Death viral News: ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ವ್ಯಕ್ತಿ 3 ನಿಮಿಷಗಳ ನಂತರ ಮತ್ತೆ ಬದುಕಿದ್ದು ಆಘಾತಕಾರಿಯಾಗಿದೆ. ಆ 3 ನಿಮಿಷದಲ್ಲಿ ನರಕಕ್ಕೆ ಹೋದೆ ಎಂದೂ ಆ ವ್ಯಕ್ತಿ ಇದೀಗ ಹೇಳಿಕೊಂಡಿದ್ದಾರೆ. ಮಾನವ ಜೀವನವು ಆಸಕ್ತಿದಾಯಕವಾಗಿದೆ ಏಕೆಂದರೆ ಸಾವಿನ ನಂತರ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ವಿನಾಶವು ನಮ್ಮ ದೇಹಕ್ಕೆ ಮಾತ್ರ, ನಮ್ಮ ಆತ್ಮಕಲ್ಲಾ ಎಂಬ ಮಾತನ್ನು ನಾವು ಕೇಳಿರಬಹುದು. 


COMMERCIAL BREAK
SCROLL TO CONTINUE READING

ಸತ್ತ ನಂತರ ಕೆಲವರು ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಕೆಲವರು ನರಕಕ್ಕೆ ಹೋಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ಇದರ ಸತ್ಯಾಸತ್ಯತೆ ಏನೆಂಬುದನ್ನು ಇದುವರೆಗೂ ಯಾರೂ ಊಹಿಸಲು ಸಾಧ್ಯವಾಗಿಲ್ಲ. ಮನುಷ್ಯನ ಸಾವಿನಲ್ಲಿ ಹಲವು ಸಂಗತಿಗಳು ಅಡಗಿರುವಾಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ.ಸದ್ಯ ಈ ವಿಚಾರ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. 


3 ನಿಮಿಷದಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ ಘಟನೆ ಆಘಾತವನ್ನುಂಟು ಮಾಡಿದೆ. ಇದನ್ನು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಮೂರು ನಿಮಿಷದಲ್ಲಿ ಮೃತಪಟ್ಟು ಮತ್ತೆ ಬದುಕಿ ಬಂದಿರುವುದಾಗಿ ಆವ್ಯಕ್ತಿ ಹೇಳಿಕೊಂಡಿದ್ದಾರೆ. ಮಿತಿಮೀರಿದ ಮಧ್ಯದ ಸೇವನೆಯಿಂದಾಗಿ, ವ್ಯಕ್ತಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿ ಹೇಳುತ್ತದೆ.


ಆಂಬ್ಯುಲೆನ್ಸ್‌ನಲ್ಲಿದ್ದ ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು, ಎದೆಬಡಿತವೂ ನಿಂತಿತು ಎಂದರು. ಬದುಕುಳಿಯುವ ಸಾಧ್ಯತೆ ಇಲ್ಲ ಎಂದಿದ್ದರು, ಮೂರು ನಿಮಿಷಗಳ ನಂತರ ವ್ಯಕ್ತಿ ಬದುಕಿ ಬಂದಿದ್ದಾರೆ. ಈ ವಿಚಾರ ಇದೀಗ ವೈದ್ಯರಿಗೆ ಅಚ್ಚರಿ ಮೂಡಿಸಿದೆ. 


ಮೂರು ನಿಮಿಷಗಳ ಅನುಭವವನ್ನು ಹಂಚಿಕೊಂಡ ಅವರು, ಸತ್ತ ನಂತರ ತಣ್ಣನೆಯಾದ ಪ್ರದೇಶದಲ್ಲಿ ಇದ್ದಂತೆ ಬಾಸವಾಗಿತ್ತು, ಆ ಪ್ರದೇಶ ನಿಗೂಢವಾಗಿತ್ತು. 3 ನಿಮಿಷಗಳ ನಂತರ ಎಚ್ಚರವಾದಾಗ ನರಕದಲ್ಲಿದ್ದಂತೆ ಅನಿಸಿತ್ತು. ಈ ವಿಷಯವನ್ನು ಆ ವ್ಯಕ್ತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.