ನವದೆಹಲಿ: ಮದುವೆ ಅಂದರೆ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಬಂಧು-ಬಳಗ, ಸ್ನೇಹಿತರು-ಸಂಬಂಧಿಕರು ಸೇರಿದಂತೆ ಸಾವಿರಾರು ಜನರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಖುಷಿ ಪಡುತ್ತಾರೆ. ಇಂತಹ ಮದುವೆ ಸಂಭ್ರಮದ ಗಳಿಗೆಯಲ್ಲಿ ಡ್ಯಾನ್ಸ್‌ ಮಾಡುವುದು ಮತ್ತಷ್ಟು ಮೆರಗು ನೀಡುತ್ತದೆ. ಮದುವೆಗೆ ಆಗಮಿಸಿದ ಸಂಬಂಧಿಕರು, ಸ್ನೇಹಿತರು ವಧು-ವರರ ಜೊತೆಗೆ ಡ್ಯಾನ್ಸ್‌ ಮಾಡುವ ವಿಡಿಯೋಗಳನ್ನು ನೀವು ನೋಡಿಯೇ ಇರ್ತಿರಿ. ಅದೇ ರೀತಿಯ ಮತ್ತೊಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Republic Day 2024: ಇದು 75ನೇ ಗಣರಾಜ್ಯೋತ್ಸವವೇ ಅಥವಾ 76ನೇ ಆಚರಣೆಯೇ..?


@kushbridalstudioofficial ಎಂಬುವರ Instagram ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ವಧುವಿನ ಜೊತೆಗೆ ಆಕೆಯ ಸ್ನೇಹಿತೆಯರು ಸೊಂಟ ಬಳುಕಿಸಿ ಸಖತ್‌ ಆಗಿ ನೃತ್ಯ ಮಾಡಿದ್ದಾರೆ. ವಧು ಮತ್ತು ಅವಳ ಸ್ನೇಹಿತರು ಐಕಾನಿಕ್ Yaarana (ಯಾರಾನಾ) ಸಿನಿಮಾದ "ಮೇರಾ ಪಿಯಾ ಘರ್ ಆಯಾ"ದ ಹಾಡಿಗೆ ಭರ್ಜರಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಇಂಟರ್ನೆಟ್ ತುಂಬಾ ಸುತ್ತಾಡುತ್ತಿದ್ದು, ವಿಶ್ವದಾದ್ಯಂತ ವೀಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.



ಇದನ್ನೂ ಓದಿ: ಮಹಿಳಾ ಕೇಂದ್ರಿತ 75ನೇ ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಮುಖ್ಯ ಅತಿಥಿ


ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಕ್ಷಿಸಿದ್ದು, ವಧು ಮತ್ತು ಆಕೆಯ ಸ್ನೇಹಿತೆಯರ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ವಧು ಮತ್ತು ಆಕೆಯ ಸ್ನೇಹಿತೆಯರ ವಿಡಿಯೋಗೆ ಅನೇಕರು ಮೆಚ್ಚುಗೆ ಸೂಚಿಸಿ ಲವ್‌ ಇಮೋಜಿಗಳನ್ನು ಕಳುಹಿಸಿದ್ದಾರೆ. ಕೆಲವೇ ಸೆಕೆಂಡುಗಳ ಈ ವಿಡಿಯೋ ನೋಡುಗರ ಗಮನ ಸೆಳೆಯುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.