ನವದೆಹಲಿ: Instagramನಲ್ಲಿ ರೀಲ್ಸ್ ಗಳ ಮೂಲಕ ವೈರಲ್ ಆಗಲು ಇಂದು ಅನೇಕರು ಏನು ಬೇಕಾದರೂ ಮಾಡುತ್ತಾರೆ. ಹುಡುಗಿಯರಿಗೆ ಚಾಕೋಲೇಟ್ ನೀಡುವುದು, ಪ್ರಪೋಸ್ ಮಾಡುವುದು, ರಸ್ತೆಯಲ್ಲಿ ಡಾನ್ಸ್ ಮಾಡುವುದು ಹೀಗೆ ಏನೇನೋ ಸರ್ಕಸ್ ಮಾಡುತ್ತಾರೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ವಿದೇಶಿ ಹುಡುಗಿಯೊಬ್ಬಳಿಗೆ ಭಾರತೀಯ ಯುವಕನೊಬ್ಬ ಅಚ್ಚರಿಯ ಸ್ಟಂಟ್ ಮಾಡುವ ಮೂಲಕ ಪ್ರಪೋಸ್ ಮಾಡಿದ್ದಾನೆ. ಇದು ಈಗ ಇಂಟರ್‍ನೆಟ್‍ನಲ್ಲಿ ವೈರಲ್ ಆಗುತ್ತಿದೆ. ಭಾರತದ ಪ್ರವಾಸಕ್ಕೆ ಬಂದಿದ್ದ ವಿದೇಶಿಯರ ಗುಂಪೊಂದು ಕೆಂಪು ಕೋಟೆಯ ಬಳಿ ನಡೆದುಕೊಂಡು ಹೋಗುತ್ತಿರುತ್ತದೆ. ಇದನ್ನು ಗಮನಿಸುತ್ತಿದ್ದ ಯುವಕನೊಬ್ಬ ಅವರ ಮುಂದೆಯೇ ಹಠಾತ್ ಬ್ಯಾಕ್ ಫ್ಲಿಪ್ ಮಾಡುವ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಾನೆ.


ಇದನ್ನೂ ಓದಿ: ಸಾಲ ತೀರಿಸಲು ಕೆಲಸಕ್ಕೆ ಸೇರಿದ ಪತ್ನಿ; ಮನಬಂದಂತೆ ಥಳಿಸಿ ವಿಡಿಯೋ ಮಾಡಿದ ಪತಿ..!


ವಿದೇಶಿ ಯುವತಿಯ ಗಮನ ಸೆಳೆಯುವ ಯತ್ನ



ಯುವಕ ಕೆಂಪು ಕೋಟೆಯ ಮುಂದೆ ವಿದೇಶಿ ಹುಡುಗಿಯನ್ನು ಮೆಚ್ಚಿಸಲು ತನ್ನ ಕೈಲಾದಷ್ಟು ಪ್ರಯತ್ನಿಸಿದ್ದಾನೆ. ಸಖತ್ ಆಗಿ ಸ್ಟಂಟ್ ಮಾಡುವ ಆತ ಹುಡುಗಿಗೆ ಗುಲಾಬಿ ಹೂ ನೀಡುತ್ತಾನೆ. ಆದರೆ ಆ ವಿದೇಶಿ ಹುಡುಗಿ ಗುಲಾಬಿ ಹೂ ಸ್ವೀಕರಿಸದೆ ನಗು ನಗುತ್ತಾ ತನ್ನ ಗೆಳತಿಯರೊಂದಿಗೆ ತೆರಳುತ್ತಾಳೆ. ಯುವಕನ ಸ್ಟಂಟ್‍ಗೆ ಆಕೆ ಸೊಪ್ಪು ಹಾಕಿಲ್ಲ. ಆದರೆ ನೆರೆದಿದ್ದವರು ಯುವಕನ ಸ್ಟಂಟ್ ನೋಡಿ ಆಶ್ಚರ್ಯ ಪಡುತ್ತಾರೆ. ಪ್ರಪೋಸ್ ಮಾಡಿದ ಯುವತಿ ತಲೆ ಅಲ್ಲಾಡಿ ಮುಂದೆ ನಡೆಯುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ತಾನು ನೀಡಿದ ಗುಲಾಬಿ ಹೂ ಸ್ವೀಕರಿಸದ ಕಾರಣ ಯುವಕನಿಗೆ ತುಂಬಾ ನಿರಾಸೆಯಾಗುತ್ತದೆ.


ಲಕ್ಷಾಂತರ ಜನರು ವಿಡಿಯೋ ನೋಡಿದ್ದಾರೆ


ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಯುವಕನ ಹೂ ಸ್ವೀಕರಿಸದ ವಿದೇಶಿ ಯುವತಿ ಬಗ್ಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಯುವಕನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಹಾನುಭೂತಿ ತೋರಿಸಿದ್ದಾರೆ. ‘ಡೋಂಟ್ ವರಿ ಬ್ರದರ್, ಫಾರಿನರ್ಸ್ ಯಾರಿಗೂ ನಿಷ್ಠರಲ್ಲ’ ಅಂತಾ ಒಬ್ಬರು ಜೋಕ್ ಮಾಡಿದ್ದಾರೆ.


ಇದನ್ನೂ ಓದಿ: Viral Video : ಆನೆಯ ಬೇಟೆಗಾಗಿ ಬಂದಿತ್ತು ಹುಲಿ.! ಗಜರಾಜ ತಿರುಗಿ ಬಿದ್ದಾಗ ನಡೆದದ್ದು...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ