Peacock flying video: ಪ್ರಕೃತಿಯಲ್ಲಿ ಪ್ರತೀ ದಿನ ಅದೆಷ್ಟೋ ವೈಚಿತ್ರ್ಯಗಳು ನಡೆಯುತ್ತಲೇ ಇರುತ್ತವೆ. ಅಂತಹ ಘಟನೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಈ ದೃಶ್ಯದಲ್ಲಿ ನೀವು ನವಿಲು ಹಾರುವುದನ್ನು ನೋಡಬಹುಹು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಭೇಲ್​ಪುರಿ, ಮಂಡಕ್ಕಿ ಸೂಸಲ, ಚುರುಮುರಿ ಪ್ರಿಯರೇ ಸೇವಿಸುವ ಮುನ್ನ ಈ ವಿಡಿಯೋ ನೋಡಿ..


ನವಿಲುಗಳು ಸುಂದರವಾದ ಪಕ್ಷಿ. ನಮ್ಮ ರಾಷ್ಟ್ರಪಕ್ಷಿ ಕೂಡ ಹೌದು. ನವಿಲು ತನ್ನ ವರ್ಣರಂಜಿತ ರೆಕ್ಕೆಗಳಿಂದ, ಅದರ ನಲಿದಾಟದಿಂದಲೇ ನೋಡುಗರ ಮನಗೆಲ್ಲುತ್ತದೆ. ಸಾಮಾನ್ಯವಾಗಿ ನವಿಲುಗಳು ಆಕಾಶದಲ್ಲಿ ಹೆಚ್ಚು ಎತ್ತರಕ್ಕೆ ಹಾರಲಾರವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಪರೂಪದ ಕ್ಷಣಗಳಲ್ಲಿ, ಹಾರುವ ನವಿಲುಗಳನ್ನು ನೋಡಬಹುದು. ಅಂತಹ ವೀಡಿಯೊ ಈಗ ಆನ್‌’ಲೈನ್‌’ನಲ್ಲಿ ಕಾಣಿಸಿಕೊಂಡಿದೆ.


ವಿದ್ಯುತ್ ಕಂಬದ ಮೇಲೆ ನವಿಲು ಕುಳಿತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಅಲ್ಲಿಂದ ನವಿಲು ಹಾರುತ್ತಿದೆ. ಈ ವಿಡಿಯೋವನ್ನು ಸ್ಲೋ ಮೋಷನ್‌ ನಲ್ಲಿ ಸೆರೆಹಿಡಿಯಲಾಗಿದೆ. ನವಿಲಿನ ಹಾರಾಟದ ಈ ಸೌಂದರ್ಯ ನೋಡಲು ಎರಡು ಕಂಗಳೇ ಸಾಲದು ಎನ್ನುವಂತಿದೆ. 52 ಸೆಕೆಂಡುಗಳ ವೀಡಿಯೋದಲ್ಲಿ ನವಿಲು ಆಕಾಶದೆತ್ತರಕ್ಕೆ ಹಾರುತ್ತಿರುವುದನ್ನು ನೋಡಬಹುದು.


'CCTV IDIOTS' ಹೆಸರಿನ ಖಾತೆಯಿಂದ ಟ್ವಿಟರ್‌ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. “ನೀವು ಎಂದಾದರೂ ನವಿಲು ಹಾರುವುದನ್ನು ನೋಡಿದ್ದೀರಾ?” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.


ವೀಡಿಯೊ ನೋಡಿ:


https://zeenews.india.com/kannada/videos/watch-a-viral-video-of-flying-peacock-149930


ಇದನ್ನೂ ಓದಿ: ಕುನೋ ರಾಷ್ಟ್ರೀಯ ಅಭಿಯಾರಣ್ಯದಲ್ಲಿ 9 ನೇ ಚೀತಾ ಸಾವು


ಜುಲೈ 31 ರಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದು 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಕಾಮೆಂಟ್‌ ಗಳನ್ನು ಗಳಿಸಿದೆ. ಹಾರುತ್ತಿರುವ ನವಿಲಿನ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಟ್ವಿಟ್ಟರ್ ಬಳಕೆದಾರರು ಈ ವೀಡಿಯೊ ನೋಡಿ ಮೈಮರೆತಿದ್ದೇವೆ ಎಂದು ಹೇಳಿದರೆ, ಇನ್ನೂ ಕೆಲವರು ಇದು ಸಾಮಾನ್ಯ ದೃಶ್ಯ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ