Viral Video: ಪ್ರೀತಿಯ ಜೋಡಿಗಳಿಗೆ ವ್ಯಾಲೆಂಟೈನ್ ವಾರ ಪ್ರಾರಂಭವಾಗಿದೆ. ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗಿನ ದಿನಗಳು ಪ್ರೀತಿಯಲ್ಲಿರುವ ಹುಡುಗ ಮತ್ತು ಹುಡುಗಿಯರಿಗೆ ತುಂಬಾ ವಿಶೇಷ ವಾಗಿರುತ್ತವೆ. ಪ್ರತಿ ದಿನವೂ ವಿಭಿನ್ನ ಸಂದರ್ಭ ಸನ್ನಿವೇಶಗಳನ್ನು ಹೊಂದಿರುತ್ತದೆ. ಅವುಗಳನ್ನು ಜನರು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಫೆಬ್ರವರಿ 8 ರಂದು ವ್ಯಾಲೆಂಟೈನ್ ವೀಕ್ ನಲ್ಲಿನ ಪ್ರಪೋಸ್ ಡೇ ಇತ್ತು. ಅಂದರೆ ಪ್ರೇಮಿಗಳು ಪರಸ್ಪರ ಪ್ರಪೋಸ್ ಮಾಡುತ್ತಾರೆ. ಇದರಲ್ಲಿ ಕೆಲವರ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ, ಕೆಲವರು ನಿರಾಶೆ ಅನುಭವಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡುತ್ತಿದ್ದಾನೆ. ಆದರೆ ತನಗೆ ಏನಾಯ್ತು ಎಂಬುದು ಅವನಿಗೂ ತಿಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. (Viral News In Kannada)


COMMERCIAL BREAK
SCROLL TO CONTINUE READING

ಗೆಳತಿಯಿಂದ ಭಾರಿ ಕಪಾಳಮೋಕ್ಷ
ಪ್ರೇಮಿಗಳ ವಾರದಲ್ಲಿ ಯಾರಾದರೂ ಪ್ರಪೋಸ್ ಮಾಡಿದಾಗ ಮತ್ತು ಅದು ಅವಳ ಬಾಯ್‌ಫ್ರೆಂಡ್ ಆಗಿದ್ದರೆ, ಹುಡುಗಿಯರು ತುಂಬಾ ಸಂತೋಷಪಡುತ್ತಾರೆ. ಆದರೆ ಈ ಹುಡುಗಿಯ ಗೆಳೆಯ ಅವಳಿಗೆ ಪ್ರಪೋಸ್ ಮಾಡಿದಾಗ ಅವಳ ಮನಸ್ಸು ಬದಲಾಗುತ್ತದೆ ಮತ್ತು ತನ್ನ ಗೆಳೆಯನಿಗೆ ಆಕೆ ಕಪಾಳಮೋಕ್ಷ ಮಾಡುತ್ತಾಳೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಗೆಳತಿ ಮತ್ತು ಗೆಳೆಯ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಗೆಳತಿ ಮತ್ತು ಗೆಳೆಯ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ. ಅದರ ನಂತರ, ಫಿಲ್ಮಿ ಸ್ಟೈಲ್ ನಲ್ಲಿ, ಗೆಳೆಯ ತನ್ನ ಮೊಣಕಾಲುಗಳ ಮೇಲೆ ಕುಳಿತು ರಿಂಗ್ ಬಾಕ್ಸ್ ಅನ್ನು ಹೊರತೆಗೆಯುತ್ತಾನೆ. ಇದನ್ನು ನೋಡಿದ ಗೆಳತಿ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಅದರಲ್ಲಿ ವಜ್ರ ಅಥವಾ ಚಿನ್ನದ ಉಂಗುರ ಇರಲಿದೆ ಎಂಬುದು ಬಹುಶಃ ಆಕೆಯ ಭಾವನೆಯಾಗಿರಬಹುದು.  ಆದರೆ, ಆಕೆಯ ಗೆಳೆಯ ಮಾತ್ರ ಆಕೆಯ ಈ ಹಗಲುಗನಸನ್ನು ನುಚ್ಚುನೂರು ಮಾಡುತ್ತಾನೆ. ಚಿನ್ನದ ಅಥವಾ ವಜ್ರದ ಉಂಗುರದ ಬದಲಿಗೆ, ಕ್ಯಾಂಡಿ ಉಂಗುರವು ಪೆಟ್ಟಿಗೆಯಿಂದ ಹೊರಬರುತ್ತದೆ. ಇದನ್ನು ನೋಡಿದ ಹುಡುಗಿ ಮನನೊಂದು ಬಾಯ್ ಫ್ರೆಂಡ್ ಗೆ ಕಪಾಳಮೋಕ್ಷ ಮಾಡುತ್ತಾಳೆ. ಮತ್ತು ಅವಳು ಜಾಕೆಟ್ ಅನ್ನು ಅವನ ಮೇಲೆ ಎಸೆದು ಹೋಗುತ್ತಾಳೆ. ಈ ವಿಡಿಯೋ ನೋಡಿದ ಜನರು ಅಚ್ಚರಿಗೊಂಡಿದ್ದಾರೆ.


'ಮದುವೆ ಆಗದಿರುವುದು ಒಳ್ಳೆಯದು'
ವೈರಲ್ ಆಗುತ್ತಿರುವ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @NoCapFights ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಸುಮಾರು 18 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಜನರಿಂದ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿದ ಓರ್ವ ಬಳಕೆದಾರ, 'ಹುಡುಗ ಮಾಡಿದ್ದೂ ಸರಿಯಲ್ಲ. ಆದರೆ ಹುಡುಗಿ ಅದನ್ನು ತಮಾಷೆಯಾಗಿಯೂ ತೆಗೆದುಕೊಳ್ಳಬಹುದು. ಆಕೆ ಈ ರೀತಿ ಪ್ರತಿಕ್ರಿಯಿಸುವ ಅಗತ್ಯವಿರಲಿಲ್ಲ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಅವಳು ಚಿನ್ನಾಭರಣ ಮಾಡುವವನನ್ನು ಮದುವೆಯಾಗದಿರುವುದು ಒಳ್ಳೆಯದು' ಎಂದು ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮೂರನೇ ಬಳಕೆದಾರರು, 'ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗ ಅವರು ಪರಸ್ಪರ ಇಷ್ಟಪಟ್ಟಿದ್ದಾರೆ ಎಂದು ನಾನು ಭಾವಿಸಿದೆ, ಆದರೆ ನಂತರ ಏನಾಯಿತು' ಎಂದು ಬರೆದಿದ್ದಾರೆ.


ಇಲ್ಲಿದೆ ವೈರಲ್ ವಿಡಿಯೋ 


https://twitter.com/NoCapFights/status/1754784891005468909


ಇದನ್ನೂ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ