ಬೆಂಗಳೂರು: ಟಿಕ್‍ಟಾಕ್ ಸ್ಟಾರ್ ಗಳು​ ಮಾಡುವ ಎಡವಟ್ಟುಗಳು ಒಂದೆರಡಲ್ಲ. ಕೆಲವೇ ಕೆಲವು ಸೆಕೆಂಡುಗಳ ವಿಡಿಯೋ ಶೂಟ್ ಮಾಡಲು ಟಿಕ್‍ಟಾಕ್ ಸ್ಟಾರ್ ಗಳು ದೊಡ್ಡ ದೊಡ್ಡ ಅನಾಹುತ ಮಾಡಿರುವ ಸುದ್ದಿಗಳನ್ನು ನೀವು ಕೇಳಿರಬಹುದು. ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡವರು ಅನೇಕರಿದ್ದಾರೆ. ಟಿಕ್‍ಟಾಕ್ ಮಾಡಲು ಹೋಗಿ ಪಾಕಿಸ್ತಾನಿ ಟಿಕ್‍ಟಾಕ್‍ ಸ್ಟಾರ್ ಒಬ್ಬಳು ದೊಡ್ಡ ಎಡವಟ್ಟು ಮಾಡಿದ್ದಾಳೆ. ಇದೀಗ ಆಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟಿಜನ್‍ಗಳ ಕಣ್ಣು ಕೆಂಪಗಾಗಿಸಿದೆ.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಏನು ಮಾಡಿದ್ದಾಳೆ ಟಿಕ್‍ಟಾಕ್ ಸ್ಟಾರ್..?


ಚಿತ್ರ-ವಿಚಿತ್ರ ಟಿಕ್‍ಟಾಕ್ ವಿಡಿಯೋ ಮಾಡುತ್ತಲೇ ಪ್ರಸಿದ್ಧಿಯಾಗಿರುವ ಪಾಕಿಸ್ತಾನದ ಟಿಕ್‍ಟಾಕ್ ಸ್ಟಾರ್ ಹುಮೈರಾ ಅಸ್ಗರ್ ಇತ್ತೀಚೆಗೆ ಶೂಟ್ ಮಾಡಿರುವ ವಿಡಿಯೋವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಕೆಯ ವಿಡಿಯೋ ನೋಡಿದ ಅನೇಕರು ಕಿಡಿಕಾರಿದ್ದು, ಛೀಮಾರಿ ಹಾಕಿದ್ದಾರೆ. ಅಷ್ಟಕ್ಕೂ ಹುಮೈರಾ ಮಾಡಿದ ತಪ್ಪಾದರೂ ಏನು ಅಂತೀರಾ..?


ಇದನ್ನೂ ಓದಿ: Shocking Video : ಹುಲಿಯನ್ನು ಸಾಕು ನಾಯಿಯಂತೆ ಸುತ್ತಾಡಿಸುತ್ತಾಳೆ ಈ ಯುವತಿ, ನೀವೂ ನೋಡಿ


ಅಮ್ಮನ ಫೋನ್ ನಿಂದ 31 ಬರ್ಗರ್ ಆರ್ಡರ್ ಮಾಡಿ, ಟಿಪ್ಸ್ ಕೂಡಾ ಕೊಟ್ಟ ಎರಡು ವರ್ಷದ ಪೋರ


ವಿಡಿಯೋ ವೈರಲ್ ಆದ ನಂತರ ಟೀಕೆಗೆ ಗುರಿಯಾಗಿರುವ ಹುಮೈರಾ ಆಸ್ಗರ್ ಮಾತನಾಡಿ, ‘ಈ ಕಾಡ್ಗಿಚ್ಚು ನನ್ನಿಂದ ಉಂಟಾಗಿಲ್ಲ. ವಿಡಿಯೋ ಮಾಡುವುದರಿಂದ ನಾನು ಪರಿಸರಕ್ಕೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ’ವೆಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಈ ವಿಡಿಯೋವನ್ನು ಟಿಕ್‍ಟಾಕ್‍ನಿಂದ ತೆಗೆದುಹಾಕಿದ್ದರೂ ಹುಮೈರಾ ವಿರುದ್ಧ ನೆಟಿಜನ್‍ಗಳು ಸೋಷಿಯಲ್ ಮೀಡಿಯಾದಲ್ಲಿ ಕೋಪ ವ್ಯಕ್ತಪಡಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.