Red Chillies Adulterated Goes Viral: ಒಂದಾನೊಂದು ಕಾಲದಲ್ಲಿ ಕೆಲವು ಪದಾರ್ಥಗಳು ಮಾತ್ರ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಯಾವುದರಲ್ಲಿ ಕಲಬೆರಕೆ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಬಂದಿದೆ. ಹೌದು, ಹಾಲು, ಮೊಸರು, ಸೊಪ್ಪು, ಎಣ್ಣೆ, ಸಾಸಿವೆ, ಜೀರಿಗೆ ಹೀಗೆ ಎಲ್ಲವೂ ಮಾರುಕಟ್ಟೆಗಳಲ್ಲಿ ಕಲಬೆರಕೆಯಾಗುತ್ತಿದೆ. ಅಲ್ಲದೆ, ಅಡುಗೆಗೆ ಬಳಸುವ ಅಕ್ಕಿ, ಬೇಳೆಕಾಳುಗಳಲ್ಲಿಯೂ ಕಲಬೆರಕೆ ಮಾಡಿರುವ ಸುದ್ದಿ ಕೇಳುತ್ತೇವೆ ಮತ್ತು ನೋಡುತ್ತೇವೆ. ಇದು ಸಾಲದು ಅಂತ ವೈದ್ಯಕೀಯ ಉತ್ಪನ್ನಗಳು ಮತ್ತು ಮಾತ್ರೆಗಳಲ್ಲೂ ಇದೇ ರಾಮಾಯಾಣ. ನಾವು ಏನು ತಿನ್ನುತ್ತಿದ್ದೇವೆ ಎಂಬುದನ್ನು ನೆನಸಿಕೊಂಡರೆ ತುಂಬಾ ಭಯಾವಾಗುತ್ತದೆ. ಅವರು ಬೆಳೆಗಳನ್ನು ನೆಡುವಾಗ ಯಾವುದೇ ಕೃತಕ ರಾಸಾಯನಿಕಗಳನ್ನು ಬಳಸುವುದಿಲ್ಲ. ಆದರೆ ಈಗ ಎಲ್ಲವೂ ಕೃತಕವಾಗಿಯೇ ಮಾಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಚಿಲ್ಲರೆ ನಾಣ್ಯಗಳೊಂದಿಗೆ iPhone 15 Pro Max ಖರೀದಿಸುತ್ತಿರುವ ಭಿಕ್ಷುಕ..!


ಕೆಲವು ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಕೂಡ ಮಾಗಿಸಲಾಗುತ್ತದೆ. ಇದಲ್ಲದೇ ಗೊತ್ತಿಲ್ಲದೆ ಈ ರಾಸಾಯನಿಕಗಳನ್ನು ಬೆರೆಸಿದ ಪದಾರ್ಥಗಳನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳು ಸಂಭವಿಸುವ ಸಾಧ್ಯದೆ ಹೆಚ್ಚು. ಪೊಲೀಸರು ಎಷ್ಟೇ ಮುಂಜಾಗ್ರತೆ ವಹಿಸಿದರು, ದಾಳಿ ನಡೆಸಿದರೂ ವಂಚಕರು ತಮ್ಮ ವಿಧಾನ ಬದಲಿಸಿಕೊಳ್ಳುವುದೇ ಇಲ್ಲ.ಅಂತಹದ್ದೆ ಒಂದು ಕಲಬೆರಿಕೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಏನ್‌ ಆ ಸ್ಟೋರಿ ಎಂದು ತಿಳಿಯಿರಿ..


 


Viral Video: ನರೇಂದ್ರ ಮೋದಿ ಯಾರು? ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಪತ್ರಕರ್ತೆ, ಉತ್ತರ ಕೇಳಿ ನೀವೂ...!


ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಲ್ಲಿದೆ. ಕೆಲವು ಮಹಿಳೆಯರು ಕೆಂಪು ಮೆಣಸಿನಕಾಯಿಯನ್ನು ಕಲಬೆರಕೆ ಮಾಡುತ್ತಿರುವ ವಿಷಯದ ಕುರಿತು ಕೆಲ ಯುವಕರಿಗೆ ತಿಳಿಯಿತು. ಕೆಲವರು ತಕ್ಷಣ ಸ್ಥಳಕ್ಕಾಗಮಿಸಿ ಕಲಬೆರಕೆ ನಡೆಸುತ್ತಿರುವ ಸ್ಥಳ  ಬಂದು ಆ ಘಟನೆ ಮತ್ತು ಅಲ್ಲಿನ ಮಹಿಳೆಯರನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದರು. ಈ ವೀಡಿಯೋದಲ್ಲಿ ಅಲ್ಲಿನ ಮಹಿಳೆಯರು ವೀಡಿಯೋ ಜೊತೆ ಜಗಳವಾಡುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರ ಕಲಬೆರಕೆ ಆಗದ ಮತ್ತೇನೋ ಇದು ಎಂದು ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಕೆಲವರು ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಸದ್ಯಕ್ಕೆ ಈ ಘಟನೆ ಭಾರಿ ಸುದ್ದಿಯಾಗುತ್ತಿರುವುದಂತು ಪಕ್ಕಾ. 


https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY