Bride Groom Viral Video: ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಇನ್ಸ್ಟಾಗ್ರಾಮ್ ನಲ್ಲಿ ಸ್ಕ್ರಾಲ್ ಮಾಡುವಾಗ ನಾವು ನೋಡುವ ಕೆಲ ವಿಡಿಯೋಗಳನ್ನು ನಾವು ತಕ್ಷಣ ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೆ ಹಂಚಿಕೊಳ್ಳುತ್ತೇವೆ. ಅಂತಹುದೇ ಒಂದು ರೀಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಮದುವೆಯನ್ನು ವಿಶಿಷ್ಟವಾಗಿಸಲು ಜೋಡಿಯೊಂದು ಮಾಡಿದ ರೀಲ್ ವಿಡಿಯೋ ಜನರ ಭಾರಿ ಕಿರಿಕಿರಿಗೆ ಕಾರಣವಾಗಿದೆ. ತುಂಬಾ ಫಿಲ್ಮಿ ಸ್ಟೈಲ್ ನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ವಧುವಿನ ಬೇಡಿಕೆಯನ್ನು ಈಡೇರಿಸಲು ವರ ಮಾಡಿದ ಕಸರತ್ತು ತುಂಬಾ ತಮಾಷೆಯಿಂದ ಕೂಡಿದೆ. ನೀವು ಒಮ್ಮೆ ಈ ವೀಡಿಯೊವನ್ನು ನೋಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕೂಡ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ. (Viral News In Kannada)
 
ಸ್ಟ್ಯಾಚ್ಯೂ ಆಗಿ ನಿಂತ ಸಂಬಂಧಿಕರು
ಈ ರೀಲ್ ಕೇವಲ 28 ಸೆಕೆಂಡುಗಲದ್ದಾಗಿದೆ. ಇದರಲ್ಲಿ ವರ ಮೊದಲು ವಧುವಿನ ಹಣೆಗೆ ಸಿಂಧೂರ ತುಂಬುತ್ತಾನೆ.  ಈ ಸಂದರ್ಭದಲ್ಲಿ ಆತ ಕ್ಯಾಮೆರಾ ಕಡೆಗೆ ನೋಡುತ್ತಾ ಹಿಂದಿ ಚಿತ್ರಗೀತೆ 'ದೊ ಅಂಜಾನೆ'ಗೆ ಲಿಪ್ ಸಿಂಕ್ ಮಾಡುತ್ತಾನೆ.  ವಧು ಕೇವಲ ನಾಚುತ್ತಿದ್ದಾಳೆ ಮತ್ತು ವರನನ್ನು ನೋಡುತ್ತಿದ್ದಾಳೆ. ದಂಪತಿಗಳ ಹಿಂದೆ ಕುಟುಂಬದ ಇತರ ಸದಸ್ಯರು ವಿಗ್ರಹದ ರೂಪ ತಳೆದು ಗಂಭೀರವಾಗಿ ನಿಂತಿದ್ದಾರೆ. ಆದರೆ ಹಾಡಿಗೆ ವಾರ ವ್ಯಕ್ತಪಡಿಸುತ್ತಿರುವ ಎಕ್ಸ್ಪ್ರೇಷನ್ ತುಂಬಾ ತಮಾಷೆಯಿಂದ ಕೂಡಿದೆ ಮತ್ತು ಅದ್ಭುತವಾಗಿದೆ. ವಧುವರರ ಈ ಫಿಲ್ಮಿ ಸ್ಟೈಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಭಾರಿ ವೀಕ್ಷಣೆಗಳನ್ನು ಪಡೆಯುತ್ತಿದೆ ಈ ವಿಡಿಯೋ
ಈ ಮದುವೆಯ ವೀಡಿಯೊವನ್ನು ಫೆಬ್ರವರಿ 14 ರಂದು @rahulroshan ಎಂಬ X ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಶೀರ್ಷಿಕೆಯನ್ನು ಬರೆದ ಅವರು - 'ದೇವರೇ ನನ್ನ ದೇಶವನ್ನು ರೀಲ್‌ಗಳಿಂದ ಉಳಿಸು' ಎಂದಿದ್ದಾರೆ. ಇದುವರೆಗೆ ಈ ಪೋಸ್ಟ್‌ಗೆ 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ ಮತ್ತು  4 ಲಕ್ಷ 43 ಸಾವಿರ ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ.


ಸಿ  ಇತರ ಬಳಕೆದಾರರಿಗೆ ತಮ್ಮ ನಗುವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ನಿಮಗೆ ಸಾಧ್ಯವಾಯಿತಾ ಎಂಬುದನ್ನು ನಮಗೆ ತಿಳಿಸಿ. 


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.