Viral video: ಬೈಕ್ ನಲ್ಲಿ ತಮ್ಮೊಂದಿಗೆ ಮೊಸಳೆಯನ್ನು ಜಾಲಿ ರೈಡ್ ಕರೆದೊಯ್ದ ಯುವಕರು..ಅಬ್ಬಬ್ಬಾ ಇವರ ಸಾಹಸವನ್ನು ಮೆಚ್ಚಲೆ ಬೇಕು
boys carrying crocodile in bike: 3 ಈಡಿಯಟ್ಸ್ ಚಿತ್ರದ ಹಿಟ್ ಬೈಕ್ ದೃಶ್ಯವನ್ನು ನೆನಪಿಸುವಂತೆ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಮೊಸಳೆಯನ್ನು ಹೊತ್ತೂಯ್ಯುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಈ ಘಟನೆ ಗುಜರಾತ್‌ನಲ್ಲಿ ನಡೆದಿದ್ದು, ಯುವಕರ ಧೈರ್ಯ ನೋಡಿ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
boys carrying crocodile in bike: 3 ಈಡಿಯಟ್ಸ್ ಚಿತ್ರದ ಹಿಟ್ ಬೈಕ್ ದೃಶ್ಯವನ್ನು ನೆನಪಿಸುವಂತೆ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಮೊಸಳೆಯನ್ನು ಹೊತ್ತೂಯ್ಯುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಈ ಘಟನೆ ಗುಜರಾತ್‌ನಲ್ಲಿ ನಡೆದಿದ್ದು, ಯುವಕರ ಧೈರ್ಯ ನೋಡಿ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
ಭಾರತದಲ್ಲಿ ಇತ್ತೀಚಿನ ಪ್ರವಾಹ ಮತ್ತು ನಿರಂತರ ಮಳೆಯೊಂದಿಗೆ, ದೇಶದ ಹಲವಾರು ರಾಜ್ಯಗಳು ಕೆಲವು ಅಸಾಮಾನ್ಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿವೆ. ಇದೇ ರೀತಿಯ ಉದಾಹರಣೆಯಾಗಿ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಇನ್ನೂ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಇಬ್ಬರು ಯುವಕರು ಮೊಸಳೆಯನ್ನು ಬೈಕ್‌ನಲ್ಲಿ ಮೊಸಳೆಯನ್ನು ತಮ್ಮ ಮಧ್ಯದಲ್ಲಿಟ್ಟುಕೊಂಡು ಹೋಗುತ್ತಿರುವುದು ಹಿಟ್ ಚಿತ್ರ '3 ಈಡಿಯಟ್ಸ್'ನ ಬೈಕ್ ದೃಶ್ಯದಂತೆ ಕಂಡುಬಂದಿದೆ.
ಇದನ್ನೂ ಓದಿ: ಕಾಮನ ಬಿಲ್ಲನ್ನು ಹೋಲುವಂತಿದೆ ಈ ಹಾವು! ಸ್ವರ್ಗದಿಂದ ಧರೆಗಿಳಿದಂತಿದೆ ಧೈತ್ಯ ಹೆಬ್ಬಾವು
ಪೋಸ್ಟ್ ಪ್ರಕಾರ, ಈ ಮೊಸಳೆ ವಿಶ್ವಾಮಿತ್ರಿ ನದಿಯಲ್ಲಿ ಕಂಡುಬಂದಿದ್ದು, ಮಳೆಯ ಕಾರಣದಿಂದಾಗಿ ಈ ಪ್ರದೇಶದಲ್ಲಿ ಇತ್ತೀಚೆಗೆ ಮೊಸಳೆಗಳು ಆಗಾಗ ಕಾಣಿಸಿಕೊಂಡಿದೆ. ಮತ್ತೊಂದೆಡೆ ತಮ್ಮ ಬಳಿ ಕಾಣಿಸಿಕೊಂಡ ಮೊಸಳೆಯನ್ನು ಯುವಕರು ಅರಣ್ಯ ಇಲಾಖೆ ಕಚೇರಿಗೆ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.
ಇನ್ನೂ ಈ ಘಟನೆ ನಡೆದಿರುವುದ ಯಾವ ದಿನ ಎಂದು ಖಚಿತವಾಗಲಿಲ್ಲ, ಆದರೆ ಈ ವಿಷಯವು ವಡೋದರಾದಲ್ಲಿ ನಡೆದಿದೆ. ಈ ವಿಡಿಯೋ ಶೇರ್ ಆದ ನಂತರ ವೈರಲ್ ಆಗಿದ್ದು, ಜನರು ಕಾಮೆಂಟ್‌ಗಳ ಮಹಾಪೂರವನ್ನೆ ಹರಿಸುತ್ತಿದ್ದಾರೆ.
ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು
ಹೆಚ್ಚಿನವರು ಗುಜರಾತಿನ ಮಳೆಯ ನಡುವೆ ವನ್ಯಪ್ರಾಣಿಗಳ ಬಗ್ಗೆ, ಧೈರ್ಯಶಾಲಿ ಮತ್ತು ಸಹಾನುಭೂತಿ ಹೊಂದಿದ್ದಾರೆ ಎಂದು ಕಂಡುಹಿಡಿದರು, ಉಳಿದವರು ಅದೇ ಬಗ್ಗೆ ಲಘುವಾದ ಹಾಸ್ಯವನ್ನು ಹಂಚಿಕೊಂಡರು. ಭಾರತದಲ್ಲಿ ಅಸಾಧಾರಣವಾಗಿ ನಿಲ್ಲದ ಮಳೆ ಮತ್ತು ಮಳೆನೀರಿನ ಪ್ರವಾಹದ ಕುರಿತು ಕೆಲವರು ಕಾಮೆಂಟ್ ಮಾಡಿದ್ದಾರೆ.
ವೀಡಿಯೊವನ್ನು ಎಕ್ಸ್‌ನಲ್ಲಿ 'ದೀಕ್ಷಿತ್ ಗುಜರಾತ್' ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದ್ದು, ವಾಸ್ತವವಾಗಿ, ಇಬ್ಬರು ಯುವಕರು ವಿಶ್ವಾಮಿತ್ರ ನದಿಯಿಂದ ಹೊರಬಂದ ಮೊಸಳೆಯನ್ನು ಅರಣ್ಯ ಇಲಾಖೆ ಕಚೇರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಎರಡು ದಿನಗಳ ಹಿಂದೆ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಯೋ 55K ವೀಕ್ಷಣೆಗಳನ್ನು ಪಡೆದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.