Delhi Metro Cat Fight Viral Video: ಸಾಮಾನ್ಯವಾಗಿ ದೆಹಲಿ ಮೆಟ್ರೊ ಅನ್ನು ಎನ್ಸಿಆರ್ ಬೆನ್ನೇಲಬು ಎಂದು ಕರೆಯಲಾಗುತ್ತದೆ. ಏಕೆಂದರೆ ದಿನನಿತ್ಯ  ಸುಮಾರು 60 ಲಕ್ಷ ಜನರನ್ನು ಸಾಗಿಸುವ ದೆಹಲಿ ಮೆಟ್ರೋ ಇತರ ಕಾರಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಗಲೀದೆ. ಕಳೆದ ಕೆಲವು ತಿಂಗಳುಗಳಿಂದ, ಜನರು ದಿನನಿತ್ಯ ದೆಹಲಿ ಮೆಟ್ರೋದಲ್ಲಿ ವಿಚಿತ್ರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬರುತ್ತಿದೆ (Viral News In Kannada)


COMMERCIAL BREAK
SCROLL TO CONTINUE READING

ಕೆಲವೊಮ್ಮೆ ಜನರು ಈ ರೈಲಿನಲ್ಲಿ ಡಾನ್ಸ್ ಮಾಡಿದರೆ, ಇನ್ನೂ ಕೆಲವೊಮ್ಮೆ ಜನರು ಅಶ್ಲೀಲವಾಗಿ ವರ್ತಿಸುತ್ತಿದ್ದಾರೆ. ಏತನ್ಮಧ್ಯೆ ಜನ ಆಸನಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುವ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಅಂತಹುದೇ ದೆಹಲಿ ಮೆಟ್ರೋದ ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಇಬ್ಬರು ಯುವತಿಯರು ಆಸನಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುಟ್ಟಿರುವುದನ್ನು ನೀವು ನೋಡಬಹುದು. ವೀಡಿಯೋ ದೆಹಲಿ ಮೆಟ್ರೋದ ಎಲ್ಲೋ ಲೈನ್ ವಿಡಿಯೋ ಆಗಿದೆ. ಪೂರ್ಣ ಸಂಗತಿ ಏನು ತಿಳಿದುಕೊಳ್ಳೋಣ ಬನ್ನಿ, 


ಆಸನಕ್ಕಾಗಿ ಜಗಳ
ವಾಸ್ತವದಲ್ಲಿ ಇದು ದೆಹಲಿ ಮೆಟ್ರೊನಲ್ಲಿ ಆಸನಕ್ಕಾಗಿ ನಡೆದ ಒಂದು ಹೊಡೆದಾಟದ ವಿಡಿಯೋ ಆಗಿದೆ. ಸೀಟಿನಲ್ಲಿ ಕುಳಿತ ಯುವತಿ ಬಾಗಿಲ ಬಳಿ ನಿಂತಿದ್ದ ಯುವತಿಯ ಜೊತೆಗೆ ವಾಗ್ವಾದಕ್ಕಿಳಿದಿದ್ದು, ಈ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ ಯುವತಿ ಮತ್ತೊಬ್ಬ ಯುವತಿಯನ್ನು ತಳ್ಳಿ ಭುಜಕ್ಕೆ ಹೊಡೆದಿರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಇದಕ್ಕೆ ಬೇರೆ ಯುವತಿ ನನಗೆ ಗೊತ್ತಿಲ್ಲ, ಈಗ ನೇರವಾಗಿ ಜೈಲಿಗೆ ಹೋಗುವಿ ಎಂದು ಹೇಳುತ್ತಾಳೆ.


ಇದನ್ನೂ ಓದಿ-Viral Video: ತನ್ನ ಕಣ್ಣೆದುರಲ್ಲೇ ಪರಪುರುಷನಿಗೆ ಕಿಸ್ ಮಾಡಿದ ಪತ್ನಿ! ಪತಿ ಮಾಡಿದ್ದೇನು ನೀವೇ ನೋಡಿ!


ಈ ವೇಳೆ ಸೀಟಿನ ಮೇಲೆ ಕುಳಿತಿದ್ದ ಯುವತಿ  ತನ್ನ ಕಾಲಿನಿಂದ ಬೇರೆ ಯುವತಿಯನ್ನು ತನ್ನ ಕಾಲಿನಿಂದ ಬೀಳಿಸಲು ಯತ್ನಿಸುತ್ತಿದ್ದಾಳೆ. ಅಷ್ಟೇ ಅಲ್ಲ ಮಹಿಳೆಯರು ಪರಸ್ಪರ ಬೆದರಿಕೆ ಹಾಕುತ್ತಿದ್ದಾರೆ. ಅವರು ಪರಸ್ಪರ ಒದೆಯುವ ಬಗ್ಗೆಯೂ ಮಾತನಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.


ಇದನ್ನೂ ಓದಿ-OMG! ಆಗಸದಲ್ಲಿಯೇ ಫುಟ್ಬಾಲ್ ಗ್ರೌಂಡ್ ತಯಾರಿಸಿದೆ ಈ ದೇಶ, ನಂಬಿಕೆ ಇಲ್ಲಾ ಅಂದ್ರೆ ಒಮ್ಮೆ ವಿಡಿಯೋ ನೋಡಿ


ತರಹೇವಾಗಿ ಕಾಮೆಂಟ್ ಮಾಡುತ್ತಿರುವ ಜನ
Unfilterdelhi ಹೆಸರಿನ Instagram ಖಾತೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆದ ವಿಡಿಯೋವನ್ನು ಇದುವರೆಗೆ 25 ಸಾವಿರ ಮಂದಿ ವೀಕ್ಷಿಸಿದ್ದಾರೆ. ಇದರ ಜೊತೆಗೆ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ  ಬಳಕೆದಾರರು "ನೀವು ಹೀಗೆ ಏಕೆ ಮಾಡುತ್ತೀರಿ?" ಎಂದು ಬರೆದರೆ, ಮತ್ತೊಬ್ಬ ಬಳಕೆದಾರರು ದೆಹಲಿ ಮೆಟ್ರೋವನ್ನು ಕುಸ್ತಿ ಅಖಾಡ ಮಾಡಲಾಗಿದೆ ಎಂದು ಬರೆದಿದ್ದಾರೆ. ಇದೆಲ್ಲವೂ ಮೆಟ್ರೋದಲ್ಲಿ ದೈನಂದಿನ ದಿನಚರಿಯಾಗಿದೆ ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ