viral video: ಈ Instagram ವೀಡಿಯೊವು ಸೂಕ್ಷ್ಮದರ್ಶಕದ ಅಡಿಯಲ್ಲಿ ನವಿಲು ಗರಿ ಹೇಗಿರುತ್ತದೆ ಎಂದು ತೋರಿಸುತ್ತದೆ. ಮೆಲನಿನ್ ಮತ್ತು ಗಾಳಿಯ ಮಿಶ್ರಣದಿಂದ ರಚಿಸಾದ ನವಿಲು ಗರಿ ಮಳೆಬಿಲ್ಲಿನಂತೆ ಗೋಚರಿಸುತ್ತಿದೆ. ಕಾಮನಬಿಲ್ಲಿನ ಬಣ್ಣಗಳ ಸಂಯೋಜನೆಯಿಂದ ಈ ಗರಿ ಅದ್ಬುತವಾಗಿ ಕಾಣುತ್ತಿದೆ.


COMMERCIAL BREAK
SCROLL TO CONTINUE READING

ಒಂದು ನವಿಲು ತನ್ನ ಗರಿಗಳನ್ನು ಹರಡಿ ಭವ್ಯವಾದ ನೋಟವನ್ನು ನೀಡುತ್ತದೆ. ವಾಸ್ತವವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಹಕ್ಕಿಯ ವರ್ಣವೈವಿಧ್ಯದ ಗರಿಗಳ ಬಹುಕಾಂತೀಯ ಪ್ರದರ್ಶನಗಳನ್ನು ತೋರಿಸುವ ಹಲವಾರು ವೀಡಿಯೊಗಳಿವೆ. ಆದಾಗ್ಯೂ, ಸೂಕ್ಷ್ಮದರ್ಶಕದ ಅಡಿಯಲ್ಲಿ ಗರಿಗಳು ಹೇಗೆ ಕಾಣುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ವೈರಲ್ ವೀಡಿಯೋ ಅದನ್ನೇ ತೋರಿಸುತ್ತದೆ, ಅಷ್ಟೆ ಅಲ್ಲ ಈ ಅದ್ಭುತವಾದ ದೃಶ್ಯವನ್ನು ನೋಡಿದರೆ ನೀವು ಫಿದಾ ಆಗೋದು ಗ್ಯಾರಂಟಿ.


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಮೈಕ್ರೋಬಯಾಲಜಿಸ್ಟ್ ಒಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಈ ವಿಡಿಯೋದಲ್ಲಿ ಅವರು ಸೂಕ್ಷ್ಮದರ್ಶಕದ ಅಡಿಯಲ್ಲಿ ನವಿಲು ಗರಿಗಳು ಹೇಗೆ ಕಾಣುತ್ತವೆ ಎಂಬುದನ್ನು ತೋರಿಸಿದ್ದಾರೆ. 


ಮೈಕ್ರೋಬಯಾಲಜಿಸ್ಟ್ ಮತ್ತು Instagram ಬಳಕೆದಾರ Chloé Savard ತನ್ನ ಪುಟದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸೂಕ್ಷ್ಮದರ್ಶಕದ ಅಡಿಯಲ್ಲಿ ನವಿಲು ಗರಿಗಳ ಬಗ್ಗೆ ಇನ್ನಷ್ಟು ವಿವರಿಸುವ ವಿವರವಾದ ಶೀರ್ಷಿಕೆಯನ್ನು ಅವರು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Viral video: ಅಬ್ಬಬ್ಬಾ ಏನಿದು ಪ್ರಕೃತಿಯ ವಿಸ್ಮಯ! ಬಾಯ್ತೆರೆದು ಜೋರಾಗಿ ಉಸಿರಾಡುತ್ತಿದೆ ಮರ..ಈ ಅದ್ಭುತ ದೃಶ್ಯ ನೀವೊಮ್ಮೆ ಕಣ್ತುಂಬಿಕೊಳ್ಳಿ


"ಮೆಲನಿನ್‌ನಿಂದ ಸಮೃದ್ಧವಾಗಿರುವ ನವಿಲು ಗರಿಗಳು ಬೆಳಕು ಮತ್ತು ಕೆರಾಟಿನ್‌ನಲ್ಲಿ ಕಂಡುಬರುವ ಗಾಳಿಯ ಸಂಯೋಜನೆಯಿಂದ ಮಳೆಬಿಲ್ಲನ್ನು ಹೋಲುವ ಅದ್ಭುತ ದೃಶ್ಯಾವಲಿಯನ್ನು ಸೃಷ್ಟಿಸುತ್ತದೆ. ಹೆಣ್ಣುಗಳನ್ನು ಆಕರ್ಷಿಸಲು ಗಂಡು ನವಿಲುಗಳು ತಮ್ಮ ಸುಂದರವಾದ ಬಣ್ಣದ ಗರಿಗಳನ್ನು ಬಳಸುತ್ತವೆ. 


ಕಣ್ಣಿನ ರೂಪ ಹೊಂದಿರುವ ನವಿಲು ಗರಿಗಳು ಬಣ್ಣ ಮತ್ತು ಹೊಳಪಿನ ವ್ಯತಿರಿಕ್ತತತೆಯಿಂದ ಸಂಗಾತಿಯನ್ನು ಆಕರ್ಷಿಸುವಲ್ಲಿ ಪ್ರಮುಕ ಪಾತ್ರ ವಹಿಸುತ್ತದೆ." ಎಂದು ಮೈಕ್ರೋಬಯಾಲಜಿಸ್ಟ್‌ ಈ ವಿಡಿಯೋದ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. 


ಇದನ್ನೂ ಓದಿ: Viral video: ಎರಡು ಕಾಲುಗಳಿರುವ ಅಪರೂಪದ ಹಾವನ್ನು ಎಂದಾದರು ನೋಡಿದ್ದೀರಾ? ಇಲ್ಲ ಅಂದ್ರೆ ಈಗಲೇ ನೋಡಿ


“ಅಮ್ಮನ ಅಪಾರ್ಟ್ಮೆಂಟ್ನಲ್ಲಿ ಸ್ವಲ್ಪ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನಾನು ಈ ಗರಿಯನ್ನು ಕಂಡುಕೊಂಡೆ, ಸೂಟ್‌ಕೇಸ್‌ನಲ್ಲಿ ಪ್ಯಾಕ್‌ ಮಾಡಿಕೊಂಡು, ಮೈಕ್ರೋಸ್ಕೋಪ್‌ನ ಅಡಿಯಲ್ಲಿಟ್ಟು ಈ ಅದ್ಭುತ ನವಿಲು ಗರಿಯ ಸುಮಾರು 120 ಚಿತ್ರಗಲನ್ನು ತೆಗೆದಿದ್ದೇನೆ" ಎಂದು ಬರೆದಕೊಂಡಿದ್ದಾರೆ. 


ಜುಲೈ 7 ರಂದು ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದ್ದು, ಸಿಕ್ಕಾಪಟ್ಟೆ ವ್YRLFF‌ ಅಗಿದೆ.


ಇನ್ನೂ ಈ ವಿಡಿಯೋ  4.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದು. 85 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಲೈಕ್‌ ಮಾಡಿದ್ದಾರೆ. ಅಷ್ಟೆ ಅಲ್ಲ ಇದನ್ನು ನೋಡಿದ ಜನರು ಮೈಮರೆತಿದ್ದು ಈ ಸುಂದರವಾದ ದೃಶ್ಯಕ್ಕೆ ಸಾಕ್ಷಿಯಾಗಿ ನಾನಾ ಬಗೆಯ ಕಾಮೆಂಟ್‌ ಮಾಡುತ್ತಿದ್ದಾರೆ.


 

 

 

 



 

 

 

 

 

 

 

 

 

 

 

A post shared by Chloé Savard (@tardibabe)


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.