ದೆಹಲಿ: ಇತ್ತಿಚೀನ ದಿನಗಳಲ್ಲಿ ಬರ್ತಡೇ, ಮದುವೆ ಎಲ್ಲಾ ಸಮಾರಂಭವನ್ನು ವಿಭಿನ್ನವಾಗಿ ಸೆಲೆಬ್ರೆಷನ್‌ ಮಾಡುವುದು ಒಂದು ಟ್ರೆಂಡ್‌ ಆಗಿದೆ. ಹಾಗೆಯೇ ಕೆಲವು ತಿರ್ಪೆಶೋಕಿ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದಿರುವ ಅದೆಷ್ಟೋ ಘಟನೆಗಳು  ಕಣ್ಣಾ ಮುಂದಿದೆ. ಅದೇ ರೀತಿ ಇಲ್ಲೊಂದು ವಿಭಿನ್ನ ಕಥೆಯಲ್ಲಿ ಬರ್ತಡೇ ಸೆಲೆಬ್ರೆಷನ್‌ ಮಾಡಿ ಕುಟುಂಬ ಹಾಗೂ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಖುಷಿಯಾಗಿರುವ ಬದಲು  ಹುಟ್ಟು ಹಬ್ಬದ ದಿನದಂದೇ ಪೋಲಿಸರ ಕೈಸೆರೆ ಆಗಿದ್ದಾನೆ. 


COMMERCIAL BREAK
SCROLL TO CONTINUE READING

ವರ್ಷಕ್ಕೆ ಒಮ್ಮೆ ಬರುವ ಹುಟ್ಟು ಹಬ್ಬ ಎಂದರೆ ಸಂಭ್ರಮವೇ ಹೌದು.  ಆದರೆ ಯಾವುದೇ ಸಂಭ್ರಮವಾದರೂ  ಮಿತಿ ಮೀರುವುವಂತಿರಬಾರದು. ಸಮಾಜಕ್ಕೆ, ಕಾನೂನಿಗೆ ವಿರುದ್ಧವಾಗಿರಬಾರದು ಹಾಗೆಯೇ  ಆ ಸಂಭ್ರಮದಿಂದ ಜೀವಕ್ಕೆ ಅಥವಾ ಜೀವನಕ್ಕೆ ಕುತ್ತು ತರುವಂತಿರಬಾರದು . 


ಇದನ್ನೂ ಓದಿ: Vira Video: ಚಿರತೆಯಿಂದ ಸೂರ್ಯ ನಮಸ್ಕಾರ : ವಿಡಿಯೋ ಸಖತ್ ವೈರಲ್‌ 


ಆದರೆ ಇಲ್ಲೊಬ್ಬ ವ್ಯಕ್ತಿ ಹುಟ್ಟುಹಬ್ಬಕ್ಕೆ ಶೋಕಿ ಮಾಡುವ ಸಲುವಾಗ  ಪಿಸ್ತೂಲಿನಿಂದ ಕೇಕ್  ಮಾಡಿ ಸಂಭ್ರಮಿಸಿದ್ದಾನೆ. ಆತ ಸಂಭ್ರಮದ ಗುಂಗಲ್ಲಿ ಕಾನೂನಿನ ಚೌಕಟ್ಟನ್ನು ಮರೆತಂತಿದೆ.  ಅನಗತ್ಯ ಪಿಸ್ತೂಲ್‌ ಬಳಸುವುದು ಕಾನೂನು ಬಾಹಿರ ಎಂಬ ನಿಯಮವೇ ಇದೆ . ಅದನ್ನು ತಲೆಯಲ್ಲಿ ಇಟ್ಟುಕೊಂಡು ಹುಟ್ಟುಹಬ್ಬ ಸಂಭ್ರಮಿಸಿದ್ದರೆ ಬಹುಷಃ ಹುಟ್ಟು ಹಬ್ಬದ ದಿನದಂದು  ಫೋಲಿಸರ ಕೈ ವಶ ವಾಗುತ್ತಿರಲಿಲ್ಲ ಎನಿಸುತ್ತದೆ.  


ಸದ್ಯ ಪಿಸ್ತೂಲಿನಿಂದ ಕೇಕ್ ಕತ್ತರಿಸಿದ ವ್ಯಕ್ತಿಯನ್ನು ಹಾಗೂ ಸಂಗಡಿಗರನ್ನು ದೆಹಲಿ ಪೋಲಿಸ್‌ ಬಂಧಿಸಿದ್ದಾರೆ. ಪ್ರಕರಣ ಸಂಬಂಧ 315 ಬೋರ್ ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಂಡ  ಪೋಲಿಸರು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಸದ್ಯ ಈ  ವಿಡೀಯೊ ಬಾರಿ  ವೈರಲ್‌  ಆಗಿದ್ದು ಜೊತೆಗೆ ನೆಟ್ಟಿಗರ ಕಣ್ಣಿಗೆ ಗುರಿಯಾಗಿ ಬರ್ತಡೇ ವ್ಯಕ್ತಿ  ಬಾರಿ ಅಪಹಾಸ್ಯಕ್ಕೆ ಇಡಾಗಿದ್ದಾನೆ. 


Viral Video: ಪ್ರತಿಭಟನೆ ಆಕ್ರೋಶದ ಮಧ್ಯೆಯು ಫುಲ್‌ ವೈರಲ್‌ ಆಯಿತು ಯುಕೆ ಪೋಲೀಸ್ ಮ್ಯಾನ್‌ ಡ್ಯಾನ್ಸ್‌ https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.