ನವದೆಹಲಿ: ಇಂಡಿಗೋ ವಿಮಾನದಲ್ಲಿ, ಪ್ರಯಾಣಿಕರೊಬ್ಬರು ಪೈಲಟ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ, ಇದಾದ ಬಳಿಕ ಪರಿಸ್ಥಿತಿ ತುಂಬಾ ವಿಕೋಪಕ್ಕೆ ಹೋದ ಕಾರಣ, ಕ್ಯಾಬಿನ್ ಸಿಬ್ಬಂದಿ ಮಧ್ಯಪ್ರವೇಶಿಸಲು ಮುಂದೆ ಬರಬೇಕಾಯಿತು. ವಿಮಾನ ವಿಳಂಬವಾಗಿ ಚಲಿಸಲಿದೆ ಎಂಬುದೇ ಈ ಘಟನೆಗೆ ಕಾರಣ ಎನ್ನಲಾಗಿದೆ.  ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಮಾನ ತಡವಾಗಿದ್ದರಿಂದ ಕೋಪಗೊಂಡ ಪ್ರಯಾಣಿಕನೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ವಿಮಾನ ದೆಹಲಿಯಿಂದ ಗೋವಾಕ್ಕೆ ಹೋಗುತ್ತಿತ್ತು. ಮಂಜು ಮುಸುಕಿದ ಕಾರಣ 6ಇ 2175 ವಿಮಾನದ ಪೈಲಟ್ ವಿಮಾನ 13 ಗಂಟೆ ತಡವಾಗಲಿದೆ ಎಂದು ಹೇಳುತ್ತಿದ್ದಾಗ ಪ್ರಯಾಣಿಕರೊಬ್ಬರು ಏಕಾಏಕಿ ಸಿಟ್ಟಿನಿಂದ ಅವರ ಬಳಿ ಧಾವಿಸಿ ಕಪಾಳಮೋಕ್ಷ ಮಾಡಿದ್ದಾರೆ.ಯಾವ ಪೈಲಟ್ ಮೇಲೆ ಈ ಹಲ್ಲೆ ನಡೆದಿದೆಯೋ ಅವರ ಹೆಸರು ಅನುಪ್ ಕುಮಾರ್ ಆಗಿದೆ. ಅವರು ವಿಮಾನದ ಕೋಪೈಲಟ್ ಆಗಿದ್ದಾರೆ ಎಂದು ಹೇಳಲಾಗುತ್ತದೆ. ಭಾನುವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. (Viral News In Kannada)


COMMERCIAL BREAK
SCROLL TO CONTINUE READING

ಯಾರು ಈ ವ್ಯಕ್ತಿ
ಈ ಪ್ರಯಾಣಿಕನು ಹಳದಿ ಬಣ್ಣದ ಜರ್ಕಿನ್ ಧರಿಸಿದ್ದು, ಘೋಷಣೆಗೂ ಮುನ್ನವೇ ಪೈಲಟ್ ಕಡೆಗೆ ಧಾವಿಸುತ್ತಿರುವುದನ್ನು ನೀವು ವೈರಲ್ ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲ ಸಿಟ್ಟಿನಲ್ಲಿ ‘ವಿಮಾನ ಓಡಿಸುವುದಾದರೆ ಓಡಿಸಿ, ಇಲ್ಲವಾದರೆ ಕೆಳಗಿಳಿಸಿ’ ಎಂದೂ ಕೂಡ ಆತ ಹೇಳುತ್ತಿದ್ದಾನೆ.  ಇಂಡಿಗೋ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಿದೆ, ನಂತರ ಪೊಲೀಸರು ಪ್ರಯಾಣಿಕನನ್ನು ಸಾಹಿಲ್ ಕಟಾರಿಯಾ ಎಂದು ಗುರುತಿಸಿದ್ದಾರೆ. ಘಟನೆಯ ನಂತರ ಸಾಹಿಲ್ ಕಟಾರಿಯಾ ಅವರನ್ನು ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. 


ಇದನ್ನೂ ಓದಿ-Viral Video: ಬೆಡ್ ಮೇಲೆ ಪರಸ್ಪರ ತೆಕ್ಕೆಯಲ್ಲಿ ಹುಡುಗ-ಹುಡುಗಿ, 'ಇದ್ಯಾವ ರೀತಿಯ ಲವ್ ಗುರು' ಪ್ರಶ್ನಿಸಿದ ನೆಟ್ಟಿಗರು


ಜನರ ಪ್ರತಿಕ್ರಿಯೆ
ವೈರಲ್ ಆಗಿರುವ ವಿಡಿಯೋಗೆ ಜನರ ಪ್ರತಿಕ್ರಿಯೆಗಳು ಬರುತ್ತಿವೆ. ಈ ವ್ಯಕ್ತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಠಿಣ ಶಿಕ್ಷೆ ನೀಡುವಂತೆ ಜನ ಹೇಳುತ್ತಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡ ಬಳಕೆದಾರರೊಬ್ಬರು, 'ವಿಳಂಬಕ್ಕೆ ಪೈಲಟ್ ಅಥವಾ ಕ್ಯಾಬಿನ್ ಸಿಬ್ಬಂದಿ ಏನು ಮಾಡಬೇಕು? ಅವರು ತಮ್ಮ ಕೆಲಸವನ್ನು ಮಾತ್ರ ಮಾಡುತ್ತಿದ್ದರು. ಈ ವ್ಯಕ್ತಿಯನ್ನು ಬಂಧಿಸಿ ನೊ ಫ್ಲೈ ನಿಷೇಧ ಪಟ್ಟಿಗೆ ಸೇರಿಸಬೇಕು' ಎಂದಿದ್ದಾರೆ. ಮತ್ತೊರ್ವ ಬಳಕೆದಾರರೂ ಕೂಡ, 'ಈ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಬೇಕು. ಅವನನ್ನು ನೋ ಫ್ಲೈ ಲಿಸ್ಟ್‌ಗೆ ಸೇರಿಸಬೇಕು' ಎಂದಿದ್ದಾರೆ. ಮತ್ತೊರ್ವ ಬಳಕೆದಾರರು '@IndiGo6E ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದೆ, ಪ್ರಯಾಣಿಕರು ಈ ರೀತಿ ವರ್ತಿಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ' ಎಂದಿದ್ದಾರೆ.


ಇದನ್ನೂ ಓದಿ-Viral Video: ವಿಮಾನದಲ್ಲಿ ಏರ್ ಹೊಸ್ಟೆಸ್ ಮಾಡಿದ ಕೆಲಸ ಜನ ರಿಪೀಟ್ ಆಗಿ ಏಕೆ ನೋಡ್ತೀದ್ದಾರೆ? ಕಾರಣ ತಿಳಿಯಲು ವಿಡಿಯೋ ನೋಡಿ


ವಿಳಂಬವಾದ ವಿಮಾನಗಳು
ಕಳೆದ ಹಲವು ದಿನಗಳಿಂದ ಮಂಜಿನಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನಗಳು ತಡವಾಗಿ ಚಲಿಸುತ್ತಿವೆ ಮತ್ತು ನಂತರೆ ಈ ಘಟನೆ ಬೆಳಕಿಗೆ ಬಂದಿದೆ. ಫ್ಲೈಟ್ ಟ್ರ್ಯಾಕರ್ ವೆಬ್‌ಸೈಟ್ ಫ್ಲೈಟ್‌ರಾಡಾರ್ 24 ಪ್ರಕಾರ, ಇಂದು ಸುಮಾರು 110 ವಿಮಾನಗಳು ವಿಳಂಬವಾಗಿವೆ ಮತ್ತು 79 ವಿಮಾನಗಳನ್ನು ರದ್ದುಗೊಳಿಸಲಾಗಿದೆ.


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI