Viral Video: ವಿಮಾನಕ್ಕೆ 12 ಗಂಟೆ ವಿಳಂಬವಾಗಿದ್ದೆ ತಡ, ವಿಮಾನದ ಪಕ್ಕದಲ್ಲಿಯೇ ನೆಲದ ಮೇಲೆ ಊಟಕ್ಕೆ ಕುಳಿತ ಯಾತ್ರಿಗಳು!
Viral Video: ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮುಂಬೈ ಕಡೆಗೆ ಡೈವರ್ಟ್ ಮಾಡಲಾಗಿದ್ದು, ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.(Viral News In Kannada)
ನವದೆಹಲಿ: ಹವಾಮಾನ ವೈಪರೀತ್ಯ ವಿಮಾನಗಳ ಹಾರಾಟದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ವಿಮಾನಗಳು ಹಲವಾರು ಗಂಟೆಗಳ ಕಾಲ ವಿಳಂಬವಾಗುತ್ತಿವೆ. ಇದೇ ವೇಳೆ ಪ್ರಯಾಣಿಕರು ಕೂಡ ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ದಿನವೂ ಜಗಳ, ವಾದ-ವಿವಾದ, ಮನಸ್ತಾಪದ ಸುದ್ದಿಗಳು ವರದಿಯಾಗುತ್ತಿದೆ. ಪ್ರಯಾಣಿಕರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಪ್ರಯಾಣಿಕರು ವಿಮಾನಕ್ಕಾಗಿ ಕಾಯುತ್ತಿರುವುದನ್ನು ಮತ್ತು ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವುದನ್ನು ನೀವು ನೋಡಬಹುದು. ಈ ವೀಡಿಯೋ ಪ್ರಕಟಗೊಳ್ಳುತ್ತಲೇ ನಂತರ ಜನರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ವಾಸ್ತವದಲ್ಲಿ ಗೋವಾದಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವನ್ನು ಮುಂಬೈ ಕಡೆಗೆ ತಿರುಗಿಸಲಾಯಿತು, ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪ್ರಯಾಣಿಕರು ನೆಲದ ಮೇಲೆ ಕುಳಿತು ಆಹಾರ ಸೇವಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ರಾತ್ರಿ ವೇಳೆ ಕೆಲವರು ಫ್ಲೈಟ್ ಬಳಿ ಕುಳಿತು ಊಟ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಈ ವೀಡಿಯೋ ವೈರಲ್ ಆದ ನಂತರ ಹಲವರು ಸಿಟ್ಟಿಗೆದ್ದಿದ್ದಾರೆ. ಇದಕ್ಕೂ ಮೊದಲು, ಇಂಡಿಗೋದ ಮತ್ತೊಂದು ವೀಡಿಯೊ ವೈರಲ್ ಆಗಿತ್ತು, ಅದರಲ್ಲಿ ವಿಮಾನವನ್ನು ಚಲಾಯಿಸಲು ವಿಳಂಬವಾದ ಕಾರಣ ಪ್ರಯಾಣಿಕರೊಬ್ಬರು ಪೈಲಟ್ ಮೇಲೆ ಹಲ್ಲೆ ನಡೆಸಿದ್ದ್ಫರು ಎಂಬುದು ಇಲ್ಲಿ ಉಲ್ಲೇಖನೀಯ.
ಕ್ಷಮೆಯಾಚಿಸಿದ ಇಂಡಿಗೊ
ಈ ಘಟನೆ ಬೆಳಕಿಗೆ ಬಂದ ನಂತರ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ. ಜನವರಿ 14 ರಂದು ಗೋವಾದಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನ 6E2195 ಗೆ ಸಂಬಂಧಿಸಿದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಇಂಡಿಗೋ ಹೇಳಿದೆ. ದೆಹಲಿಯಲ್ಲಿ ಗೋಚರತೆ ಕಡಿಮೆಯಾದ ಕಾರಣ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಇದಕ್ಕಾಗಿ ಇಂಡಿಗೋ ತನ್ನ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ. ಪ್ರಸ್ತುತ ಕಂಪನಿಯು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ