ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನ ಅಯೋಧ್ಯಾ ನಗರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ತನ್ನ ಸಹೋದರಿ ಪ್ರಿಯಕರನೊಂದಿಗೆ ಬೈಕ್‍ನಲ್ಲಿ ಹೋಗುತ್ತಿರುವುದನ್ನು ಕಂಡ ಸಹೋದರ ಮಿನಿ ಟ್ರಕ್‍ನೊಂದಿಗೆ ಬೈಕ್ ಹಿಂಬಾಲಿಸಿ ಡಿಕ್ಕಿ ಹೊಡೆಸಿ ಕೊಲ್ಲಲು ಯತ್ನಿಸಿದ್ದಾನೆ.


COMMERCIAL BREAK
SCROLL TO CONTINUE READING

ಅತಿವೇಗದಲ್ಲಿ ಮಿನಿ ಟ್ರಕ್‍ನಲ್ಲಿ ಬಂದು ಬೈಕ್‍ಗೆ ಡಿಕ್ಕಿ ಹೊಡೆಸಿರುವ ದೃಶ‍್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.  ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಬೈಕ್‍ಗೆ ಮಿನಿ ಟ್ರಕ್‍ನಿಂದ ಡಿಕ್ಕಿಹೊಡೆಸುವ ದೃಶ್ಯ ನೋಡಲು ತುಂಬಾ ಭಯಾನಕವಾಗಿದೆ.


ಇದನ್ನೂ ಓದಿ: ಸ್ನಾನಕ್ಕೆಂದು ತೆರಳಿದ್ದ ಆಶ್ರಮದ ನಾಲ್ವರು ಬಾಲಕಿಯರು ನೀರುಪಾಲು


ಪ್ರೇಮಿ ಜೊತೆಗೆ ಸಹೋದರಿ ಕಂಡ ಅಣ್ಣನಿಗೆ ಕೋಪ!


ತನ್ನಸಹೋದರಿ ಪ್ರೇಮಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಳೆ ಅನ್ನೋದನ್ನು ತಿಳಿದ ಆಕೆಯ ಸಹೋದರನಿಗೆ ಕೋಪ ನೆತ್ತಿಗೇರಿದೆ. ಇಬ್ಬರಿಗೂ ಸರಿಯಾಗಿ ಬುದ್ದಿ ಕಲಿಸಬೇಕೆಂದು ನಿರ್ಧರಿಸಿದ ಆತ ಕೋಪದಲ್ಲಿ ಅತಿವೇಗವಾಗಿ ಮಿನಿ ಲಾರಿ ಚಲಾಯಿಸಿಕೊಂಡು ಬಂದು ಬೈಕ್‍ಗೆ ಡಿಕ್ಕಿ ಹೊಡೆಸಿದ್ದಾನೆ.


ಬೈಕ್‌ಗೆ ಮಿನಿ ಟ್ರಕ್ ಡಿಕ್ಕಿಯಾದ ರಭಸಕ್ಕೆ ಪ್ರೇಮಿಗಳಿಬ್ಬರು ಕೆಳಕ್ಕೆ ಬಿದ್ದಿದ್ದಾರೆ. ವೇಗವಾಗಿ ಬಂದ ಮಿನಿ ಟ್ರಕ್ ಬೈಕ್‍ಗೆ ಡಿಕ್ಕಿ ಹೊಡೆದು ಸುಮಾರು 10 ಮೀಟರ್ ಮುಂದಕ್ಕೆ ಎಳೆದುಕೊಂಡು ಹೋಗಿದೆ. ಈ ವೇಳೆ ಯುವತಿಯನ್ನು ಅಲ್ಲಿಯೇ ಬಿಟ್ಟು ಪ್ರೇಮಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಯುವತಿಯ ಸಹೋದರ ಆತನನ್ನು ಹಿಡಿದು ಥಳಿಸಿದ್ದಾನೆ. ಬಳಿಕ ಯುವತಿಯ ಸಹೋದರ ಮತ್ತು ಪ್ರಿಯಕರನ ನಡುವೆ ದೊಡ್ಡ ಜಗಳವೇ ನಡೆದಿದೆ. ನಡುರಸ್ತೆಯಲ್ಲಿಯೇ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜನರು ಸೇರುತ್ತಿದ್ದಂತೆಯೇ ಯುವತಿಯ ಸಹೋದರ ಸ್ಥಳದಿಂದ ಕಾಲ್ಕಿತ್ತಿದ್ದಾನೆ.


ಇದನ್ನೂ ಓದಿ: ಗುಡಿಸಿಲಿಗೆ ಬೆಂಕಿ: ಐವರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಜೀವ ದಹನ!


ಬಳಿಕ ಸ್ಥಳೀಯರು ಘಟನೆಯಲ್ಲಿ ಗಾಯಗೊಂಡ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಯುವತಿಯ ಪ್ರಿಯಕರ ಆಕೆಯ ಸಹೋದರನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಯುವತಿ ಸಹೋದರ ಹಾಗೂ ಆತನ ಸಹಚರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.