ನವದೆಹಲಿ: ತಮಿಳುನಾಡಿನ  ಮಧುರೈ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಸದಸ್ಯನ ಮನೆಗೆ ಅಪರಿಚಿತರು ಪೆಟ್ರೋಲ್ ಬಾಂಬ್ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇಡೀ ಘಟನೆಯು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಶನಿವಾರ ಸಂಜೆ 7.38ರ ಸುಮಾರಿಗೆ ಈ ಘಟನೆ ನಡೆದಿದೆ. ಆದರೆ, ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ, ಈ ಘಟನೆಯ ನಂತರ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.


COMMERCIAL BREAK
SCROLL TO CONTINUE READING

 ಪೆಟ್ರೋಲ್ ಬಾಂಬ್ ಎಸೆದು ಬೈಕ್‍ನಲ್ಲಿ ಎಸ್ಕೇಪ್!


ವರದಿಯ ಪ್ರಕಾರ ಮಧುರೈನ ಪುರುಷ ಅನುಪಾಂಡಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಎಂ.ಎಸ್.ಕೃಷ್ಣನ್ ವಾಸಿಸುತ್ತಿದ್ದಾರೆ. ಇವರು ಆರ್‌ಎಸ್‌ಎಸ್ ಸದಸ್ಯರಾಗಿದ್ದಾರೆ. ಶನಿವಾರ ಸಂಜೆ 7:38ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಕೃಷ್ಣನ್ ಮನೆಯೊಳಗೆ 3 ಪೆಟ್ರೋಲ್ ಬಾಂಬ್‌ಗಳನ್ನು ಒಂದೊಂದಾಗಿ ಎಸೆದು ಪರಾರಿಯಾಗಿದ್ದಾರೆ. ಸಿಸಿಟಿವಿ ಫೂಟೇಜ್‌ನಲ್ಲಿ ಒಬ್ಬ ಹುಡುಗ ಕೃಷ್ಣನ್ ಅವರ ಮನೆಯತ್ತ ಓಡಿ ಬಂದು ಗೇಟ್ ಬಳಿ ನಿಂತುಕೊಂಡು 3 ಪೆಟ್ರೋಲ್ ಬಾಂಬ್‌ಗಳನ್ನು ಒಂದೊಂದಾಗಿ ಒಳಗೆ ಎಸೆಯುತ್ತಿರುವುದನ್ನು ನೀವು ಕಾಣಬಹುದು. ಬಾಂಬ್‍ಗಳನ್ನು ಎಸೆದ ತಕ್ಷಣವೇ ಆ ಯುವಕ ಬೈಕ್‍ನಲ್ಲಿ ಬಂದ ಆತನ ಜೊತೆಗಾರನ ಜೊತೆ ಎಸ್ಕೇಪ್ ಆಗಿದ್ದಾನೆ.


ಇದನ್ನೂ ಓದಿ: Car Export: ವಿದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿವೆ ಭಾರತದಲ್ಲಿ ತಯಾರಾದ ಈ 10 ಕಾರುಗಳು


ದೂರು ಸ್ವೀಕರಿಸಿದ ಪೊಲೀಸರಿಂದ ತನಿಖೆ


ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


ಇದನ್ನೂ ಓದಿ: Viral Photo: ಸಿಎಂ ಕುರ್ಚಿ ಮೇಲೆ ಕುಳಿತ ಏಕನಾಥ್ ಶಿಂಧೆ ಪುತ್ರ.! ಫೋಟೋ ವೈರಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.