾದಳು. ರಾಜೇಂದ್ರ ದಾಸ್ ಭಾರಿ ಮೊತ್ತದ ಹಣ ನೀಡಿದ್ದರಿಂದ ಆಕೆ ಆತನನ್ನು ತೊರೆದಿದ್ದಳು. ಬಳಿಕ ಆಕೆ ತನ್ನ ಸಂಬಂಧಿಕರೊಂದಿಗೆ ಛತ್ತೀಸ್‌ಗಢದ ಸಾರಂಗಢ ಗ್ರಾಮದಲ್ಲಿ ವಾಸಿಸುತ್ತಿದ್ದಳು.  


2020ರ ಜೂನ್‌ನಲ್ಲಿ ಬಿರ್ಬಲ್ ಶರ್ಮಾ ಎಂಬುವರು ಬಿಕಾಶ್ ಜೈನ್ ಎಂಬಾತನಿಗೆ ವಿವಾಹ ಪ್ರಸ್ತಾಪವೊಂದನ್ನು ಇಟ್ಟಿದ್ದರು. ಬಿಕಾಶ್ ಪೋಷಕರು ತಮ್ಮ ಪುತ್ರನ ಮದುವೆ ಮಾಡಿಸುವ ವಿಚಾರದಲ್ಲಿ ಹತಾಶರಾಗಿದ್ದೆಂದು ಬಿರ್ಬಲ್ ಶರ್ಮಾ ತಿಳಿದುಕೊಂಡಿದ್ದ. ಹೀಗಾಗಿಯೇ ಬಿಕಾಶ್ ಮದುವೆ ಮಾಡಿಸಲು 4 ಲಕ್ಷ ರೂ. ಹಣ ನೀಡುವಂತೆ ಆತನ ಕುಟುಂಬಸ್ಥರ ಬಳಿ ಬೇಡಿಕೆ ಇಟ್ಟಿದ್ದ. ಇದಕ್ಕೆ ಬಿಕಾಶ್ ಕುಟುಂಬಸ್ಥರು ಕೂಡ ಒಪ್ಪಿಕೊಂಡಿದ್ದರು ಎಂದು ಮದನ್ಪುರದ ರಾಂಪುರ್ ಪೊಲೀಸ್ ಠಾಣೆಯ ಐಐಸಿ ಜಯದೇವ್ ತಾರಿನಿ ಹೇಳಿದ್ದಾರೆ.


ಇದನ್ನೂ ಓದಿ: Hindu Mythology: ಕೃಷ್ಣನ ಸಾವು ಮತ್ತು ದ್ವಾರಕೆಯ ನಾಶ..! ಆ ತಾಯಿಯ ಕಣ್ಣೀರೇ ಕಾರಣ..


ಮಮತಾ ಅಗರ್ವಾಲ್ ಎಂದು ಪರಿಚಯಿಸಿಕೊಂಡಿದ್ದ ಎಲೀ ಮಹಂತಾ, ನಕಲಿ ಪೋಷಕರು ಮತ್ತು ಸಂಬಂಧಿಕರೊಂದಿಗೆ ಜೈನ್ ಕುಟುಂಬದ ಜೊತೆ ಮದುವೆ ಮಾತುಕತೆ ನಡೆಸಿದ್ದಳು. ಬಳಿಕ 2020ರ ಜೂನ್ 28ರಂದು ಎಲೀ ಮತ್ತು ಬಿಕಾಶ್ ವಿವಾಹ ನಡೆಯಿತು. ಮದುವೆ ಬಳಿಕ ಎಲೀ ವಿಲಕ್ಷಣವಾಗಿ ವರ್ತಿಸಲು ಪ್ರಾರಂಭಿಸಿದ್ದಳು. ಈ ಬಗ್ಗೆ ಅನುಮಾನಗೊಂಡ ಬಿಕಾಶ್ ಆಕೆಯ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದ. ಬಳಿಕ ಎಲೀ ಬೇರೆ ಬೇರೆ ಹೆಸರಿನಲ್ಲಿ ಹಲವು ಆಧಾರ್ ಕಾರ್ಡ್‌ಗಳನ್ನು ಹೊಂದಿರುವುದು ಹಾಗೂ 30 ಸಾವಿರ ರೂ. ಹಣ ಇರುವುದು ಬಿಕಾಶ್‌ಗೆ ಗೊತ್ತಾಗಿತ್ತು.  


ಇದರ ಬಗ್ಗೆ ಪ್ರಶ್ನಿಸಿದಾಗ ಎಲೀಯ ಅಸಲಿ ಮುಖ ಬಿಕಾಶ್‌ಗೆ ಪರಿಚಯವಾಗಿತ್ತು. ನಿನ್ನಿಂದ ದೂರವಾಗಬೇಕೆಂದರೆ ನನಗೆ 5 ಲಕ್ಷ ರೂ. ಹಣ ನೀಡಬೇಕೆಂದು ಬಿಕಾಶ್‌ಗೆ ಎಲೀ ಹೇಳಿದ್ದಳು. ಬಳಿಕ ಜೈನ್ ಕುಟುಂಬಸ್ಥರು ಮದನ್ಪುರದ ರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಎಲೀಯನ್ನು ಪೊಲೀಸರು ಬಂಧಿಸಿದರು. ಸದ್ಯ ಎಲೀ ಯಾರ್ಯಾರಿಗೆ ವಂಚಿಸಿದ್ದಾಳೆಂಬುದರ ಬಗ್ಗೆ ಪೊಲೀಸರು ಎಲ್ಲಾ ಕೋನಗಳಲ್ಲಿಯೂ ತನಿಖೆ ಕೈಗೊಂಡಿದ್ದಾರೆ. ಬಿಕಾಶ್ ಬಳಿಕ ಆಕೆ ಇನ್ನೊಂದು ಮದುವೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಳೇ? ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.