Viral video: ಭಯದಲ್ಲಿದ್ದ ಕಿಂಗ್ ಕೋಬ್ರಾದ ಮರಿಯನ್ನು ಮುದ್ದಾಡಿದ ಯುವಕ.. ಮುನುಷ್ಯನ ಪ್ರೀತಿಯನ್ನು ಮೆಚ್ಚಿ ಮನಸೋತ ಮುಗ್ದ ಸರ್ಪ ಮಾಡಿದ್ದೇನು ಗೊತ್ತಾ?
Viral video: ಪ್ರಕೃತಿಯ ಅತ್ಯಂತ ವಿಷಕಾರಿ ಹಾಗೂ ಭಯಾನಕ ಸಪರ್ಗಳಲ್ಲಿ ಕಾಳಿಂಗ ಸರ್ಪ ಕೂಡ ಒಂದು, ಈ ಸಪರ್ವೇನಾದರೂ ನಿಮಗೆ ಕಚ್ಚಿದರೆ, ಕೇವಲ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ರಾಣ ಪಕ್ಷಿ ಹಾರಿ ಹೋಗುವುದು ಕಂಡಿತ. ಆದರೆ, ಇಲ್ಲೊಬ್ಬ ಪುಣ್ಯಾತ್ಮ, ಕಾಳಿಂಗ ಸರ್ಪದ ಮರಿಯನ್ನು ಹಿಡಿದು ಮುದ್ದಾಡುತ್ತಿದ್ದಾನೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Viral video: ಪ್ರಕೃತಿಯ ಅತ್ಯಂತ ವಿಷಕಾರಿ ಹಾಗೂ ಭಯಾನಕ ಸಪರ್ಗಳಲ್ಲಿ ಕಾಳಿಂಗ ಸರ್ಪ ಕೂಡ ಒಂದು, ಈ ಸಪರ್ವೇನಾದರೂ ನಿಮಗೆ ಕಚ್ಚಿದರೆ, ಕೇವಲ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ರಾಣ ಪಕ್ಷಿ ಹಾರಿ ಹೋಗುವುದು ಕಂಡಿತ. ಆದರೆ, ಇಲ್ಲೊಬ್ಬ ಪುಣ್ಯಾತ್ಮ, ಕಾಳಿಂಗ ಸರ್ಪದ ಮರಿಯನ್ನು ಹಿಡಿದು ಮುದ್ದಾಡುತ್ತಿದ್ದಾನೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಾವುಗಳಂದರೆ ಅವು ನಮ್ಮ ಸುತ್ತಲಿರುವ ವಿಷಕಾರಿ ಜಂತುಗಳು, ಕೆಲವೊಬ್ಬರು ಹಾವುಗಳನ್ನು ನೋಡುತ್ತಿದ್ದಂತೆ ಕಾಲಕಿತ್ತುತ್ತಾರೆ, ಅದಕ್ಕೆ ಕಾರಣ ಈ ವಿಷಕಾರಿ ಜಂತುಗಳು ಸಕತ್ ಡೇಂಜರ್. ಇವು ಒಮ್ಮೆ ನಮ್ಮನ್ನು ಕಚ್ಚಿದರೆ, ಸಾವಿನ ಸಳಿಯಲ್ಲಿ ಸಿಲುಕಿಕೊಂಡಂತೆ, ಕೆಲವೊಂದು ಹಾವುಗಳು ಕಚ್ಚಿದರೆ ಅದು ಅಷ್ಟೊಂದು ವಿಷಕಾರಿಯಲ್ಲ. ಆದರೆ, ಕಾಳಿಂಗ ಸರ್ಪ ಕಚ್ಚಿದರಂತೂ ನೀವು ಶಿವನ ಪಾದ ಸೇರುವುದು ಗ್ಯಾರಂಟಿ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ಪುಣ್ಯಾತ್ಮ ಹಾವಿನ ಜೊತೆ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾಳಿಂಗ ಸರ್ಪದ ಮರಿ ಇದ್ದು, ಮನುಷ್ಯ ಕಾಳಿಂಗ ಸರ್ಪವನ್ನು ಮುದ್ದಾಡಲು ಆರಂಭಿಸಿದ್ದಾನೆ, ವಿಡಿಯೋ ನೋಡುವುದಕ್ಕೆ ಮುದ್ದಾಗಿದ್ದರೂ ಆ ಹಾವಿನ ಮರಿ ಏನಾದರೂ ಅವನನ್ನು ಕಚ್ಚಿದ್ದರೆ, ಮಾರಾಯ ಡೈರೆಕ್ಟ್ ಸ್ವರ್ಗಕ್ಕೆ ಗೇಟ್ ಪಾಸ್ ತಗೆದುಕೊಳ್ಳುತ್ತಿದ್ದ ಅಂತಲೇ ಹೇಳಬಹುದು.
ವೈರಲ್ ಆಗುತ್ತಿರುವ ಈ ವಿಡಿಯೋವನ್ನು "ವರ್ಲ್ಡ್ ಆಫ್ ಸ್ನೇಕ್ಸ್" ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮರಿ ಕಿಂಗ್ ಕೋಬ್ರಾ ಭಯಭಿತಗೊಂಡಿದೆ, ಇದನ್ನು ನೋಡಿದ ವ್ಯಕ್ತಿ ಅದರ ತಲೆಯ ಮೇಲೆ ಕೈಯನ್ನಿಟು ಸವರಿ ಅದನ್ನು ಮುದ್ದಾಡಲು ಮುಂದಾಗುತ್ತಾನೆ, ಭಯದಿಂದ ಹಾವಿನ ಮರಿ ಮನುಷ್ಯನ ಕೈ ತಾಕದಂತೆ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ. ನಂತರ ಹಾವು ಮನುಷ್ಯನಿಗೆ ತನ್ನನ್ನು ಮುಟ್ಟದಂತೆ ಎಚ್ಚರಿಕೆಯ ಚಹ್ನೆಯನ್ನು ನೀಡುವುದನ್ನು ಕೂಡ ಕಾಣಬಹುದು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಕೆಲವೇ ದಿನಗಳಲ್ಲಿ 1.4 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಸದ್ಯ ಈ ವಿಡಿಯೋ ನೋಡಿ ನೆಟ್ಟಿಗರು ಕೆಲವು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರೆ, ಇನ್ನೂ ಕೆಲವರು, ಹಾವನ್ನು ಯಾಕೆ ಮುದ್ದಾಡುತ್ತಿಯೋ ತಮ್ಮ ಕಚ್ಚಿದ್ರೆ ಸ್ವರ್ಗ ಸೇರ್ತೀಯ ಹುಷಾರ್ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.