Viral Video: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ.  ಈ ವಿಡಿಯೋದಲ್ಲಿ ವ್ಯಕ್ತಿಯೋರ್ವನ ಮೇಲೆ ಎರಡು ಬಾರಿ ಮಿಂಚು ಬೀಳುತ್ತದೆ. ಆದರೆ ಅವನಿಗೆ ಏನೂ ಆಗುವುದಿಲ್ಲ ಮತ್ತು ಆತ ಬದುಕುಳಿಯುತ್ತಾನೆ. ಈ ವೀಡಿಯೊವನ್ನು ನೋಡಿ ಜನರು ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. (Viral News In Kannada)


COMMERCIAL BREAK
SCROLL TO CONTINUE READING

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಘಟನೆ.
ಮಿಂಚಿನ ಕುಸಿತದಿಂದಾಗಿ ಮನೆ, ಮರಗಳು, ವಾಹನಗಳು ಕುಸಿಯುತ್ತವೆ, ಆದರೆ ಒಬ್ಬ ವ್ಯಕ್ತಿಯು ತನ್ನ ಅದೃಷ್ಟದಲ್ಲಿ ಏನೆಂದು ಬರೆದುಕೊಂಡಿದ್ದಾನೆ ಅರ್ಥವಾಗುತ್ತಿಲ್ಲ, ಆತ ಸಾವನ್ನು 'ಟಕ್' ಅಂತ ಮುಟ್ಟಿ ವಾಪಸ್ ಬಂದಿದ್ದಾನೆ. ಈ ಘಟನೆಯನ್ನು ನೋಡಿ ನಿಮಗೂ ಕೂಡ ಆಶ್ಚರ್ಯವಾಗಬಹುದು. ಘಟನೆಯ ವೀಡಿಯೊ ಹತ್ತಿರದಲ್ಲಿಯೇ ಇದ್ದ  ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ನಂತರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ವೀಡಿಯೊ ನೋಡಿದ ನಂತರ, ಜನರು ಈ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ-ಗಾಳಿಯಲ್ಲಿ ಸ್ಥಿರಗೊಂಡು ಒಂದೇ ಜಾಗಕ್ಕೆ ನಿಂತ ವಿಮಾನವನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲಿದೆ ವಿಡಿಯೋ!


ಈ ವ್ಯಕ್ತಿಯು ಎರಡು ಬಾರಿ ಸಾವನ್ನು ಮುಟ್ಟಿ ವಾಪಸ್ ಬಂದಿದ್ದಾನೆ
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಓರ್ವ ವ್ಯಕ್ತಿಯ ಮೈಮೇಲೆ ಎರಡು ಬಾರಿ ಮಿಂಚು ಬೀಳುವುದನ್ನು ನೀವು ನೋಡಬಹುದು. ಮೊದಲ ಬಾರಿಗೆ ಮಿಂಚು ಬಡಿದಾಗ ವ್ಯಕ್ತಿ ನೆಲಕ್ಕುರುಳುತ್ತಾನೆ. ಸ್ವಲ್ಪ ಸಮಯದವರೆಗೆ, ವ್ಯಕ್ತಿಯ ಪ್ರಾಣ ಹೋಯಿತು ಎಂಬಂತೆ ತೋರುತ್ತದೆ. ಆದರೆ  ವ್ಯಕ್ತಿಯು  ಪುನಃ ಎದ್ದು ನಿಲ್ಲುತ್ತಾನೆ. ಇದರ ನಂತರ, ಆತ ಮತ್ತೆ ಸ್ವಲ್ಪದೂರ ನಡೆದುಕೊಂಡು ಹೋಗುತ್ತಾನೆ ಮತ್ತು ಮಿಂಚು ಮತ್ತೊಮ್ಮೆ ಆತನ ಮೇಲೆ ಕುಸಿದು ಬೀಳುತ್ತದೆ. ವ್ಯಕ್ತಿ ಪುನಃ  ನೆಲಕ್ಕೆ ಕುಸಿಯುತ್ತಾನೆ. ಆದರೆ ವಿಧಿಯ ಆಟ ನೋಡಿ ಆತ  ಮತ್ತೆ ಚೇತರಿಸಿಕೊಂಡು ಮೇಲಕ್ಕೆ ಏಳುತ್ತಾನೆ ಮತ್ತು ಅಲ್ಲಿಂದ ಹೊರಟು ಹೋಗುತ್ತಾನೆ. ವಿಡಿಯೋವನ್ನು ನೋಡಿ ನೀವೂ ಕೂಡ ಯಮ ನಿದ್ದೆಗೆ ಜಾರಿರಬಹುದು ಅಂದುಕೊಳ್ಳುವುದು ಮಾತ್ರ ಗ್ಯಾರಂಟಿ.


ಇದನ್ನೂ ಓದಿ-ಸಾಬೂನು ಬಿಲ್ಲೆಗಳನ್ನು ಬಳಸಿ ದೈತ್ಯ ಹೊಟೇಲ್ ಅನ್ನು 30 ಅಡಿ ಹಿಂದಕ್ಕೆ ಸರಿಸಿದ ಕಾರ್ಮಿಕರು... ವಿಡಿಯೋ ನೋಡಿ


ವಿಡಿಯೋ ನೋಡಿ ಆಶ್ಚರ್ಯಚಕಿತರಾದ ಜನ
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @thefigen_ ಹೆಸರಿನ ಬಳಕೆದಾರರು ಹಂಚಿಕೊಂಡಿದ್ದಾರೆ. ಇದುವರೆಗೆ 80 ಲಕ್ಷ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ ಮತ್ತು 50 ಸಾವಿರ ಜನರು ಲೈಕ್ ನೀಡಿದ್ದಾರೆ. ಇದೇ ವೇಳೆ, ಹೆಚ್ಚಿನ ಸಂಖ್ಯೆಯ ಜನರು ಈ ವಿಡಿಯೋಗೇ ಕಾಮೆಂಟ್ ಮಾಡುತ್ತಿದ್ದಾರೆ. 


ವೈರಲ್ ವಿಡಿಯೋ ಇಲ್ಲಿದೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ