Viral News: ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಈ ಫೋಟೋ!
Viral News: ಈ ಬಗ್ಗೆ ಮಾಹಿತಿ ನೀಡಿರುವ ಐಎಫ್‌ಎಸ್ ಅಧಿಕಾರಿ, ಇದು ಸಾಮಾನ್ಯವಾಗಿ ಮರದ ಬುಡದಲ್ಲಿ ಬೆಳೆಯುತ್ತದೆ. ಕ್ಸೈಲೇರಿಯಾ ಪಾಲಿಮಾರ್ಫಾ ಎಂದು ಕರೆಯಲ್ಪಡುವ ಇದನ್ನು ಸಾಮಾನ್ಯವಾಗಿ ಸತ್ತ ಮನುಷ್ಯನ ಬೆರಳುಗಳು ಅಂತಾ ಕರೆಯುತ್ತಾರೆ ಎಂದು ಹೇಳಿದ್ದಾರೆ.
ನವದೆಹಲಿ: ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿರುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಫೋಟೋ ನೋಡುಗರ ಕುತೂಹಲ ಕೆರಳಿಸಿದ್ದು, ವ್ಯಾಪಕವಾಗಿ ಶೇರ್ ಆಗುತ್ತಿದೆ. ಮರದ ಕೆಳಗೆ ಮಾನವನ ಕಾಲುಗಳ ಬೆರಳುಗಳಂತೆ ಕಾಣುವ ದೃಶ್ಯವನ್ನು ನೀವು ನೋಡಬಹುದು.
ಈ ಫೋಟೋವನ್ನು ನೋಡಿ ಅನೇಕರು ಇದು ದೆವ್ವದ ಕಾಲುಗಳು ಅಂತಾ ಭಯ ವ್ಯಕ್ತಪಡಿಸಿದ್ದಾರೆ. ಆದರೆ ನಿಜಕ್ಕೂ ಅಲ್ಲಿ ಇರುವುದು ಏನು ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಅಂದಹಾಗೆ ಪರ್ವಿನ್ ಕಸ್ವಾನ್ ಅವರು ಮಾನವನ ಬೆರಳಗಳಂತೆ ಕಾಣುವ ಅಣಬೆಯ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕ್ರಿಮಿನಲ್‌ಗಳ ಅಂತ್ಯಸಂಸ್ಕಾರ ಗ್ಯಾರಂಟಿ: ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ!
ಸಪ್ರೊಬಿಕ್ ಶಿಲೀಂಧ್ರ ಇದ್ದಾಗಿದ್ದು, ಇದು ಉದ್ದ ಮತ್ತು ನೇರವಾಗಿ ನೆಲದ ಮೇಲೆ ಕಾಲೂರಿರುವಂತೆ ಕಾಣುತ್ತದೆ. ಲಕ್ಷಾಂತರ ಜನರು ಈ ಫೋಟೋವನ್ನು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ನೋಡುವ ಜನರಿಗೆ ಇದು ಭಯ ಹುಟ್ಟಿಸುತ್ತದೆ, ಆದರೆ ಇದು ಅಣಬೆ ಅಷ್ಟೇ. ಹೀಗಾಗಿ ಯಾರೂ ಹೆದರಬೇಕಿಲ್ಲವೆಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆಣ್ಮಕ್ಳೆ ಸ್ಟ್ರಾಂಗು ಗುರು.. ಭಾರತದ ಈ ಪ್ರದೇಶದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮದ್ಯಪಾನ ಮಾಡ್ತಾರಂತೆ!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.