ನವದೆಹಲಿ: ಹಾವಿನ ಕಾದಾಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್  ಆಗುತ್ತಿರುತ್ತವೆ. ಆದರೆ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಪರಸ್ಪರ ಕಾದಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ಎರಡೂ ದೈತ್ಯ ಹಾವುಗಳು ತುಂಬಾ ಅಪಾಯಕಾರಿಯಾಗಿದ್ದು, ಇದೀಗ ಅವುಗಳ ಕಾಳಗಕ್ಕೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಕಾಳಗ ಎಷ್ಟು ಭೀಕರವಾಗಿರಬಹುದೆಂದು ನೀವು ಈ ಚಿತ್ರವನ್ನೂ ನೋಡಿಯೇ ಊಹಿಸಬಹುದು. .


COMMERCIAL BREAK
SCROLL TO CONTINUE READING

ಈ ಕಾದಾಟದಲ್ಲಿ  ಎರಡೂ ಹಾವುಗಳು ಪರಸ್ಪರ ದಾಳಿ ಇಟ್ಟು ಸಾವನ್ನಪ್ಪಿವೆ. ಈ ಚಿತ್ರವನ್ನು ಐಎಫ್‌ಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟರ್ (Viral News In Kannada) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪದ ಭೀಕರ ಕದನವನ್ನು ನೀವು ಕಾಣಬಹುದು. ಇದರಲ್ಲಿ ಎರಡೂ ಹಾವುಗಳು ಪ್ರಾಣ ಕಳೆದುಕೊಂಡಿವೆ.


ಇದನ್ನೂ ಓದಿ-Threads ಅಬ್ಬರದ ಆರಂಭ, 24 ಗಂಟೆಗಳಲ್ಲಿ 5 ಕೋಟಿ ಬಳಕೆದಾರರು ಪ್ಲಸ್ 9.5 ಕೋಟಿ ಪೊಸ್ಟ್ಗಳು!


ನಾಗರ ಹಾವು ಹೆಬ್ಬಾವನ್ನು ಕಚ್ಚಿದ್ದು, ಹೆಬ್ಬಾವು ನಾಗರ ಹಾವಿನ (Python King Cobra Fight) ಕತ್ತು ಹಿಸುಕಿ ಕೊಂದಿದೆ. ಐಎಫ್‌ಎಸ್ ಅಧಿಕಾರಿ ಈ ಚಿತ್ರದ ಜೊತೆಗೆ ಶೀರ್ಷಿಕೆಯನ್ನೂ ಬರೆದಿದ್ದಾರೆ, ತನ್ಮೂಲಕ ಮನುಷ್ಯರು ಈ ರೀತಿ ಪರಸ್ಪರ ನಾಶಪಡಿಸಲು ಮುಂದಾಗಿದ್ದಾರೆ ಎಂದು ಹೇಳಲು ಅವರು ಪ್ರಯತ್ನಿಸಿದ್ದಾರೆ.


ಇದನ್ನೂ ಓದಿ-Tech News: ಈ ದಿನ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳಲಿದೆ ಚಂದ್ರಯಾನ 3, ಮಾಹಿತಿ ನೀಡಿದ ಇಸ್ರೋ


ಈ ಚಿತ್ರವನ್ನು IFS ಅಧಿಕಾರಿ ಸುಶಾಂತ್ ನಂದಾ (@susantananda3) ತಮ್ಮ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಅವರು ಚಿತ್ರದ ಶೀರ್ಷಿಕೆಯಲ್ಲಿ ಬರೆದಿದ್ದಾರೆ, 'ಹೆಬ್ಬಾವು ನಾಗರಹಾವಿನ ಉಸಿರುಗಟ್ಟಿಸಿ ಅದರ ಜೀವ ತೆಗೆದಿದೆ, ಆದರೆ ನಾಗರಹಾವು ಕೂಡ ಹೆಬ್ಬಾವಿಗೆ ಕಚ್ಚಿದೇ. ಎರಡೂ ಹಾವುಗಳು ಉಸಿರುಗಟ್ಟುವಿಕೆ ಮತ್ತು ಇನ್ನೊಂದು ನಾಗರಹಾವಿನ ವಿಷಬಾಧೆಯಿಂದ ಸಾವನ್ನಪ್ಪಿವೆ. ಅದೇ ರೀತಿ ನಾವು ಸಹ ಒಬ್ಬರನ್ನೊಬ್ಬರು ನಾಶಪಡಿಸುತ್ತೇವೆ. ಇಂತಹ ಹುಚ್ಚುತನಕ್ಕೆ ಇತಿಹಾಸವೇ ಸಾಕ್ಷಿ....' ಈ ಟ್ವೀಟ್ ಸುದ್ದಿ ಬರೆಯುವಷ್ಟರಲ್ಲಿ ಚಿತ್ರ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.