ನ್ಯೂಯಾರ್ಕ್: ವಿಮಾನವು ಗಾಳಿಯಲ್ಲಿ ಹಠಾತ್ ಫ್ರಿಜ್ ಆಗಿರಬಹುದು ಎಂಬುದನ್ನು ನೀವು ಎಂದಾದರೂ ಊಹಿಸಬಲ್ಲಿರಾ? ಅದು ಊಹೆಗೂ ಮೀರಿದ್ದು ಅಂತ ನಿಮಗೆ ಅನಿಸುತ್ತಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಈ ವೀಡಿಯೊವನ್ನು ನೀವು ನೋಡಲೇಬೇಕು. ವಿಲ್ ಮ್ಯಾನಿಡಿಸ್ ಎಂಬುವರು ಅಕ್ಟೋಬರ್‌ನಲ್ಲಿ ಎಕ್ಸ್ ಸಾಮಾಜಿಕ ವೇದಿಕೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಸ್ಯಾನ್ ಮೆಟೊ-ಹಾರ್ಡ್ ಸೇತುವೆ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ​​ಕೊಲ್ಲಿಯ ಮೇಲೆ ಗಾಳಿಯಲ್ಲಿ ಸ್ಥಿರವಾಗಿ ನಿಂತಿರುವಂತೆ ಕಾಣುವ ವಿಮಾನವೊಂದು ಪತ್ತೆಯಾಗಿದೆ. (Viral News In Kannada)

COMMERCIAL BREAK
SCROLL TO CONTINUE READING

ನ್ಯೂಯಾರ್ಕ್ ನಗರದಿಂದ ಬೇ ಏರಿಯಾಕ್ಕೆ ಹಾರಾಟದ ಸಮಯದಲ್ಲಿ, ವಿಲ್ ಮ್ಯಾನಿಡಿಸ್ ವಿಮಾನ ಲ್ಯಾಂಡಿಂಗ್ ಮಾಡುವ ವೇಳೆ ಕಿಟಕಿಯಿಂದ ಹೊರಗೆ ನೋಡಿದಾಗ ಒಂದು ಆಪ್ಟಿಕಲ್ ಇಲ್ಯೂಷನ್ ನೋಡಿರುವುದಾಗಿ ಹೇಳಿದ್ದಾರೆ. ಈ ವಿಚಿತ್ರ ಭ್ರಮೆಯನ್ನು ನೋಡುವ ಮೊದಲು, ಅವರು ಸುಂದರವಾದ ಸೀನ್ ಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದರು. ವಿಲ್ ಮ್ಯಾನಿಡಿಸ್ ವೀಡಿಯೊವನ್ನು x ನಲ್ಲಿ ಹಂಚಿಕೊಂಡು ' ಇಂದು ನಾನು ವಿಮಾನವೊಂದು ಗಾಳಿಯಲ್ಲಿ ಸ್ಥಿರವಾಗಿ ನಿಂತಿರುವುದನ್ನು ಕಂಡೆ ಮತ್ತು ನಿಮಗೆ ಇಂದಿಗೂ ಕೂಡ ಫೀಸಿಕ್ಸ್ ನಿಜ ಎನ್ನಿಸುತ್ತದೆ'' ಎಂಬ ಶೀರ್ಷಿಕೆಯನ್ನು ಅದಕ್ಕೆ ನೀಡಿದ್ದಾರೆ. 


ಇದನ್ನೂ ಓದಿ-ಸಾಬೂನು ಬಿಲ್ಲೆಗಳನ್ನು ಬಳಸಿ ದೈತ್ಯ ಹೊಟೇಲ್ ಅನ್ನು 30 ಅಡಿ ಹಿಂದಕ್ಕೆ ಸರಿಸಿದ ಕಾರ್ಮಿಕರು... ವಿಡಿಯೋ ನೋಡಿ


ವೀಡಿಯೊವನ್ನು 30 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯನ್ನು ಪಡೆದುಕೊಂಡಿದೆ
ವೈರಲ್ ವೀಡಿಯೊವನ್ನು ಎಕ್ಸ್‌ನಲ್ಲಿ 30 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವೀಡಿಯೊದಲ್ಲಿ ಕಾಮೆಂಟ್ ಮಾಡಿ, ಬರೆದುಕೊಂಡ ಓರ್ವ ಬಳಕೆದಾರ,'ಮ್ಯಾಟ್ರಿಕ್ಸ್‌ನಲ್ಲಿ ಅವ್ಯವಸ್ಥೆ ಅಂದರೆ ಇದೆ ಎಂದಿದ್ದಾರೆ. ಮತ್ತೊಬ್ಬರು 'ಸಾಸಾಹ್, ನಿದ್ರೆ ಬರುತ್ತಿದೆ' ಎಂದು ಬರೆದಿದ್ದಾರೆ. ಮೂರನೆಯ ಬಳಕೆದಾರರು 'ಇದನ್ನು ಸಮಾನಾಂತರ ಪರಿಣಾಮ ಎಂದು ಕರೆಯಲಾಗುತ್ತದೆ' ಎಂದಿದ್ದಾರೆ. 'ಹತ್ತಿರವಿರುವ ವಸ್ತುಗಳು ದೂರದ ವಸ್ತುಗಳಿಗಿಂತ ವೇಗವಾಗಿ ಚಲಿಸುತ್ತಿರುವಂತೆ ಕಾಣಿಸಿದಾಗ ಇದು ಸಂಭವಿಸುತ್ತದೆ. ಇದರ ಫಲಿತಾಂಶವೆಂದರೆ ನಿಧಾನವಾಗಿ ಚಲಿಸುವ ವಸ್ತುಗಳು ಇತರರಿಗಿಂತ ಸ್ಥಿರವಾಗಿ ಗೋಚರಿಸುತ್ತವೆ. ಭೌತಶಾಸ್ತ್ರವು ಅದ್ಭುತವಾಗಿದೆ' ಎಂದು ಮತ್ತೊಬ್ಬರು ಹೇಳಿದ್ದಾರೆ.


ಇದನ್ನೂ ಓದಿ-ಜೋಡಿಗಳು ಪರಸ್ಪರ ಆಲಿಂಗಿಸಿ ಮಾಡುವ ಇಂತಹ ಯೋಗ ನೀವು ನಿಮ್ಮ ಲೈಫಲ್ಲೆ ನೋಡಿರಲಿಕ್ಕಿಲ್ಲ!


ಈ ಕುರಿತು ಬರೆದುಕೊಂಡ ಮತ್ತೊರ್ವ ಬಳಕೆದಾರರು, ' ನೀವು ಏನೇ ಹೇಳಿದರೂ. ನೀವು ಚಲಿಸುತ್ತಿದ್ದ ವಿಮಾನದ ವೇಗ ಹೆಚ್ಚಾಗಿದ್ದು, ಅದು ಎಸ್‌ಎಫ್‌ಒನಲ್ಲಿ ಪ್ರತ್ಯೇಕ ರನ್ ವೇಗೆ ಬರುತ್ತಿದ್ದು, ಸಾಪೇಕ್ಷ ವೇಗ ಮತ್ತು ದಿಕ್ಕಿನಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ' ಎಂದಿದ್ದಾರೆ. ಇದೇ ವೇಳೆ 'ಅತ್ಯಂತ ಭಯಾನಕ ವಿಷಯವೆಂದರೆ ಎರಡು ವಿಮಾನಗಳು ಎಷ್ಟು ಹತ್ತಿರದಲ್ಲಿವೆ ಎಂಬುದು' ಎಂದು ಮತ್ತೊರ್ವ ಬಳಕೆದಾರರು ಹೇಳಿದ್ದಾರೆ.


ಇಲ್ಲಿದೆ ಆ ವೈರಲ್ ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ