ನವದೆಹಲಿ: ಮದುವೆಗೆ ಯಾವ ಉಡುಗೊರೆಯನ್ನು ನೀಡಬೇಕು? ಈ ಪ್ರಶ್ನೆ ಬಹುತೇಕರಿಗೆ ಕಾಡುತ್ತದೆ. ಆದರೆ ವ್ಯಕ್ತಿಯೊಬ್ಬ ದಂಪತಿಗೆ ಅತ್ಯಮೂಲ್ಯ ಉಡುಗೊರೆ ನೀಡಿದ್ದು, ಆತನ ವಿಡಿಯೋವನ್ನು ಕೋಟ್ಯಾಂತರ ಜನ ವೀಕ್ಷಿಸಿದ್ದಾರೆ. ವಾಸ್ತವದಲ್ಲಿ, ಧರ್ಮೇಂದ್ರ ಎಂಬ ವ್ಯಕ್ತಿ ತನ್ನ ಹಣೆಯಿಂದ ತೆಂಗಿನಕಾಯಿಯನ್ನು ಒಡೆದು ಅದರ ನೀರನ್ನು ವಧು-ವರರಿಗೆ ನೀಡಿದ್ದಾನೆ.


COMMERCIAL BREAK
SCROLL TO CONTINUE READING

ಇದೀಗ ಆತನ ಈ  ಅಪ್ರತಿಮ ಶಕ್ತಿ ಮತ್ತು ವಿಶಿಷ್ಟ ಶೈಲಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು YouTube ಚಾನಲ್ @RajbharVeer ನಿಂದ ಪೋಸ್ಟ್ ಮಾಡಲಾಗಿದೆ, ಇದು ಆರು ಕೋಟಿಗೂ ಹೆಚ್ಚು ವೀಕ್ಷಣೆಗಳು ಮತ್ತು 18 ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿದೆ. ಅಲ್ಲದೆ, ವ್ಯಕ್ತಿಯ ಗಟ್ಟಿಮುಟ್ಟಾದ ಹಣೆಯ ಕುರಿತು ಜನರು ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಬ್ರದರ್ ಹೃದಯ ಗೆದ್ದಿದ್ದಾನೆ ಎಂದು ಜನ ಪ್ರತಿಕ್ರಿಯಿಸುತ್ತಿದ್ದಾರೆ.


ಈ ವೈರಲ್ ವೀಡಿಯೋದಲ್ಲಿ ನೀವು ಧರ್ಮೇಂದ್ರ ಅವರನ್ನು ವೇದಿಕೆಯ ಮೇಲೆ ವಧು-ವರರ ಮುಂದೆ ನಿಂತಿರುವುದನ್ನು ನೀವು ನೋಡಬಹುದು. ಕೈಯಲ್ಲಿ ಹಸಿರು ತೆಂಗಿನಕಾಯಿ ಇದೆ. ಇದ್ದಕ್ಕಿದ್ದಂತೆ ಅವರು ತೆಂಗಿನಕಾಯಿಯನ್ನು ತನ್ನ ಹಣೆಯ ಮೇಲೆ ಬಲವಾಗಿ ಹೊಡೆಯಲು ಆರಂಭಿಸುತ್ತಾರೆ. ಹೀಗೆ ಮೂರ್ನಾಲ್ಕು ಬಾರಿ ಮಾಡಿದಾಗ ತೆಂಗಿನಕಾಯಿ ಒಡೆದು ಅದರಿಂದ ಎಳನೀರು ಬೀಳಲು ಶುರುವಾಗುತ್ತದೆ. ಇದಾದ ನಂತರ ಎರಡು ಪ್ರತ್ಯೇಕ ಲೋಟಗಳಲ್ಲಿ ತೆಂಗಿನ ನೀರನ್ನು ಹೊರತೆಗೆದು ಎರಡೂ ಲೋಟಗಳನ್ನು ವಧು-ವರರಿಗೆ ಅವರು ಕುಡಿಯಲು ನೀಡುತ್ತಾರೆ.


ಈ ವ್ಯಕ್ತಿಯ ಹೆಸರು ಧರ್ಮೇಂದ್ರ ರಾಜಭರ್
ವರದಿಯ ಪ್ರಕಾರ ಹಣೆಯಿಂದ ತೆಂಗಿನಕಾಯಿ ಒಡೆದವರ ಹೆಸರು ಧರ್ಮೇಂದ್ರ ರಾಜ್‌ಭರ್. ಅವರು ಉತ್ತರ ಪ್ರದೇಶದ ಬಹ್ರೈಚ್ ನಿವಾಸಿ. ಕೆಲ ಸಮಯದ ಹಿಂದೆ 1.25 ನಿಮಿಷದಲ್ಲಿ ಕೈಯಿಂದ 211 ತೆಂಗಿನಕಾಯಿ ಒಡೆದಿದ್ದರು. ಒಂದು ನಿಮಿಷದಲ್ಲಿ 251 ತೆಂಗಿನಕಾಯಿ ಒಡೆದು ದಾಖಲೆ ಬರೆಯಲು ಅವರು ಹೊರಟಿದ್ದರು.


ಇದರೊಂದಿಗೆ ತಲೆಯಿಂದ ತೆಂಗಿನಕಾಯಿ ಒಡೆಯುವ ದಾಖಲೆಯನ್ನೂ ಮಾಡಬೇಕೆಂಬ ಆಸೆ ಅವರದ್ದಾಗಿದೆ, ಅದಕ್ಕಾಗಿ ನಿರಂತರವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಹೌದು, ಧರ್ಮೇಂದ್ರ ಅವರ ವಿಶೇಷತೆ ಏನೆಂದರೆ, ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ ತಲೆಗೆ ತೆಂಗಿನಕಾಯಿ ಒಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಾರೆ. ರೋಹ್ಟಕ್ ನಲ್ಲಿ ವಾಸವಾಗಿದ್ದಾಗ ಕೆಲಸ ಮಾಡುತ್ತಿದ್ದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಇಲ್ಲಿದೆ ವೈರಲ್ ವಿಡಿಯೋ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ