ನವದೆಹಲಿ: ಬೃಹತ್ ಕಾರ್ಗೋ ಶಿಫ್ ಡಿಕ್ಕಿಯಾಗಿ ಸೇತುವೆ ಕುಸಿದು ಬಿದ್ದಿರುವ ಘಟನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದಿದೆ. ಬಾಲ್ಟಿಮೋರ್ ಬಂದರಿನಿಂದ ಹೊರಡುತ್ತಿದ್ದ ಈ ಸರಕು ಸಾಗಾಣಿಕೆ ಹಡಗು ಮುಂಜಾನೆ 1:30ರ ಸುಮಾರಿಗೆ ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ(Francis Scott Key bridge)ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸೇತುವೆಯ ಮೇಲೆ ಸಂಚರಿಸುತ್ತಿದ್ದ ಹಲವಾರು ವಾಹನಗಳು ಟಾಪ್ಸ್ಕೋ ನದಿಯೊಳಗೆ ಮುಳುಗಡೆಯಾಗಿವೆ. ಇದೇ ಸಂದರ್ಭದಲ್ಲಿ ಸೇತುವೆಯ ಮೇಲೆ ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು ಎಂದು ಮೇರಿಲ್ಯಾಂಡ್ ಸಾರಿಗೆ ಕಾರ್ಯದರ್ಶಿ ಪಾಲ್ ವೈಡೆಫೆಲ್ಡ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬೃಹತ್‌ ಕಾರ್ಗೋ ಶಿಫ್‌ ಸೇತುವೆಗೆ ಡಿಕ್ಕಿಯಾಗುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಸೇತುವೆಗೆ ಹಡಗು ಡಿಕ್ಕಿಯಾದ ಕೂಡಲೇ ಬೆಂಕಿ ಹೊತ್ತಿಕೊಂಡು ಉರಿದಿದೆ. ಈ ಘಟನೆಗೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನದಿಗೆ ಬಿದ್ದ ಕಾರಿನಲ್ಲಿದ್ದ ಹಲವಾರು ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.


ಈ ವಿಷಕಾರಿ ಹಾವಿನ ರಕ್ತ ಇಷ್ಟೆಲ್ಲ ಕಾಯಿಲೆಗೆ ಮದ್ದು.. ಸೌಂದರ್ಯದ ಜೊತೆ ಆರೋಗ್ಯಕ್ಕಾಗಿ ಇಲ್ಲಿನ ಜನ ಕುಡಿಯೋದು ಇದನ್ನೇ!!


ಸಿಂಗಾಪುರ ಮೂಲದ ಕಾರ್ಗೋ ಶಿಫ್‌ ಸೇತುವೆಗೆ ಡಿಕ್ಕಿಯಾಗಿದೆ. ಪರಿಣಾಮ ಸೇತುವೆಯ ಒಂದು ಭಾಗ ಕುಸಿದುಬಿದ್ದಿದೆ. ಪರಿಣಾಮ 20ಕ್ಕೂ ಹೆಚ್ಚು ಕಾರುಗಳು ನೀರಿಗೆ ಬಿದ್ದಿವೆ. ತಾಂತ್ರಿಕ ವೈಫಲ್ಯದಿಂದ ಈ ಘಟನೆ ನಡೆದಿದೆಯೋ ಅಥವಾ ಉಗ್ರರ ಕೃತ್ಯವೋ ಅನ್ನೋದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.  


ಟಾಪ್ಸ್ಕೋ ನದಿಗೆ ಒಟ್ಟು 2.6KM ಉದ್ದದ ಸೇತುವೆಯನ್ನು ಕಟ್ಟಲಾಗಿದೆ. 1977ರಲ್ಲಿ ಈ ಸೇತುವೆ ಉದ್ಘಾಟನೆಯಾಗಿದ್ದು, ವರ್ಷಕ್ಕೆ 1.1 ಕೋಟಿಗೂ ಅಧಿಕ ವಾಹನಗಳು ಇದರ ಮೇಲೆ ಸಂಚರಿಸುತ್ತಿವೆ. ಬಾಲ್ಟಿಮೋರ್‌ ಅಮೆರಿಕ ಪ್ರಮುಖ ಕೈಗಾರಿಕಾ ನಗರವಾಗಿದ್ದು, ಈ ಸೇತುವೆ ಒಳಗೊಂಡ ರಸ್ತೆ ಮಾರ್ಗ ಅಮೆರಿಕ ರಾಜಧಾನಿ ವಾಷಿಂಗ್ಟನ್‌ಗೆ ಸಂಪರ್ಕಿಸುತ್ತದೆ.


ಇದನ್ನೂ ಓದಿ:  ಪಾಕಿಸ್ತಾನದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಚೀನಿಯರು ಸಾವು


ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಸಾವು ಹಾಗೂ ಹಾನಿಯ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.