Viral Video: ಹೆಣ್ಣು ಕೊಟ್ಟ ಮಾವನ ಆಸೆ ಈಡೇರಿಸಲು ಮನೆ ಮೇಲೆ ಹಣದ ಸುರಿಮಳೆಗೈದ ಪಾಕಿಸ್ತಾನಿ ಅಳಿಯ!!
Viral Video: ಪಾಕಿಸ್ತಾನದ ಮದುವೆಯೊಂದರಲ್ಲಿ ಮಾವನ ವಿಚಿತ್ರ ಬೇಡಿಕೆ ಈಡೇರಿಸಲು ಅಳಿಯನೊಬ್ಬ ಹೆಲಿಕಾಪ್ಟರ್ ಮೂಲಕ ಹಣದ ಸುರಿಮಳೆ ಸುರಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Money Rain Viral Video: ಮದುವೆಯ ಸಂದರ್ಭದಲ್ಲಿ ವಧು-ವರನ ಕಡೆಯಿಂದ ಅನೇಕ ತಮಾಷೆಯ ಹಾಗೂ ಗಂಭೀರ ಬೇಡಿಕೆಗಳಿರುತ್ತವೆ. ಕೆಲವು ಕಡೆ ವರದಕ್ಷಿಣೆ ಚಾಲ್ತಿಯಲ್ಲಿದ್ದರೆ, ಮತ್ತೆ ಕೆಲವು ಕಡೆ ವಧು ದಕ್ಷಿಣೆಯ ಸಂಪ್ರದಾಯ ನಡೆಯುತ್ತಿದೆ. ಅದೇ ರೀತಿ ಪಾಕಿಸ್ತಾನದಲ್ಲಿ ಹೆಣ್ಣು ಕೊಟ್ಟ ಮಾವನೋರ್ವ ಅಳಿಯನ ಬಳಿ ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದ. ತನ್ನ ಹೈದರಾಬಾದ್ನ ಮನೆಯ ಮೇಲೆ ನೋಟಿನ ಸುರಿಮಳೆ ಸುರಿಸುವಂತೆ ಸೂಚಿಸಿದ್ದನಂತೆ. ಮಾವನ ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಅಳಿಯ ಇದಕ್ಕಾಗಿ ಖಾಸಗಿ ಹೆಲಿಕಾಪ್ಟರ್ ಬುಕ್ ಮಾಡಿ ಮಾವನ ಮನೆಯ ಮೇಲೆ ಹಣದ ಸುರಿಮಳೆಯನ್ನೇ ಸುರಿಸಿದ್ದಾನೆ. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮದುವೆ ಕಾರ್ಯಕ್ರಮದಲ್ಲಿ ವಧು-ವರರ ಮೇಲೆ ಹಣ ಸುರಿಸುವುದು ಕಾಮನ್. ಉತ್ತರ ಭಾರತದ ಮದುವೆಗಳಲ್ಲಿ ಇಂತಹ ಸಂಗತಿ ಸಾಮಾನ್ಯ. ಕೆಲವರು ಹಣದ ಹಾರ ಮಾಡಿ ವಧು-ವರರ ಕೊರಳಿಗೆ ಹಾಕಿದ್ರೆ, ಮತ್ತೆ ಕೆಲವರು ಅವರ ತಲೆಯ ಮೇಲೆ ಹಣದ ಮಳೆ ಸುರಿಸುತ್ತಾರೆ. ಆದರೆ ನೆರೆಯ ಪಾಕಿಸ್ತಾನದಲ್ಲಿ ವರನೋರ್ವ ಹೆಣ್ಣು ಕೊಟ್ಟ ಮಾವನ ಆಸೆ ಈಡೇರಿಸಲು ಆಕಾಶದಿಂದಲೇ ನೇರವಾಗಿ ಮಾವನ ಮನೆ ಮೇಲೆ ಹಣದ ಮಳೆ ಸುರಿಸಿದ್ದಾನೆ.
ಇದನ್ನೂ ಓದಿ: ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ ಟ್ರಂಪ್, ಮಸ್ಕ್! ವೀಡಿಯೊ ಇಲ್ಲಿದೆ
ಪಾಕಿಸ್ತಾನಕ್ಕೆ ಹಣದ ಸಹಾಯವನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳಬೇಕುʼ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಒಂದೂವರೆ ಮಿಲಿಯನ್ ಟನ್ ನೀರು, ಮಂಗಳ ಗ್ರಹದಲ್ಲಿ ಜೀವ ಪತ್ತೆ? ಏನು ಹೇಳುತ್ತೆ ಈ ಸಂಶೋಧನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.