ಕೆನಡಾ: ನೀವು ಇದುವರೆಗೆ ಜನರು ಸೋಫಾ, ಬೀರು ಅಥವಾ ಕಾರನ್ನು ಸ್ಥಳಾಂತರಿಸುವ ವಿಡಿಯೋಗಳನ್ನು ನೋಡಿರಬಹುದು, ಆದರೆ ಕೆನಡಾದ ನಿರ್ಮಾಣ ಕಂಪನಿಯೊಂದು ಭಾರಿ ಸಾಧನೆಯೊಂದನ್ನು ಮಾಡಿದ್ದು, ಅದು ನಂಬಲಸಾಧ್ಯವಾದಂತಹ ಕೆಲಸವಾಗಿದೆ. ಕೆನಡಾದ ಹ್ಯಾಲಿಫ್ಯಾಕ್ಸ್ ಪ್ರದೇಶದಲ್ಲಿನ ಐತಿಹಾಸಿಕ ಹೋಟೆಲ್ ಅನ್ನು ಸಂಪೂರ್ಣವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 'ವಿಕ್ಟೋರಿಯನ್ ಎಲ್ಮ್ವುಡ್' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಕಟ್ಟಡವು ಸುಮಾರು ಎರಡು ಶತಮಾನಗಳಷ್ಟು ಹಳೆಯದಾದ ಹೋಟೆಲ್ ಆಗಿದ್ದು ಇದನ್ನು 1826 ರಲ್ಲಿ ನಿರ್ಮಿಸಲಾಗಿದೆ. (Viral News In Kannada)


COMMERCIAL BREAK
SCROLL TO CONTINUE READING

220 ಟನ್ ಭಾರವಾದ ಕಟ್ಟಡವನ್ನು 30 ಅಡಿ ಪಕ್ಕಕ್ಕೆ ಸ್ಥಳಾಂತರಿಸಲಾಗಿದೆ
ಕಳೆದ ಸೋಮವಾರ, ಈ ಹೋಟೆಲ್ ಅನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಿರ್ಮಾಣ ಕಂಪನಿ 'ರಶ್ಟನ್' ಫೇಸ್‌ಬುಕ್‌ನಲ್ಲಿ ಅದರ ಟೈಮ್ ಲ್ಯಾಪ್ಸ್ ವೀಡಿಯೊವನ್ನು ಹಂಚಿಕೊಂಡಿದೆ, ಅದರಲ್ಲಿ ಹೋಟೆಲ್ ಅನ್ನು ಅದರ ಸ್ಥಳದಿಂದ ಸ್ಥಳಾಂತರಿಸುವುದನ್ನು ನೀವು ನೋಡಬಹುದು. 220 ಟನ್ ತೂಕದ ಈ ಹೋಟೆಲ್ ಅನ್ನು ಸ್ಥಳಾಂತರಿಸುವ ಜವಾಬ್ದಾರಿಯನ್ನು ಈ ಕಂಪನಿ ವಹಿಸಿಕೊಂಡಿತ್ತು.


ಈ ಕಂಪನಿಯು ಕಟ್ಟಡಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಪರಿಣಿತ ಎಂದು ಪರಿಗಣಿಸಲಾಗಿದೆ. ಆದರೆ ಈ ಐತಿಹಾಸಿಕ ಕಟ್ಟಡವನ್ನು ಅದರ ಸ್ಥಳದಿಂದ ಸ್ಥಳಾಂತರಿಸುವುದು ಕಂಪನಿಗೆ ಸಾಕಷ್ಟು ಸವಾಲಿನಿಂದ ಕೂಡಿತ್ತು ಎನ್ನಲಾಗಿದೆ.


ಇದನ್ನೂ ಓದಿ-ಜೋಡಿಗಳು ಪರಸ್ಪರ ಆಲಿಂಗಿಸಿ ಮಾಡುವ ಇಂತಹ ಯೋಗ ನೀವು ನಿಮ್ಮ ಲೈಫಲ್ಲೆ ನೋಡಿರಲಿಕ್ಕಿಲ್ಲ!


ಸಾಬೂನಿನ ಬಿಲ್ಲೆಗಳನ್ನು ಬಳಸಿ ಹೊಟೇಲ್ ಸ್ಥಳಾಂತರ
ನಿರ್ಮಾಣ ಕಂಪನಿಯು 700 ಸಾಬೂನುಗಳ ಸಹಾಯದಿಂದ ಸುಮಾರು 30 ಅಡಿಗಳಷ್ಟು ಹೋಟೆಲ್ ಅನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿದೆ.  ಈ ದೈತ್ಯ ಹೋಟೆಲ್ ಯಾವುದೇ ರೀತಿಯಲ್ಲಿ ಹಾನಿಗೊಳಗಾಗದಂತೆ ಸ್ಥಳಾಂತರಗೊಳಿಸಲು  ಲೂಬ್ರಿಕೇಶನ್‌ ರೂಪದಲ್ಲಿ ಸಾಬೂನು ಬಿಲ್ಲೆಗಳನ್ನು ವಿಶೇಷ ಮಾದರಿಯನ್ನು ಹರಡಲಾಯಿತು.


ಇದನ್ನೂ ಓದಿ-ಡೋಲು ಏರಿ ಕುಳಿತು ಡಾನ್ಸ್ ಮಾಡಿದ ವಧು, 'ನಾಳೆಯಿಂದ ನಾನು ಡೋಲು ಬಾರಿಸುವನಾಗುತ್ತೇನೆ' ಎಂದ ನೆಟ್ಟಿಗರು... ವಿಡಿಯೋ ಇಲ್ಲಿದೆ


ಅದನ್ನು ಎಳೆಯಲು ಎರಡು ದೊಡ್ಡ ಕ್ರೇನ್ ಮತ್ತು ಟ್ರಕ್ ಗಳನ್ನು ಬಳಸಲಾಗಿತ್ತು. ಮುಂದಿನ ಹಂತವು ಬ್ಯಾರಿಂಗ್ಟನ್ ಸ್ಟ್ರೀಟ್‌ನಲ್ಲಿ ಹೋಟೆಲ್ ಅನ್ನು ಇರಿಸುವುದಾಗಿದೆ. ಈಗ ಹೋಟೆಲ್‌ನ ಅಡಿಪಾಯವನ್ನು ದುರಸ್ತಿ ಮಾಡಿದ ನಂತರ, ಜನರು ಮತ್ತೊಮ್ಮೆ ಹ್ಯಾಲಿಫ್ಯಾಕ್ಸ್ ಪ್ರದೇಶದಲ್ಲಿ ಈ ಹೋಟೆಲ್ ನಲ್ಲಿ ಮಜಾ ಮಾಡಬಹುದಾಗಿದೆ.


ಇಲ್ಲಿದೆ ಆ ವೈರಲ್ ವಿಡಿಯೋ...



ಇದನ್ನೂ ನೋಡಿ-



ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ