ನವದೆಹಲಿ: ಜಗತ್ತಿನಲ್ಲಿ ವೆಜ್ ಜೊತೆಗೆ ನಾನ್ ವೆಜ್ ತಿನ್ನುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ನಾನ್ ವೆಜ್ ಎಂಬ ಹೆಸರಿನಲ್ಲಿ ಕೋಳಿ ಮಾಂಸ, ಮಟನ್ ತಿನ್ನದೇ ಕೇವಲ ಮೊಟ್ಟೆ ತಿನ್ನುವ ಕೆಲವರಿದ್ದಾರೆ. ಬಹುಶಃ ನೀವು ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಿರಬಹುದು, ಆದರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ದಿನಕ್ಕೆ 2-3 ಮೊಟ್ಟೆಗಳನ್ನು ಮಾತ್ರ ತಿನ್ನುತ್ತಾನೆ, ಆದರೆ ಜಿಮ್ ಮಾಡುವವರು 6-7 ತಿನ್ನುತ್ತಾರೆ. ನೀವು ಜಿಮ್‌ಗೆ ಹೋದರೆ ಬಹುಶಃ ನೀವು ಕೂಡ ಇಷ್ಟು ಮೊಟ್ಟೆಗಳನ್ನು ತಿನ್ನಬಹುದು, ಆದರೆ ಒಂದೇ ಬಾರಿಗೆ 20-30 ಮೊಟ್ಟೆಗಳನ್ನು ತಿನ್ನಲು ಕೇಳಿದರೆ, ನಿಮ್ಮಿಂದ ಹಾಗೆ ಮಾಡಲು ಸಾಧ್ಯವೇ? ಹೌದು, ಇತ್ತೀಚಿನ ದಿನಗಳಲ್ಲಿ ಅಂತಹದ್ದೊಂದು ಚಾಲೆಂಜ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral News In Kannada) ಆಗುತ್ತಿದೆ, ಇಂತಹ ಚಾಲೆಂಜ್ ಕೇಳಿ ಜನರು ಶಾಕ್ ಆಗಿದ್ದಾರೆ.


COMMERCIAL BREAK
SCROLL TO CONTINUE READING


ವಾಸ್ತವದಲ್ಲಿ ಈ ವೈರಲ್ ವಿಡಿಯೋದಲ್ಲಿ ಅಂಗಡಿ ಮಾಲೀಕರೊಬ್ಬರು 31 ಮೊಟ್ಟೆಗಳಿಂದ ತಯಾರಿಸಲಾಗಿರುವ ಆಮ್ಲೆಟ್ ತಿಂದು ತೋರಿಸಿ ಎಂದು ಜನರಿಗೆ ಚಾಲೆಂಜ್ ನೀಡಿದ್ದು, ಈ ಚಾಲೆಂಜ್ ಅನ್ನು ಪೂರ್ಣಗೊಳಿಸಿದವರು ಅಂದರೆ, 31 ಮೊಟ್ಟೆಯ ಆಮ್ಲೆಟ್ ತಿಂದವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. . ಈ ವಿಶಿಷ್ಟ ಚಾಲೆಂಜ್ ನೀಡಿದ ಅಂಗಡಿಯವನ ಹೆಸರು ರಾಜೀವ್ ಮತ್ತು ಅವರ ಈ ಅಂಗಡಿ ದೇಹಲಿಯಲ್ಲಿದೆ. 


ವಿಡಿಯೋ ನೋಡಿ-



ಅಂಗಡಿಯವನು ಒಂದು ಪಾತ್ರೆಯಲ್ಲಿ 31 ಮೊಟ್ಟೆಗಳನ್ನು ಒಂದೊಂದಾಗಿ ಒಡೆದು ಆಮ್ಲೆಟ್ ಮಾಡಲು ಆರಂಭಿಸುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಮೊದಲು ಅವರು ಬಾಣಲೆಯಲ್ಲಿ ಬಹಳಷ್ಟು ಬೆಣ್ಣೆಯನ್ನು ಕಾಕಿದ್ದಾರೆ ಮತ್ತು ನಂತರ ಈರುಳ್ಳಿ, ಮೆಣಸಿನಕಾಯಿ ಮತ್ತು ಟೊಮೆಟೊಗಳನ್ನು ಹಾಕಿದ್ದಾರೆ. ನಂತರ ಅವರು ಅದಕ್ಕೆ ಒಟ್ಟು 31 ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಬೇಯಿಸಿದ್ದಾರೆ. ಇದಲ್ಲದೇ ಆಮ್ಲೆಟ್ ನಲ್ಲಿ ಹಲವು ವಸ್ತುಗಳನ್ನು ಬೆರೆಸಿ ಯಾರು ತಿಂದರೂ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸವಾಲು ಹಾಕುತ್ತಾರೆ.


ಇದನ್ನೂ ಓದಿ-


ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ food_founder_ ಹೆಸರಿನ ಐಡಿಯೊಂದಿಗೆ ಹಂಚಿಕೊಳ್ಳಲಾಗಿದ್ದು, ಇದನ್ನು ಇದುವರೆಗೆ  4 ಲಕ್ಷ 80 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, 15 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.


ಇದನ್ನೂ ಓದಿ-


ಇದೇ ವೇಳೆ ವೀಡಿಯೊವನ್ನು ನೋಡಿದ ನಂತರ, ಜನರು ತರಹೇವಾರಿ ಸ್ವಾರಸ್ಯಕರ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.  ‘ಈ ಆಮ್ಲೆಟ್ ತಿಂದು ನೇರವಾಗಿ ವೈದ್ಯರ ಬಳಿಗೆ ಹೋಗಬೇಕು’ ಎಂದು ಒಬ್ಬ ಬಳಕೆದಾರ ಬರೆದಿದ್ದರೆ, ಮತ್ತೊಬ್ಬ ಬಳಕೆದಾರ ಕೂಡ ‘ಇದನ್ನು ತಿಂದ ನಂತರ ಆಸ್ಪತ್ರೆಯಲ್ಲಿ 1 ಲಕ್ಷ ರೂಪಾಯಿ ಚಿಕಿತ್ಸೆಯೂ ಸಿಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ