Viral Video: ಸಾಮಾಜಿಕ ಮಾಧ್ಯಮದಲ್ಲಿ ಆನೆಗಳಿಗೆ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಅವುಗಳಲ್ಲಿನ ಬಹುತೇಕ ವಿಡಿಯೋಗಳು ಮುದ್ದಾದ ಅಥವಾ ಜನರನ್ನು ಮನರಂಜಿಸುತ್ತಿರುವ ಆನೆಯ ವಿಡಿಯೋಗಲಾಗಿರುತ್ತವೆ, ಆದರೆ ಆನೆ ಹಲ್ಲೆಗೆ ಮುಂದಾಗುವ ವಿಡಿಯೋಗಳು ಅಪರೂಪಕ್ಕೆ ನೋಡಲು ಸಿಗುತ್ತವೆ. ಅಂತಹುದೇ ಒಂದು ಭಯಾನಕ ವಿಡಿಯೋವೊಂದು ಹೊರಬಿದ್ದಿದ್ದು, ಅಮಾಯಕ ಪ್ರಾಣಿ ಆನೆಯ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಕೆ ತನ್ನ ಲೈಫಲ್ಲೆ ಇನ್ಮುಂದೆ ಇಂತಹ ಕೆಲಸ ಮಾಡಲು ಹೋಗುವುದಿಲ್ಲ ಎಂಬಂತಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ಜನರನ್ನು ಬೆಚ್ಚಿ ಬೀಳಿಸಿದೆ. (Viral News In Kannada))


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಆನೆಗಳು ಶಾಂತಿಪ್ರಿಯ ಪ್ರಾಣಿಗಳಾಗಿರುತ್ತವೆ. ತನ್ನನ್ನು ಕೆರಳಿಸದೆ ಇರುವ ಯಾರ ಮೇಲೂ ಕೂಡ ಅವು ದಾಳಿ ಮಾಡುವುದಿಲ್ಲ. ಆನೆಗಳು ಪ್ರವಾಸಿಗರ ವಾಹನಗಳನ್ನು ಹಿಂಬಾಲಿಸುವ ಮತ್ತು ಕಳ್ಳ ಬೇಟೆಗಾರರನ್ನು ಹೆದರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆನೆಯೊಂದು ಮಹಿಳೆಯನ್ನು ತಳ್ಳುವ ಬಹುಶಃ ಮೊದಲ ವಿಡಿಯೋವೊಂದು ಇದೇ ವಾರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತಿದೆ.  ಇದರಲ್ಲಿ ಆನೆ ಮಹಿಳೆಗೆ ಆಹಾರ ನೀಡಲು ಪ್ರಯತ್ನಿಸುವಾಗ ಗಂಭೀರವಾಗಿ ಗಾಯಗೊಂಡಿದ್ದಾಳೆ. 


ಇದನ್ನೂ ಓದಿ-Viral Video: ರೀಲ್ ತಯಾರಿಸುವ ನಶೆಯಲ್ಲಿ ಪ್ರಾಣ ಪಣಕ್ಕಿಟ್ಟ ಯುವತಿ, ವಿಚಿತ್ರ ವರ್ತನೆ ಕಂಡು ನೆಟ್ಟಿಗರ ಪಿತ್ತ ನೆತ್ತಿಗೆರಿದೆ!


ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆ ಆನೆಯೊಂದಿಗೆ ಫ್ರೆಂಡ್ಲಿ ವರ್ತಿಸಲು ಆದರೆ ಮುಂದಕ್ಕೆ ಹೋಗಿದ್ದಾಳೆ. ಆನೆ ತನ್ನ ಆಹಾರವನ್ನು ತಿನ್ನುವುದರಲ್ಲಿ ನಿರತವಾಗಿದ್ದಾಗ, ಅವಳು ಅದರ ಹತ್ತಿರ ಹೋಗುತ್ತಾಳೆ. ಮುಂದೆ ಕೆಲವೇ ಕ್ಷಣಗಳಲ್ಲಿ  ಕೋಪಗೊಂಡ ಆನೆ ಮಹಿಳೆಯ ಮೇಲೆ ದಾಳಿ ನಡೆಸಿದೆ, ಇದರಿಂದಾಗಿ ಅವಳು ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಿಂದಕ್ಕೆ ಹಾರಿ ಬೀಳುತ್ತಾಳೆ. ನಾನ್-ಎಸ್ಥೆಟಿಕ್ ಥಿಂಗ್ಸ್ ಎಂಬ X ಹ್ಯಾಂಡಲ್ ಮೂಲಕ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.


ಇದನ್ನೂ ಓದಿ-Viral Video: ನೆಲದ ಮೇಲೆ ಮಲಗಿರುವ ಬಿಲ್ಡಿಂಗ್ ಎಂದಾದ್ರು ನೋಡಿದ್ದೀರಾ? ವಿಡಿಯೋ ನೋಡಿ


ಬಳಕೆದಾರರ ಪ್ರತಿಕ್ರಿಯೆ ಇಲ್ಲಿದೆ
ಈ ವೈರಲ್ ವೀಡಿಯೋ ಇಂಟರ್ನೆಟ್ ಲೋಕದ ಜನರನ್ನು ಬೆಚ್ಚಿ ಬೀಳಿಸಿದೆ. ಈ ಕುರಿತು ಬರೆದಕೊಂಡ ಓರ್ವ ಬಳಕೆದಾರ, 'ಕಾಡು ಪ್ರಾಣಿಗಳನ್ನು ಬಿಟ್ಟುಬಿಡಿ' ಎಂದು ಬರೆದಿದ್ದಾರೆ. ಇನ್ನೊಬ್ಬರು  'ಆನೆಯ ಬಾಲ ಅಲ್ಲಾಡುತ್ತಿರುವಾಗ ಅದರ ಹತ್ತಿರ ಹೋಗಬೇಡಿ. ಅದು  ಬೆದರಿಕೆಯನ್ನು ಅನುಭವಿಸುತ್ತದೆ ಎಂದು ಬರೆದಿದ್ದಾರೆ.


ವೈರಲ್ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.