ವೈರಲ್ ವಿಡಿಯೋ: ಹಣ ಅಥವಾ ಒಂದು ತುಂಡು ಭೂಮಿಗಾಗಿ ವ್ಯಕ್ತಿಗಳು ಪರಸ್ಪರ ಹತ್ಯೆಗೈಯುವ ಹಂತಕ್ಕೆ ಹೋಗುವ ಅಂತಹ ಹಲವು ಪ್ರಕರಣಗಳನ್ನು ನೀವು ಕೇಳಿರಬಹುದು. ವಾಸ್ತವದಲ್ಲಿ ಇಂತಹ ಜಗಳಗಳು ಒಂದು ಸಣ್ಣ ವಾದದಿಂದ ಪ್ರಾರಂಭವಾಗುತ್ತದೆ ಮತ್ತು ನಂತರ ಅದು ಕ್ರಮೇಣ ಜಗಳದ ರೂಪ ಪಡೆದುಕೊಳ್ಳುತ್ತವೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಅಮೆರಿಕದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಇಲ್ಲಿ ಸಣ್ಣ ವಿಚಾರಕ್ಕೆ ಅಕ್ಕಪಕ್ಕದವರ ನಡುವೆ ಆರಂಭವಾದ ವಾಗ್ವಾದ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬ ತಂದೆ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. (Viral News In Kannada)


COMMERCIAL BREAK
SCROLL TO CONTINUE READING

ಮೆಟ್ಟಿಲುಗಳ ಬಳಿ ನಿಂತಿರುವ ವ್ಯಕ್ತಿ ಕೆಲವೇ ಕ್ಷಣಗಳಲಿ ಗನ್ ಹೊರತೆಗೆದು ಗುಂಡು ಹಾರಿಸಲು ಹೇಗೆ ಆರಂಭಿಸುತ್ತಾನೆ ಎಂಬುದನ್ನು ನೀವು ಈ ವೀಡಿಯೊದಲ್ಲಿ ನೋಡಬಹುದು. ವ್ಯಕ್ತಿ ಮೊದಲು ಮಗನ ಮೇಲೆ ಹಲವು ಸುತ್ತು ಗುಂಡು ಹಾರಿಸಿ ನಂತರ ಪರಾರಿಯಾಗುತ್ತಿದ್ದ ತಂದೆಯ ಮೇಲೆ ಗುಂಡಿನ ಸುರಿಮಳೆಗೈಯುತ್ತಾನೆ. ನಂತರ ಇಬ್ಬರೂ ಮೃತಪಟ್ಟ ಬಳಿಕ ಆತ ಸಮಾಧಾನಗೊಂಡು ಅಲ್ಲಿಂದ ಹೊರಹೋಗುತ್ತಾನೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಹೃದಯ ವಿದ್ರಾವಕ ಘಟನೆಯಲ್ಲಿ ಇಬ್ಬರೂ (ತಂದೆ ಮತ್ತು ಮಗ) ಮೃತಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ-Viral Video: ಸಪ್ತಋಷಿ ಥೀಮ್ ಆಧರಿಸಿ ನಿರ್ಮಾಣಗೊಂಡ ಪಾರ್ಕ್ ನಲ್ಲಿ ಯುವ ಜೋಡಿಯ ಅಶ್ಲೀಲ ಕೃತ್ಯ!


ವಿಡಿಯೋ ನೋಡಿ


ಸ್ಪೀಡ್ ಬ್ರೆಕರ್ ಮೇಲೆ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ಇ-ರಿಕ್ಷಾ... ವಿಡಿಯೋ ನೋಡಿ!


ವರದಿಗಳ ಪ್ರಕಾರ, ಆರೋಪಿ ವ್ಯಕ್ತಿ ಮತ್ತು ಕುಟುಂಬದ ನಡುವೆ ಅಪಾರ್ಟ್‌ಮೆಂಟ್‌ನಲ್ಲಿ ಗಲಾಟೆ ಮಾಡುವ ವಿಚಾರವಾಗಿ ಜಗಳ ನಡೆದಿತ್ತು, ಆದರೆ ಈ ವಿವಾದ ಭೀಕರ ದುರಂತದಲ್ಲಿ ಅಂತ್ಯಕಂಡಿದೆ. ಆರೋಪಿಯನ್ನು 47 ವರ್ಷದ ಜೇಸನ್ ಪಾಸ್ ಎಂದು ಗುರುತಿಸಲಾಗಿದೆ. ಇದೇ ವೇಳೆ, ಈ ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ (ತಂದೆ) ಪತ್ನಿ ಆರೋಪಿಯು ಈಗಾಗಲೇ ಕ್ರಿಮಿನಲ್ ಪ್ರವೃತ್ತಿಯನ್ನು ಹೊಂದಿದ್ದಾನೆ ಎಂದು ಹೇಳಿದ್ದಾರೆ. ಆತನ ವಿರುದ್ಧ 1992ರಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ