ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಚಿತ್ರ-ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ನೋಡಲು ಭಯಾನಕವಾಗಿರುತ್ತವೆ. ಅಂತಹದ್ದೇ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋದಲ್ಲಿ ಸ್ಕೂಟರ್ ಮೇಲೆ ಕುಳಿತ್ತಿದ್ದ ವ್ಯಕ್ತಿಯೊಬ್ಬರಿಗೆ ಬಿಳಿ ಬಟ್ಟೆಯಂತಹ ವಸ್ತು ಸುತ್ತುತ್ತಿರುವುದನ್ನು ನೀವು ಕಾಣಬಹುದು. ಮೊದ ಮೊದಲು ಆ ಬಿಳಿ ಬಟ್ಟೆಗೆ ಹೆದರಿದ ವ್ಯಕ್ತಿ ನಂತರ ಅದ್ನನು ಕಿತ್ತು ಬಿಸಾಕುತ್ತಾನೆ. ಈ ವಿಡಿಯೋ ನೋಡಿದ ಜನರು ಬಿಳಿ ಬಟ್ಟೆಯಲ್ಲಿ ಆತ್ಮ ಬಂದು ವ್ಯಕ್ತಿಗೆ ಅಟ್ಕಾಯಿಸಿಕೊಂಡಿದೆ ಎಂದು ಮಾತನಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ವೈರಲ್ ವಿಡಿಯೋದಲ್ಲಿ ಏನಿದೆ?


ವೈರಲ್ ಆಗುತ್ತಿರುವ ಈ ವಿಡಿಯೋವನ್ನು Discovery.engenharia ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದರೆ ಇದು ಯಾವುದೋ ಸಿಸಿಟಿವಿ ಕ್ಯಾಮೆರಾದ ದೃಶ್ಯವಿರುವಂತಿದೆ. ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ಸ್ಕೂಟರ್ ಮೇಲೆ ಕುಳಿತುಕೊಂಡಿರುತ್ತಾರೆ. ಕೆಲವು ವಾಹನಗಳು ರಸ್ತೆಯಲ್ಲಿ ಸಾಲಾಗಿ ನಿಂತಿರುವುದು ಕಂಡುಬರುತ್ತದೆ. ಬಹುಶಃ ಟ್ರಾಫಿಪ್‍ನಲ್ಲಿ ರೆಡ್ ಸಿಗ್ನಲ್ ಕಾರಣ ವಾಹನಗಳು ಸಿಲುಕಿಕೊಂಡಿರುವುದು ಕಂಡುಬರುತ್ತದೆ.



ಇದನ್ನೂ ಓದಿ: China plane crash Video : ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್ ವಿಮಾನ ‌- 40 ಜನರಿಗೆ ಗಾಯ


ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬದಿಯಿಂದ ಏಕಾಏಕಿ ಬಿಳಿ ಬಟ್ಟೆಯಂತಹ ವಸ್ತುವೊಂದು ಗಾಳಿಯಲ್ಲಿ ಹಾರಾಡುತ್ತಾ ಸ್ಕೂಟರ್ ಮೇಲೆ ಕುಳಿತ ವ್ಯಕ್ತಿಗೆ ಬಂದು ಅಂಟಿಕೊಳ್ಳುತ್ತದೆ. ಈ ವೇಳೆ ಆ ವ್ಯಕ್ತಿ ಭಯಭೀತನಾಗುತ್ತಾನೆ. ಬಳಿಕ ಹರಸಾಹಸ ಪಟ್ಟು ಅದನ್ನು ಕಿತ್ತು ಎಸೆಯುತ್ತಾನೆ.


ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಕೆಲವು ಈ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕರೆ, ಇನ್ನು ಕೆಲವರು ಇದು ಯಾವುದೋ ಆತ್ಮದ ಪ್ರಭಾವ ಅಂತಾ ಹೇಳಿದ್ದಾರೆ. ಒಬ್ಬ ಬಳಕೆದಾರನಂತೂ, ‘ಆತನಿಗೆ ಇಷ್ಟವಾದ ಯಾವುದೋ ಆತ್ಮ ಅಪ್ಪಿಕೊಂಡು ಮುದ್ದಾಡಲು ಬಂದಿರಬೇಕು’ ಎಂದು ನಗೆ ಚಟಾಕಿ ಹಾರಿಸಿದ್ದಾನೆ. 3 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Viral Video: ವೇದಿಕೆಯಲ್ಲಿಯೇ ಸ್ಪರ್ಧಿಯ ಗಿಟಾರ್‌ ಒಡೆದುಹಾಕಿದ ಜಡ್ಜ್‌!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.