ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಗಜ ಸೈನ್ಯ ಕಾಣಿಸಿಕೊಂಡಿದೆ.  ಕಾಡಾನೆಗಳ ಹಿಂಡು ಜಮೀನಿನಲ್ಲಿ ಓಡಾಡುತ್ತಿರುವ ದೃಶ್ಯ ಚಾಮರಾಜನಗರ ಜಿಲ್ಲೆ ಹಾಗೂ ತಮಿಳುನಾಡಿನ ಗಡಿ ಗ್ರಾಮಗಳಲ್ಲಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ತಮಿಳುನಾಡಿನ ಅರಣ್ಯ ಪ್ರದೇಶದಿಂದ ಮತ್ತೆ ಮತ್ತೆ ಕಾಡು ಪ್ರಾಣಿಗಳು ಗ್ರಾಮಗಳತ್ತ ನುಗ್ಗುತ್ತಿವೆ. ಗಡಿ ಗ್ರಾಮವಾದ ಅರಳವಾಡಿ ಗ್ರಾಮದ ಹೊರವಲಯದಲ್ಲಿ ಕಾಡಾನೆಗಳ ಹಿಂಡು  ಪ್ರತ್ಯಕ್ಷವಾಗಿದ್ದು  ಆನೆಗಳ ಹಿಂಡು ಕಾಲಿಟ್ಟ ಕಡೆಯಲ್ಲ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. 


ಇದನ್ನೂ ಓದಿ- ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಸ್ಟಿಕ್ ಇಡ್ಲಿ...!


ಹೌದು, ಒಂದಲ್ಲ, ಎರಡಲ್ಲ 50 ಕ್ಕೂ ಹೆಚ್ಚು ಕಾಡಾನೆ ಹಿಂಡು ಜಮೀನಿನಲ್ಲಿ ಓಡಾಡಿ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿರುವ ಘಟನೆ ಚಾಮರಾಜನಗರ ಹಾಗೂ ತಾಳವಾಡಿ ಗಡಿಭಾಗದಲ್ಲಿ ವರದಿ ಆಗಿದೆ. ಮತ್ತೆ ಕಾಡಿನಿಂದ ನಾಡಿತ್ತ ಗಜಪಡೆ ಬಂದಿರುವುದನ್ನು ಕಂಡ ಗ್ರಾಮಸ್ಥರು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. 


ಕ್ಯಾನ್ಸರ್ ರೋಗಿಯನ್ನು ಸಮಾಧಾನಪಡಿಸಲು ತನ್ನ ಕೂದಲನ್ನೇ ಬೋಳಿಸಿಕೊಂಡ ಕ್ಷೌರಿಕ- ವಿಡಿಯೋ ವೈರಲ್


ಸುಮಾರು 50 ರಿಂದ 60 ಆನೆಗಳ ಹಿಂಡು ಕಾಡಿನಿಂದ ನಾಡಿಗೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಆನೆ ಭಯದಿಂದಾಗಿ ರೈತರು ರಾತ್ರಿ ಕಾವಲಿಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಇದರಿಂದಾಗಿ, ಕಬ್ಬು, ತೆಂಗು ಸೇರಿದಂತೆ  ಬೆಳೆಗಳು ಸಂಪೂರ್ಣ ನಾಶವಾಗಿವೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.