Viral News: ಪತ್ನಿಯ ರೀಲ್ಸ್ ಹುಚ್ಚಾಟಕ್ಕೆ ಆತ್ಮಹತ್ಯೆಗೆ ಶರಣಾದ ಪತಿ..!
Suicide case: ನಾನು ರೀಲ್ಸ್ ಮಾಡುತ್ತೇನೆ ಅಂತಾ ಮಾಯಾ ವಾದಿಸಿದರೆ, ನೀನು ಮಾಡಬೇಡ ನಿಲ್ಲಿಸು, ನಿನ್ನ ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ಡಿಲೀಟ್ ಮಾಡು ಅಂತಾ ಸಿದ್ಧಾರ್ಥ್ ಮನವಿ ಮಾಡಿಕೊಂಡಿದ್ದನಂತೆ. ಹೆಂಡತಿ ತನ್ನ ಮಾತು ಕೇಳದ ಕಾರಣ ಬೇಸತ್ತ ಆತ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನವದೆಹಲಿ: ಪತ್ನಿಯ ರೀಲ್ಸ್ ಹುಚ್ಚಾಟಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದಿದೆ. ರೀಲ್ಸ್ ಮಾಡುವುದು ಬೇಡ.. ಬೇಡ.. ಅಂತಾ ಎಷ್ಟೇ ಕೇಳಿಕೊಂಡರೂ ಪತ್ನಿ ಕ್ಯಾರೆ ಅಂದಿಲ್ಲ. ಹೀಗಾಗಿ ಸಾಯುವ ನಿರ್ಧಾರ ಮಾಡಿದ್ದ ವ್ಯಕ್ತಿ ಅಳುತ್ತಲೇ ಹೆಂಡತಿ ಮತ್ತು ಮನೆ ಬಿಟ್ಟು ಹೋಗಿದ್ದನಂತೆ.
ರೈನಿ ಪೊಲೀಸ್ ಠಾಣೆ ವ್ಯಾಪ್ತಿಯ ನಂಗಲ್ ಬಸ್ ಗ್ರಾಮದಲ್ಲಿ ವಾಸಿಸುತ್ತಿದ್ದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ವೃತ್ತಿಯಲ್ಲಿ ಸರ್ಕಾರಿ ನೌಕರನಾಗಿದ್ದ. ಆತನ ಪತ್ನಿ ಮಾಯಾ ಪ್ರತಿದಿನ ರೀಲ್ಸ್ ಮಾಡುತ್ತಿದ್ದರು. ಪತ್ನಿಯ ರೀಲ್ಸ್ ಹುಚ್ಚಾಟದಿಂದ ಸಿದ್ಧಾರ್ಥ್ ನೊಂದುಕೊಂಡಿದ್ದ. ರೀಲ್ಸ್ ಮಾಡಬೇಡ.. ಮಾಡಬೇಡ.. ಅಂತಾ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದ. ಆದರೆ ಮಾಯಾ ಪ್ರತಿದಿನ ರೀಲ್ಸ್ ಮಾಡಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ಇದೇ ವಿಚಾರವಾಗಿ ದಂಪತಿ ನಡುವೆ ಹಲವಾರು ಬಾರಿ ಜಗಳಗಳು ಆಗುತ್ತಿತ್ತು.
ಇದನ್ನೂ ಓದಿ: Lok Sabha Elections 2024: ರಾಹುಲ್ ಗಾಂಧಿಯನ್ನು ಎಂ.ಎಸ್.ಧೋನಿಗೆ ಹೋಲಿಸಿದ ರಾಜನಾಥ್ ಸಿಂಗ್!
ನಾನು ರೀಲ್ಸ್ ಮಾಡುತ್ತೇನೆ ಅಂತಾ ಮಾಯಾ ವಾದಿಸಿದರೆ, ನೀನು ಮಾಡಬೇಡ ನಿಲ್ಲಿಸು, ನಿನ್ನ ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ಡಿಲೀಟ್ ಮಾಡು ಅಂತಾ ಸಿದ್ಧಾರ್ಥ್ ಸಾರಿ ಸಾರಿ ಮನವಿ ಮಾಡಿಕೊಂಡಿದ್ದನಂತೆ. ಹೆಂಡತಿ ತನ್ನ ಮಾತು ಕೇಳದ ಕಾರಣ ಬೇಸತ್ತ ಆತ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನೂ ಮಾಯಾಳ Instagram ಖಾತೆಗೆ 56K ಫಾಲೋವರ್ಸ್ ಇದ್ದರು. ಆಕೆ ಪ್ರತಿದಿನವೂ ತನ್ನ ರೀಲ್ಸ್ಗಳನ್ನು ಶೇರ್ ಮಾಡುತ್ತಿದ್ದಳು. ಇದೇ ವಿಚಾರವಾಗಿ ಆಕೆ ಪತಿ ಹಾಗೂ ಅತ್ತೆಯೊಂದಿಗೆ ಜಗಳವಾಡುತ್ತಿದ್ದಳು. ಮಾಯಾಳ ಪೋಸ್ಟ್ಗಳಿಗೆ ಅನೇಕರು ಅವಹೇಳನಕಾರಿ ಕಾಮೆಂಟ್ ಮಾಡುತ್ತಿದ್ದರಂತೆ. ಹೀಗಾಗಿ ರೀಲ್ಸ್ ಮಾಡಬೇಡ, ನಿಲ್ಲಿಸು ಅಂತಾ ಆಕೆಯ ಪತಿ ಮತ್ತು ಅತ್ತೆ ಬುದ್ಧಿವಾದ ಹೇಳಿದ್ದರಂತೆ. ಇದಕ್ಕೆ ಸೊಪ್ಪು ಹಾಕದ ಆಕೆ ರೀಲ್ಸ್ ಮಾಡುವುದನ್ನು ಮುಂದುವರೆಸಿದ್ದಳು.
ಇದನ್ನೂ ಓದಿ: ಹೆಣ್ಮಕ್ಳೆ ಸ್ಟ್ರಾಂಗು ಗುರು.. ಭಾರತದ ಈ ಪ್ರದೇಶದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮದ್ಯಪಾನ ಮಾಡ್ತಾರಂತೆ!!
ವರದಿಗಳ ಪ್ರಕಾರ, ಸಿದ್ಧಾರ್ಥ್ ಆತ್ಮಹತ್ಯೆಗೂ 2 ದಿನಗಳ ಮೊದಲು ಲೈವ್ ಬಂದಿದ್ದನಂತೆ. ಈ ಲೈವ್ನಲ್ಲಿ ತನ್ನ ಸಾವಿಗೆ ಕಾರಣವೇನು ಅನ್ನೋದನ್ನು ಪತ್ನಿಗೆ ತಿಳಿಸಿದ್ದಾನೆ. ತನ್ನ ಕುಟುಂಬವೇ ತಲ್ಲಕ್ಕಿಂತಲೂ ಮಿಗಿಲು ಅಂತಾ ಆತ ಪತ್ನಿಗೆ ಸಂದೇಶ ನೀಡಿದ್ದ. ನಿನ್ನ ರೀಲ್ಸ್ ಹುಚ್ಚಾಟದಿಂದಲೇ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಅಂತಾ ಸಿದ್ಧಾರ್ಥ್ ಹೇಳಿಕೊಂಡಿದ್ದನಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.