ನವದೆಹಲಿ: ಇಂಟರ್ನೆಟ್‍ನಲ್ಲಿ ಪ್ರತಿದಿನ ಚಿತ್ರ-ವಿಚಿತ್ರ ವಿಡಿಯೋಗಳು ಕಾಣಸಿಗುತ್ತವೆ. ಈ ಪೈಕಿ ಕೆಲವು ವಿಡಿಯೋಗಳು ಅಚ್ಚರಿ ಮೂಡಿಸುವ ಜೊತೆಗೆ ನೋಡುಗರನ್ನೇ ಬೆಚ್ಚಿಬೀಳಿಸುತ್ತವೆ. ಕೆಲವು ವಿಡಿಯೋಗಳನ್ನು ನೋಡಿ ಜನರು ಆಘಾತಕ್ಕೀಡಾಗುತ್ತಾರೆ. ಕೆಲವು ವಿಡಿಯೋಗಳು ನೋಡಲು ನಂಬಲಾಗದ ಹಾಗೂ ಭಯಾನಕವಾಗಿರುತ್ತವೆ. ಇದಕ್ಕೆ ನಿದರ್ಶನವೆಂಬಂತೆ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ವೈರಲ್ ಆಗಿರುವ ಈ ವಿಡಿಯೋದಲ್ಲಿ ಚಿಕ್ಕ ಮಗುವೊಂದು ಬೃಹತ್ ಗಾತ್ರದ ಹೆಬ್ಬಾವಿನ ಮೇಲೆ ಕುಳಿತು ಆಟವಾಡುತ್ತಿದೆ. ಈ ದೃಶ್ಯ ನೋಡಿದ್ರೆ ನಿಮಗೆ ಗಾಬರಿಯಾಗೋದು ಗ್ಯಾರಂಟಿ. ಯಾಕೆಂದರೆ ಚಿಕ್ಕ ಮಗುವೊಂದು ಯಾವುದೇ ರೀತಿಯ ಭಯವಿಲ್ಲದ ಭಾರೀ ಗಾತ್ರದ ಹೆಬ್ಬಾವಿನೊಂದಿಗೆ ಚೆಲ್ಲಾಟವಾಡುತ್ತಿದೆ. ಹಾವು ಕಂಡರೆ ಮಾರುದ್ದ ದೂರ ಓಡುವ ಜನರ ನಡುವೆ ಈ ಚಿಕ್ಕಮಗು ದೊಡ್ಡ ಗಾತ್ರದ ಪೈಥಾನ್ ಜೊತೆಗೆ ಆಟವಾಡುತ್ತಿರುವುದು ಕಂಡರೆ ನಿಮಗೂ ಒಂದುಕ್ಷಣ ಭಯವಾಗುತ್ತದೆ.  


ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ಗೆ ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್‌ನಿಂದ ಪ್ರಶಂಸೆ: ಬೆಂಗಳೂರಿಗರಿಗೆ ಅಭಿನಂದಿಸಿದ ಪ್ರಧಾನಿ!



ಈ ವಿಡಿಯೋ ಎಷ್ಟು ಅಚ್ಚರಿ ಮೂಡಿಸುತ್ತದೋ ಅಷ್ಟೇ ಭಯ ಸಹ ಉಂಟು ಮಾಡುತ್ತದೆ. rbempire_tv ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘Are u kidding me right now’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೋದಲ್ಲಿ ಮನೆಯ ಅಂಗಳದಲ್ಲಿ ಮಗುವೊಂದು ಭಾರೀ ಉದ್ದ ಮತ್ತು ದಪ್ಪವಿರುವ ಹೆಬ್ಬಾವಿನ ಜೊತೆಗೆ ಆಟವಾಡುತ್ತಿದೆ. ಹಾವು ಬೇರೆಡೆ ಹೋಗಲು ಪ್ರಯತ್ನಿಸಿದರೆ ಆ ಮಗು ಅದನ್ನು ಹಿಡಿದು ತನ್ನತ್ತ ಎಳೆಯುತ್ತದೆ. ‘ಹೇ.. ಎಲ್ಲಿ ಹೋಗ್ತೀಯಾ ಇರು.. ನನ್ನ ಜೊತೆಗೆ ಆಟವಾಡು..’ ಅನ್ನೋ ರೀತಿ ಮದುವೆ ಆ ಹೆಬ್ಬಾವಿನ ಜೊತೆಗೆ ಆಟವಾಡಿದೆ.


ಯಾವುದೇ ಭಯವಿಲ್ಲದೆ  ಮಗು ಹಾವಿನ ಮೇಲೆ ಕುಳಿತುಕೊಂಡಿರುವುದನ್ನು ಕಂಡ ನೆಟಿಜನ್‍ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವೇ ಸೆಕೆಂಡುಗಳಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಮಗುವಿನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ರೀತಿ ಹಾವಿನೊಂದಿಗೆ ಮಗುವನ್ನು ಬಿಟ್ಟಿರುವ ಪೋಷಕರ ವಿರುದ್ಧ ಕಿಡಿಕಾರಿದ್ದಾರೆ.


ಇದನ್ನೂ ಓದಿ: ಸೀತೆ ತವರು ನೇಪಾಳದಿಂದ ಅಯೋಧ್ಯೆಗೆ ಬರುತ್ತಿದೆ ಈ ವಸ್ತು: ರಾಮ ಪ್ರಾಣಪತಿಷ್ಠೆ ವೇಳೆ ಅರ್ಪಣೆಯಾಗಲಿದೆ ಉಡುಗೊರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.