ನವದೆಹಲಿ: ಪ್ರಪಂಚದಲ್ಲಿ ಹಲವು ಜನರು ವಿಭಿನ್ನ ರೀತಿಯಲ್ಲಿ ದಾಖಲೆ ನಿರ್ಮಿಸಿದ್ದಾರೆ. ಉದ್ದದ ನಾಲಿಗೆ, ಉದ್ದದ ಉಗುರು, ಉದ್ದದ ಕೂದಲು ಹೀಗೆ ನಾನಾ ರೀತಿಯಲ್ಲಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದೇ ರೀತಿ ಅಮೆರಿಕದ ಮಹಿಳೆಯೊಬ್ಬರು ತನ್ನ ಗಡ್ಡದ ಮೂಲಕ ಗಮನ ಸೆಳೆದಿದ್ದಾಳೆ.


COMMERCIAL BREAK
SCROLL TO CONTINUE READING

ಹೌದು, ಅಮೆರಿಕದ ಮಿಚಿಗನ್‌ನ 38 ವರ್ಷದ ಎರಿನ್ ಹನಿಕಟ್ ಅತಿಉದ್ದದ ಗಡ್ಡ ಹೊಂದುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾಳೆ. ವಿಶೇಷವೆಂದರೆ ಎರಿನ್ ಹನಿಕಟ್ ತನ್ನ 11.8-ಇಂಚಿನ (29.9 cm) ಗಡ್ಡವನ್ನು ಸುಮಾರು 2 ವರ್ಷಗಳಿಂದ ಬೆಳೆಸುತ್ತಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ: ಕಿಂಗ್ ಮೊಹಮ್ಮದ್ VI ಅವರನ್ನು ಟೀಕಿಸಿದ್ದಕ್ಕಾಗಿ ಮೊರಾಕೊ ವ್ಯಕ್ತಿ ಬಂಧನ 


ಮಹಿಳೆಯರಲ್ಲಿ ಅತಿಯಾದ ಕೂದಲು ಬೆಳವಣಿಗೆಗೆ ಕಾರಣವಾಗುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (PCOS)ಕಾಯಿಲೆಯಿಂದ ಎರಿನ್ ಹನಿಕಟ್ ಬಳಲುತ್ತಿದ್ದು, 11.8 ಇಂಚು ಉದ್ದದ ಗಡ್ಡವನ್ನು ಬೆಳೆಸುವ ಮೂಲಕ ಈ ವಿಶೇಷ ಸಾಧನೆ ಮಾಡಿದ್ದಾಳೆ. PCOS ಸ್ಥಿತಿಯು ಹಾರ್ಮೋನುಗಳ ಅಸಮತೋಲನ, ಅನಿಯಮಿತ ಮುಟ್ಟು, ತೂಕ ಹೆಚ್ಚಾಗುವಿಕೆ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ.


World Biggest King Cobra: ಕ್ಷಣಮಾತ್ರದಲ್ಲಿ ಹೆಬ್ಬಾವು-ಮೊಸಳೆ ನುಂಗುವ ವಿಶ್ವದ ಅತಿದೊಡ್ಡ ಹಾವು!


ಗಡ್ಡ ಬೆಳೆಯಲು ಪ್ರಾರಂಭಿಸಿದಂತೆ ಆಕೆ ಶೇವಿಂಗ್, ವ್ಯಾಕ್ಸಿಂಗ್ ಮತ್ತು ಹೆಚ್ಚುವರಿ ಕೂದಲನ್ನು ತೆಗೆದುಹಾಕುವ ಉತ್ಪನ್ನಗಳನ್ನು ಬಳಸಲಾರಂಭಿಸಿದಳು. ಸ್ವಲ್ಪ ಸಮಯದ ನಂತರ ಆಕೆ ರಕ್ತದೊತ್ತಡದಿಂದ ಭಾಗಶಃ ದೃಷ್ಟಿ ಕಳೆದುಕೊಂಡಿದ್ದರು. ಅಲ್ಲಿಂದ ಅವರು ಕೂದಲು ತೆಗೆಯುವುದನ್ನು ನಿಲ್ಲಿಸಿದರು. ನಂತರ ಬ್ಯಾಕ್ಟೀರಿಯಾದಿಂದ ಅವರು ಒಂದು ಕಾಲನ್ನು ಸಹ ಕಳೆದುಕೊಂಡರು. ಬಳಿಕ ಗಡ್ಡವನ್ನು ಬೆಳೆಸುವತ್ತ ಗಮನ ಹರಿಸಿದರು. ಹೀಗಾಗಿ ಅವರು ವಿಶ್ವ ದಾಖಲೆ ನಿರ್ಮಿಸಲು ಸಾಧ್ಯವಾಯಿತು. ಇದೀಗ ತನ್ನ ಗಡ್ಡದ ಬಗ್ಗೆ ಎರಿನ್ ಹೆಮ್ಮೆ ವ್ಯಕ್ತಪಡಿಸಿದ್ದು, ನನಗೆ ಇದರಿಂದ ಖುಷಿಯಿದೆ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.