ನವದೆಹಲಿ: ಚೀನಾದ ಶಾಂಘೈನಲ್ಲಿರುವ ಐಕಿಯಾ ಮಳಿಗೆಗೆ ಶಾಪಿಂಗ್ ಮಾಡಲು ಬಂದಿದ್ದ ಗ್ರಾಹಕರು ದಿಕ್ಕಾಪಾಲಾಗಿ ಓಡಿ ಹೋಗಿರುವ ಘಟನೆ ನಡೆದಿದೆ. ಇದರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಚೈನಾದಲ್ಲಿ ಮತ್ತೆ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದು, ಭಾರೀ ಆತಂಕ ಮೂಡಿಸಿದೆ. ಐಕಿಯಾ ಮಳಿಗೆಗೆ ಶಾಪಿಂಗ್ ಮಾಡಲು ಬಂದಿದ್ದ ವೇಳೆ ಬಲವಂತವಾಗಿ ಕ್ವಾರಂಟೈನ್ ಮಾಡಲು ಪ್ರಯತ್ನಿಸಿದ ಸಿಬ್ಬಂದಿಯಿಂದ ಗ್ರಾಹಕರು ತಪ್ಪಿಸಿಕೊಂಡು ಹೋಗಿದ್ದಾರೆ. ಈ ವೇಳೆ ತಳ್ಳಾಟ-ನೂಕಾಟ ನಡೆದು ಕೆಲಕಾಲ ಸ್ಥಳದಲ್ಲಿ ದೊಡ್ಡ ಗಲಾಟೆಯೇ ನಡೆದಿದೆ. ಆಗಸ್ಟ್​ 13ರಂದು ಕ್ಸುಹುಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: Milk Price Hike: ಮತ್ತೆ ಹಾಲಿನ ಬೆಲೆಯಲ್ಲಿ ಹೆಚ್ಚಳ: ಹೀಗಿದೆ ನೋಡಿ ಪರಿಷ್ಕೃತ ದರ


ಕೋವಿಡ್-19 ಪ್ರಕರಣದ ಕ್ಲೋಸ್ ಕಾಂಟ್ಯಾಕ್ಟ್ ಹೊಂದಿದ್ದ ಗ್ರಾಹಕರೊಬ್ಬರು ಪತ್ತೆಯಾಗಿದ್ದರು. ಹೀಗಾಗಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಆರೋಗ್ಯ ಅಧಿಕಾರಿಗಳು ಇಡೀ ಐಕಿಯಾ ಮಳಿಗೆಯನ್ನೇ ಲಾಕ್ ಮಾಡಲು ಪ್ರಯತ್ನಿಸಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಗ್ರಾಹಕರು ಮಳಿಗೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಗಲಾಟೆ ಮಾಡಿದ್ದಾರೆ.


ಐಕಿಯಾ ಮಳಿಗೆಯ ಬಾಗಿಲು ಮುಚ್ಚಲು ಪ್ರಯತ್ನಿಸುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ತಳ್ಳಿಕೊಂಡು ಹೊರಬಂದ ಜನರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ಈ ವೇಳೆ ತಮ್ಮನ್ನು ಎಲ್ಲಿ ಮಳಿಗೆಯಲ್ಲಿಯೇ ಕ್ವಾರಂಟೈನ್ ಮಾಡುತ್ತಾರೆಂದು ಭಯಬಿದ್ದು ಜೋರಾಗಿ ಕಿರುಚಾಡಿದ್ದಾರೆ. ಈ ಮಳಿಗೆಯಲ್ಲಿದ್ದವರನ್ನು ಮುಂಜಾಗೃತಾ ಕ್ರಮವಾಗಿ ಕಾನ್ಸಂಟ್ರೇಶನ್​ ಕ್ಯಾಂಪ್​ಗೆ ಕಳುಹಿಸಬಹುದಾದ ಸಾಧ್ಯತೆ ಇತ್ತು ಅಂತಾ ಟ್ವಿಟರ್​ ಬಳಕೆದಾರರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಐಕಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಪಹಲ್ಗಾಮ್‌ನ ಚಂದನ್‌ವಾಡಿಯಲ್ಲಿ ಐಟಿಬಿಪಿ ಬಸ್ ಅಪಘಾತ


ಈ ಬಗ್ಗೆ ಮಾತನಾಡಿರುವ ಶಾಂಘೈ ಆರೋಗ್ಯ ಆಯೋಗದ ಉಪ ನಿರ್ದೇಶಕ ಝಾಮೋ ದಂಡನ್, ‘​ಟಿಬೆಟ್‌ನ ಲಾಸಾಗೆ ಭೇಟಿ ನೀಡಿದ ನಂತರ ಪಾಸಿಟಿವ್ ಪರೀಕ್ಷೆ ನಡೆಸಿದ 6 ವರ್ಷದ ಬಾಲಕನ ನಿಕಟ ಸಂಪರ್ಕದಿಂದಾಗಿ ಐಕಿಯಾ ಅಂಗಡಿಯನ್ನು ಹಠಾತ್ ಸ್ಥಗಿತಗೊಳಿಸಲು ಆದೇಶಿಸಲಾಗಿದೆ’ ಎಂದು ಹೇಳಿದ್ದಾರೆ. ಝಾಮೋ ಪ್ರಕಾರ Ikea ಮಳಿಗೆ ಮತ್ತು ಸಂಬಂಧಿತ ಪ್ರದೇಶಗಳಲ್ಲಿ ಇದ್ದವರು 2 ದಿನಗಳ ಕಾಲ ಸಂಪರ್ಕತಡೆಯನ್ನು ಹೊಂದಿರಬೇಕು ಮತ್ತು ನಂತರ 5 ದಿನಗಳ ಆರೋಗ್ಯ ಮೇಲ್ವಿಚಾರಣೆ ಮಾಡಬೇಕು. 6 ವರ್ಷದ ಬಾಲಕನ ಸುಮಾರು 400 ನಿಕಟ ಸಂಪರ್ಕಗಳನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಆದೇಶಿಸಲಾಗಿದೆ ಎಂದು ಶಾಂಘೈ ಡೈಲಿ ವರದಿ ಮಾಡಿದೆ.


ಈ ವರ್ಷದ ಆರಂಭದಲ್ಲಿ 2 ತಿಂಗಳ ಕಟ್ಟುನಿಟ್ಟಿನ ಲಾಕ್‌ಡೌನ್ ನಂತರ ಚೀನೀ ಕಮ್ಯುನಿಸ್ಟ್ ಪಕ್ಷವು ಪಾಸಿಟಿವ್ ಪ್ರಕರಣಗಳು ಅಥವಾ ಅವರ ನಿಕಟ ಸಂಪರ್ಕಗಳು ಪತ್ತೆಯಾದ ಪ್ರದೇಶಗಳ ಮೇಲೆ ಲಾಕ್‌ಡೌನ್‌ ನಿರ್ಬಂಧ ಹೇರುವಂತೆ ಆದೇಶಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.